Category: ಹರಿಹರ

ಕಾಯಕದಲ್ಲಿ ಭಕ್ತಿ, ನಂಬಿಕೆ ಇದ್ದಲ್ಲಿ ಯಶಸ್ಸು ನಿಶ್ಚಿತ

ಮಲೇಬೆನ್ನೂರು : ನಾವು ಮಾಡುವ ಕಾಯಕ – ಕೆಲಸದಲ್ಲಿ ಭಕ್ತಿ-ಪ್ರೀತಿ-ಪ್ರೇಮ ಇರಬೇಕು. ಆಗ ಮಾತ್ರ ಆ ಕೆಲಸದಲ್ಲಿ ನೀವು ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.

ಹರಿಹರದಲ್ಲಿ ಇಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರೋಡ್‌ ಶೋ

ಹರಿಹರ : ರಾಜ್ಯ ಬಿಜೆಪಿ  ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಾಳೆ ದಿನಾಂಕ 25 ರ ಗುರುವಾರ ನಗರಕ್ಕೆ ಆಗಮಿಸಿ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜಶೇಖರ್ ನಾಗಪ್ಪ ಹೇಳಿದರು.

ಕೊಮಾರನಹಳ್ಳಿಯಲ್ಲಿ ಸಂಭ್ರಮದ ಬ್ರಹ್ಮ ರಥೋತ್ಸವ

ಮಲೇಬೆನ್ನೂರು : ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವವು ಮಂಗಳವಾರ ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಜರುಗಿತು

ನೇಹಾ ಹತ್ಯೆ ಖಂಡಿಸಿ ಹರಿಹರದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ

ಹರಿಹರ : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಿ, ತಹಶೀ ಲ್ದಾರ್ ಗುರು ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. 

ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಅರ್ಜಿ

ಮಲೇಬೆನ್ನೂರು : ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿದ್ದ ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರು ಮಂಗಳವಾರ ಅಧಿಕಾರಿಗಳ ಭರವಸೆಯ ಮೇರೆಗೆ ಮತದಾನ ಮಾಡುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಗ್ರಾಮದೇವತೆ ಹಬ್ಬದಲ್ಲಿ ಪ್ರಾಣಿ ಬಲಿ ನಿಲ್ಲಬೇಕು : ರಟ್ಟಿಹಳ್ಳಿ ಶ್ರೀ

ಮಲೇಬೆನ್ನೂರು : ಎಷ್ಟೇ ಬರಗಾಲವಿದ್ದರೂ ಜನರಲ್ಲಿ ಭಕ್ತಿಗೆ ಬರವಿಲ್ಲ ಎಂಬುದಕ್ಕೆ ಜಿಗಳಿ ಗ್ರಾಮಸ್ಥರು ಎರಡು ಹೊಸ ದೇವಸ್ಥಾನಗಳನ್ನು ಕಟ್ಟಿಸಿರುವುದೇ ಸಾಕ್ಷಿಯಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

70 ವರ್ಷಗಳಲ್ಲಿ ಆಗದ ಕೆಲಸಗಳನ್ನು ಮೋದೀಜಿ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ

ಮಲೇಬೆನ್ನೂರು : ಸರಿಯಾದ ನಾಯಕತ್ವದಿಂದ ಒಂದು ದೇಶ ಪ್ರಗತಿ ಸಾಧಿಸಲು ಸಾಧ್ಯ. ಅಂತಹ ನಾಯಕ ನರೇಂದ್ರ ಮೋದಿ ಅವರಿಂದಾಗಿ ಭಾರತ ವಿಕಸಿತಗೊಂಡಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ನೇಹಾ ಹತ್ಯೆ ಖಂಡಿಸಿ ಮಲೇಬೆನ್ನೂರಿನಲ್ಲಿ ಪ್ರತಿಭಟನೆ

ಮಲೇಬೆನ್ನೂರು : ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಯುವತಿ ಹತ್ಯೆ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನಿದ್ದಾರೆ, ಗೃಹಮಂತ್ರಿ ಜಿ. ಪರಮೇಶ್ವರ ಅವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಸತೀಶ್‌ ಪೂಜಾರಿ ಖಂಡಿಸಿದರು.

ಜಿಗಳಿಯಲ್ಲಿ ಇಂದು ನೂತನ ದೇವಸ್ಥಾನಗಳ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ

ಮಲೇಬೆನ್ನೂರು ಸಮೀ ಪದ ಜಿಗಳಿ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿರುವ ಶ್ರೀ ಕಲ್ಲೇ ಶ್ವರ ದೇವಸ್ಥಾನ ಮತ್ತು ಗ್ರಾಮ ದೇವತೆ ಶ್ರೀ ಉಡುಸಲಮ್ಮದೇವಿ ದೇವಸ್ಥಾನಗಳ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾ ರಂಭವನ್ನು ಇಂದು ಹಮ್ಮಿಕೊಳ್ಳ ಲಾಗಿದೆ. 

ನೇಹಾ ಪ್ರಕರಣ : ಹರಿಹರದಲ್ಲಿ ಪ್ರತಿಭಟನೆ

ಹರಿಹರ : ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕೊಲೆ ಮಾಡಿರುವುದು ಖಂಡನೀಯ. ಕೃತ್ಯವನ್ನು ಎಸಗಿರುವ ವ್ಯಕ್ತಿಯನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ಧಿ ಸಂಸ್ಥೆ ವತಿಯಿಂದ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಅರ್ಪಿಸಿದರು.

ಕೊಕ್ಕನೂರು ಹನುಮಪ್ಪನಿಗೆ ಭಕ್ತರಿಂದ ನೋಟಿನ ಹಾರ

ಮಲೇಬೆನ್ನೂರು : ಮಳೆ – ಬೆಳೆ ಇಲ್ಲದೇ ಬರಗಾಲ ಎದುರಿಸುತ್ತಿರುವ ಕೊಕ್ಕನೂರಿನ ಗ್ರಾಮಸ್ಥರು ತಮ್ಮ ನೆಚ್ಚಿನ ಹನುಮಪ್ಪನಿಗೆ ನೋಟಿನ ಹಾರಗಳನ್ನು ಹಾಕುವ ಮೂಲಕ ಭಕ್ತಿಗೆ ಬರವಿಲ್ಲ ಎಂಬುದನ್ನು ಶುಕ್ರವಾರ ಸಾಬೀತು ಮಾಡಿದ್ದಾರೆ. 

error: Content is protected !!