ಜಿಗಳಿಯಲ್ಲಿ ಇಂದು ನೂತನ ದೇವಸ್ಥಾನಗಳ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ

ಜಿಗಳಿಯಲ್ಲಿ ಇಂದು ನೂತನ ದೇವಸ್ಥಾನಗಳ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ

ಮಲೇಬೆನ್ನೂರು ಸಮೀ ಪದ ಜಿಗಳಿ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿರುವ ಶ್ರೀ ಕಲ್ಲೇ ಶ್ವರ ದೇವಸ್ಥಾನ ಮತ್ತು ಗ್ರಾಮ ದೇವತೆ ಶ್ರೀ ಉಡುಸಲಮ್ಮದೇವಿ ದೇವಸ್ಥಾನಗಳ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾ ರಂಭವನ್ನು ಇಂದು ಹಮ್ಮಿಕೊಳ್ಳ ಲಾಗಿದೆ.  ಮುಂಜಾನೆ 3.30 ರಿಂದ 4.30 ರವರೆಗೆ ಗಂಗಾಪೂಜೆ, ಗಣಪತಿ ಪೂಜೆ, ಕಳಸಧಾರಣೆ, ನವಗ್ರಹ ಶಾಂತಿ ಹೋಮ, ಹವನ ಅಷ್ಟೋತ್ತರ ಮಹಾಮಂಗಳಾರತಿ ನಂತರ ಶ್ರೀ ಕಲ್ಲೇಶ್ವರ ದೇವರ ಶಿಲಾ ಮೂರ್ತಿಯನ್ನು ನಂದಿಗುಡಿ ಮಠದ ವಟುಗಳಿಂದ ನೆರವೇರಿಸಲಾಗುವುದು. 

ಬೆಳಿಗ್ಗೆ 5ಕ್ಕೆ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಮಲೇಬೆನ್ನೂರಿನ ಶ್ಯಾಮ ಸುಂದರ್ ಜೋಯ್ಸ್, ಎಂ.ಡಿ. ಮುರುಳೀಧರ ರಾವ್ ಮತ್ತು ಸಂಗಡಿಗರು ನೆರವೇರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಎರಡೂ ದೇವಸ್ಥಾನಗಳಿಗೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಚಾರ್ಯ ಸ್ವಾಮೀಜಿ, ಯಲಹಟ್ಟಿ ಶ್ರೀಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಕಳಸಾರೋಹಣ ಮಾಡುವರು.

error: Content is protected !!