ಬಕೆಟ್, ಪೆನ್‌ಡ್ರೈವ್, ಸಿಲಿಂಡರ್

ಬಕೆಟ್, ಪೆನ್‌ಡ್ರೈವ್, ಸಿಲಿಂಡರ್

ಅಭ್ಯರ್ಥಿಗಳಿಗೆ ಸಂಖ್ಯೆ, ಚಿಹ್ನೆ ಹಂಚಿಕೆ ಮಾಡಿದ ಆಯೋಗ

ದಾವಣಗೆರೆ, ಏ.23- ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 30 ಅಭ್ಯರ್ಥಿಗಳಿದ್ದು, ಎಲ್ಲಾ ಅಭ್ಯರ್ಥಿಗಳಿಗೂ ಕ್ರಮಸಂಖ್ಯೆ ಹಾಗೂ ಪಕ್ಷವಾರು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. 

ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು: 

1. ಗಾಯತ್ರಿ ಸಿದ್ದೇಶ್ವರ- ಭಾರತೀಯ
ಜನತಾ ಪಾರ್ಟಿ (ಕಮಲ), 2. ಡಾ. ಪ್ರಭಾ ಮಲ್ಲಿಕಾರ್ಜುನ್-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಹಸ್ತ), 3. ಡಿ.ಹನುಮಂತಪ್ಪ, ಬಹುಜನ ಸಮಾಜ ಪಾರ್ಟಿ (ಆನೆ) 

ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು: 

4. ಈಶ್ವರ ಶೇಂಗಾ-ಉತ್ತಮ ಪ್ರಜಾಕೀಯ ಪಾರ್ಟಿ (ಚಪ್ಪಲಿಗಳು), 5. ಅಣಬೇರು ತಿಪ್ಪೇಸ್ವಾಮಿ – ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), (ಆಟೋ-ರಿಕ್ಷಾ), 6. ಎಂ.ಪಿ.ಖಲಂದರ್-ಕಂಟ್ರಿ ಸಿಟಿಜನ್ ಪಾರ್ಟಿ, (ತೆಂಗಿನ ತೋಟ) 7. ದೊಡ್ಡೇಶಿ ಹೆಚ್.ಎಸ್-ಜನಹಿತ ಪಕ್ಷ, (ಸ್ಟೆತಸ್ಕೋಪ್) 8.ರುದ್ರೇಶ್ ಕೆ.ಹೆಚ್-ಸಮಾಜ ವಕಾಸ ಕ್ರಾಂತಿ ಪಾರ್ಟಿ (ವಿದ್ಯುತ್ ಕಂಬ), 9. ವೀರೇಶ್.ಎಸ್ (ಲಯನ್ ವೀರೇಶ್) -ರಾಣಿ ಚೆನ್ನಮ್ಮ ಪಾರ್ಟಿ, (ಉಂಗುರ), 10. ಕೆ.ಎಸ್.ವೀರಭದ್ರಪ್ಪ-ಕರ್ನಾಟಕ ರಾಷ್ಟ್ರ ಸಮಿತಿ (ಬ್ಯಾಟರಿ ಟಾರ್ಚ್), 11. ಎಂ.ಜಿ.ಶ್ರೀಕಾಂತ್-ನವಭಾರತ ಸೇನಾ, (ಬೆಂಕಿ ಪೊಟ್ಟಣ) 12. ಎಂ.ಸಿ.ಶ್ರೀನಿವಾಸ್- ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, (ಏಳು ಕಿರಣಗಳಿರುವ ಪೆನ್ನಿನ ನಿಬ್)

ಪಕ್ಷೇತರ ಅಭ್ಯರ್ಥಿಗಳು: 

13. ಅಬ್ದುಲ್ ನಜೀರ್ ಅಹಮದ್  (ರೋಡ್ ರೋಲರ್) 14. ಎ.ಕೆ.ಗಣೇಶ್ (ಬೀಸುಕಲ್ಲು) 15. ಜಿ.ಎಂ.ಗಾಯತ್ರಿ ಸಿದ್ದೇಶಿ, (ಹೂ ಕೋಸು) 16. ಟಿ.ಚಂದ್ರು (ಗ್ರಾಮ ಫೋನ್) 17. ಟಿ.ಜಬೀನಾ ಆಪಾ (ಕಲ್ಲಂಗಡಿ), 18. ತಸ್ಲೀಮ್ ಬಾನು  (ಬ್ಯಾಟ್), 19. ಪರವೀಜ್ ಹೆಚ್ (ವಜ್ರ) 20. ಪೆದ್ದಪ್ಪ.ಎಸ್ (ಕೇರಂ ಬೋರ್ಡ್) 21. ಬರಕತ್‌ ಅಲಿ (ಅಲಮಾರು) 22. ಜಿ.ಎಂ.ಬರ್ಕತ್ ಅಲಿ ಬಾಷ  (ಗಿಫ್ಟ್‍ಪ್ಯಾಕ್) 23. ಮಹಬೂಬ್ ಬಾಷ (ಸ್ಪಾನರ್) 24. ಮೊಹ್ಮದ್ ಹಯಾತ್.ಎಂ (ಬ್ಯಾಟ್ಸ್‌ಮನ್) 25. ಮಂಜು ಮಾರಿಕೊಪ್ಪ (ಟ್ರಕ್), 26. ರವಿನಾಯ್ಕ.ಬಿ  (ಕರಣೆ) 27. ರಷೀದ್ ಖಾನ್ (ದೂರವಾಣಿ)  28. ಜಿ.ಬಿ.ವಿನಯ್ ಕುಮಾರ್ (ಗ್ಯಾಸ್ ಸಿಲಿಂಡರ್)  29. ಸಲೀಂ.ಎಸ್ (ಪೆನ್‍ಡ್ರೈವ್ ) ಹಾಗೂ 30. ಸೈಯದ್ ಜಬೀವುಲ್ಲಾ.ಕೆ (ಬಕೆಟ್ )ಚಿಹ್ನೆಯಾಗಿದೆ. 

error: Content is protected !!