ಉಕ್ಕಡಗಾತ್ರಿಯಲ್ಲಿ ಆಲಿಕಲ್ಲು ಮಳೆ

ಉಕ್ಕಡಗಾತ್ರಿಯಲ್ಲಿ ಆಲಿಕಲ್ಲು ಮಳೆ

ಮಲೇಬೆನ್ನೂರು, ಏ.22- ಉಕ್ಕಡಗಾತ್ರಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ನಂದಿಗುಡಿ, ಗೋವಿನಹಾಳ್, ಹಿಂಡಸಘಟ್ಟ, ಕೊಕ್ಕನೂರು, ಕೆ.ಎನ್.ಹಳ್ಳಿ, ವಾಸನ, ಮಳಲಹಳ್ಳಿ, ಪಾಳ್ಯ, ಎಳೆಹೊಳೆ, ಸಿರಿಗೆರೆಯಲ್ಲೂ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜಿ.ಬೇವಿನಹಳ್ಳಿ, ಜಿಗಳಿ, ಕುಂಬಳೂರು, ಮಲೇಬೆನ್ನೂರಿನಲ್ಲಿ ಮಳೆಯ ಸಿಂಚನವಾಗಿದೆ.

error: Content is protected !!