ಮಕ್ಕಳ ಸಂತೆ ಸ್ಫರ್ಧೋತ್ಸವ

ದಾವಣಗೆರೆ, ಮೇ 8- ನಗರದ ಅನ್ವೇಷಕರು ಆರ್ಟ್ ಫೌಂಡೇಷನ್ ವತಿಯಿಂದ ಭಾನುವಾರ ನಗರದ ಗುರುಭವನದ ಎದುರು ಮಕ್ಕಳ ಸಂತೆ ಸ್ಪರ್ಧೋತ್ಸವ ಆಚರಿಸಲಾಯಿತು.

ಬೇಸಿಗೆ ಶಿಬಿರದ ಅಂಗವಾಗಿ ಮಕ್ಕಳಲ್ಲಿ ವ್ಯವಹಾರ ಕುರಿತು ತಿಳುವಳಿಕೆ ಮೂಡಿಸಲು ಮಕ್ಕಳ ಸಂತೆ ಆಯೋಜಿಸಲಾಗಿತ್ತು ಎಂದು ಸಂಸ್ಥೆಯ ಎಸ್.ಎಸ್ ಸಿದ್ದರಾಜು ತಿಳಿಸಿದ್ದಾರೆ. ಮಕ್ಕಳಿಗೆ ವಸ್ತುಗಳ ಖರೀದಿ ಬಗ್ಗೆ ಗೊತ್ತಿರುತ್ತದೆ. ಆದರೆ, ಮಾರಾಟದ ಬಗ್ಗೆ ಹಾಗೂ ವ್ಯವಹಾರದ ಬಗ್ಗೆ ಗೊತ್ತಿರುವುದಿಲ್ಲ. ಹೀಗಾಗಿ ಅವರಿಗೆ ವ್ಯವಹಾರದ ಬಗ್ಗೆ ಅರಿವು ಮೂಡಿಸಲು ಮಕ್ಕಳ ಸಂತೆ ಆಯೋಜಿಸಲಾಗಿತ್ತು ಎಂದವರು ಹೇಳಿದ್ದಾರೆ. 

ಮಕ್ಕಳು ಮನೆಯಲ್ಲಿ ತಯಾರಿಸಿದ ತಿನಿಸುಗಳಿಂದ ಹಿಡಿದು ಹಲವಾರು ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. 25 ಮಕ್ಕಳು ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!