ಮಲೇಬೆನ್ನೂರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಹಾಲಿಂಗಪ್ಪ

ಮಲೇಬೆನ್ನೂರು, ಏ.15- ಇಲ್ಲಿನ ಪುರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ 9 ನೇ ವಾರ್ಡ್‌ನ ಸದಸ್ಯ ಮಹಾಲಿಂಗಪ್ಪ ಇಂದು ಸಾಮಾನ್ಯ ಸಭೆಯ ನಂತರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಾಂತೇಶ್ ಸ್ವಾಮಿ ಅವರ ರಾಜೀನಾಮೆಯಿಂದಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಈ ಸ್ಥಾನಕ್ಕೆ ಮಹಾಲಿಂಗಪ್ಪ ಅವರು ಆಯ್ಕೆಯಾಗಿದ್ದಾರೆ.  ನೂತನ ಅಧ್ಯಕ್ಷರನ್ನು ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸದಸ್ಯರಾದ ಬಿ.ಎಂ. ಚನ್ನೇಶ್ ಸ್ವಾಮಿ, ಬಿ. ಸುರೇಶ್, ಎ. ಆರೀಫ್ ಅಲಿ, ಸುಬ್ಬಿ ರಾಜಪ್ಪ, ಮಾಸಣಗಿ ಶೇಖರಪ್ಪ, ಮಹಾಂತೇಶ್ ಸ್ವಾಮಿ, ಸಾಕಮ್ಮ ರವಿಕುಮಾರ್, ಶಮೀಮ್‌ ಬಾನು, ನಾಮಿನಿ ಸದಸ್ಯರಾದ ಪಿ.ಆರ್. ರಾಜು, ಬಿ.ಹೆಚ್. ಮಂಜಪ್ಪ, ಟಿ. ವಾಸಪ್ಪ, ಎ.ಕೆ. ಲೋಕೇಶ್, ಮುಖ್ಯಾಧಿಕಾರಿ ದಿನಕರ್ ಹಾಗು ಇನ್ನಿತರರು ಮಹಾಲಿಂಗಪ್ಪ ಅವರನ್ನು ಅಭಿನಂದಿಸಿದರು.

error: Content is protected !!