ನೇಹಾ ಪ್ರಕರಣ : ಹರಿಹರದಲ್ಲಿ ಪ್ರತಿಭಟನೆ

ನೇಹಾ ಪ್ರಕರಣ : ಹರಿಹರದಲ್ಲಿ ಪ್ರತಿಭಟನೆ

ಹರಿಹರ, ಏ. 21 – ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕೊಲೆ ಮಾಡಿರುವುದು ಖಂಡನೀಯ. ಕೃತ್ಯವನ್ನು ಎಸಗಿರುವ ವ್ಯಕ್ತಿಯನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ಧಿ ಸಂಸ್ಥೆ ವತಿಯಿಂದ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಕಾರ್ತಿಕ್ ಸಾಂಸ್ಕೃತಿಕ ಸೇವಾ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಕವಿತಾ ಮಲ್ಲಿಕಾರ್ಜುನ್ ಮಾತನಾಡಿ, ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಘಟನೆ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಗೆ ಕೊಡಿಸಬೇಕು ? ಎಂದು ಪೋಷಕರು ಆತಂಕವನ್ನು ಪಟ್ಟುಕೊಳ್ಳುವಂತಹ ಘಟನೆ ನಡೆದಿದ್ದು, ಇದು ನಿಜಕ್ಕೂ ಸಮಾಜಕ್ಕೆ ಒಂದು ಸವಾಲಾಗಿ ಪರಿಣಮಿ ಸಿದೆ. ಆದ್ದರಿಂದ ಇಂತಹ ಕೃತ್ಯಗಳು ಮರುಕಳಿಸದಂತೆ ಮಾಡಬೇಕಾದರೆ ಆರೋಪಿ ಫಯಾಜ್‌ಗೆ ನ್ಯಾಯಲಯವು ಜಾಮೀನು ಕೊಡದೇ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಸುಮನ್, ಡಾ ಖಮಿತ್ಕರ್ ನಂದೀಶ್, ಮಮತಾ, ಬಸವರಾಜ್ ಜಿ.ಹೆಚ್. ಅಂಬುಜಾ, ಪಿ.ರಾಜೊಳ್ಳಿ, ವೀರೇಶ್ ಅಜ್ಜಣ್ಣನವರ್, ಕವಿತಾ ಪೇಟೆಮಠ ಇತರರು ಹಾಜರಿದ್ದರು.

error: Content is protected !!