ಕೊಟ್ಟೂರೇಶ್ವರ ಸ್ವಾಮಿ ತೇರುಗಾಲಿ ಹೊರಕ್ಕೆ

ಕೊಟ್ಟೂರೇಶ್ವರ ಸ್ವಾಮಿ ತೇರುಗಾಲಿ ಹೊರಕ್ಕೆ

ಕೊಟ್ಟೂರು, ಫೆ. 3 – ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವದ ಪ್ರಯುಕ್ತ ಸೋಮವಾರ ತೇರುಗಾಲಿಯನ್ನು ಸಂಜೆ 5 ಗಂಟೆಗೆ ಹೊರಗೆ ಹಾಕಿದರು. 

ಇದೇ ದಿನಾಂಕ 22 ರಂದು ವಿಜೃಂಭಣೆಯಿಂದ ಜರುಗಲಿರುವ ಮಹಾ ರಥೋತ್ಸವದ ಪ್ರಯುಕ್ತ ಸಂಜೆ ಹಿರೇಮಠದಿಂದ ವಾದ್ಯ ಮೇಳದೊಂದಿಗೆ ತೇರುಗಡ್ಡೆಯಿಂದ ಬಸ್ ನಿಲ್ದಾಣದ ಹತ್ತಿರ ಬಂದು ಸುಸೂತ್ರವಾಗಿ ತಲುಪಿತು.

ಸಕಲ ಬಿರುದಾವಳಿಗಳ ಮೂಲಕ ಶ್ರೀ ಸ್ವಾಮಿಯ ನೆರೆದಿದ್ದ ಭಕ್ತರು ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ… ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್… ಎಂಬ ಜಯ ಘೋಷ ಮೊಳಗಿಸುತ್ತ ರಥದ ಗಡ್ಡೆಯನ್ನು ಹೊರಹಾಕಲಾಯಿತು.

ಕ್ರಿಯಾ ಮೂರ್ತಿಗಳಾದ ಶಿವ ಪ್ರಕಾಶ ದೇವರು ರಥದ ಗಡ್ಡೆಯನ್ನು ಹತ್ತಿ ಸುಗಮವಾಗಿ ತೇರುಗಾಲಿ ಹೊರ ಹಾಕಲಾಯಿತು. ಶ್ರೀ ಸ್ವಾಮಿಗೆ ಕಂಕಣ ಧಾರಣೆ ಹಾಗೂ ರಾತ್ರಿ ರಥದ ಹತ್ತಿರ ಗುಗ್ಗರಿ ಪೂಜೆ ಕಾರ್ಯ ನಡೆಯುತ್ತದೆ.

error: Content is protected !!