ಜಿಲ್ಲೆಯಲ್ಲಿ ಒಂದೇ ದಿನ 40 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ಒಂದೇ ದಿನ ಕಂಡು ಬಂದಿರುವುದಷ್ಟೇ ಅಲ್ಲದೇ, ಸಾಕಷ್ಟು ವ್ಯಾಪಕವಾಗಿ ಕೊರೊನಾ ಹರಡಿರುವುದೂ ಕಂಡು ಬಂದಿದೆ.
ಶಿಷ್ಯ ವೇತನಕ್ಕಾಗಿ 11ನೇ ದಿನಕ್ಕೆ ವೈದ್ಯ ವಿದ್ಯಾರ್ಥಿಗಳ ಮುಷ್ಕರ : ತಟ್ಟೆ ಸದ್ದು ಮಾಡಿ ಸರ್ಕಾರಕ್ಕೆ ಕೂಗು
ಶಿಷ್ಯ ವೇತನಕ್ಕಾಗಿ ಆಗ್ರಹಿಸಿ, ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋ ತ್ತರ ಹಾಗೂ ಗೃಹ ವೈದ್ಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ತೀವ್ರಗೊಳಿ ಸಿದ್ದು, ದಿನೇ ದಿನೇ ವಿಭಿನ್ನವಾಗಿ ಹೋರಾಟ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಉಪಾಧ್ಯಕ್ಷ
ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷರಾಗಿ ಮಧ್ಯ ಕರ್ನಾಟಕದ ದಾವಣಗೆರೆಯ 'ಜನತಾವಾಣಿ' ಸಂಪಾದಕ ಎಂ.ಎಸ್. ವಿಕಾಸ್ ಆಯ್ಕೆಯಾಗಿದ್ದಾರೆ.
ನಕಲಿ ಕಾರ್ಡ್ ಬಳಸಿ ಖಾತೆ ಹಣಕ್ಕೆ ಕನ್ನ: ವಂಚಕರ ಸೆರೆ
ಎಟಿಎಂ ಕಾರ್ಡ್ ಬಳಕೆ ಗೊತ್ತಿಲ್ಲದವರ ಮೇಲೆ ಕಣ್ಣಿಟ್ಟು ಸಂಚು ರೂಪಿಸಿ ಹಣ ಬಿಡಿಸಿಕೊಡುವುದಾಗಿ ನಂಬಿಸಿ ನಕಲಿ ಎಟಿಎಂ ಕಾರ್ಡ್ ಗಳ ಮುಖೇನ ಕಾರ್ಡ್ ದಾರರ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಗಣೇಶನ ಮೂರ್ತಿ ತಯಾರಿಕೆಗೆ ವಿಘ್ನ
ವಿಘ್ನ ನಿವಾರಕ ವಿನಾಯಕನ ಚತುರ್ಥಿಗೆ ಕೊರೊನಾ ವಿಘ್ನ ಎದುರಾಗಿದೆ. ಈ ಬಾರಿ ಗಣೇಶನ ಮೂರ್ತಿಗೆ ಮಣ್ಣು ತರುವುದರಿಂದಲೇ ವಿಘ್ನಗಳು ಆರಂಭವಾಗಿವೆ.
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ, ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ, ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.
ಶಿಷ್ಯ ವೇತನ ಸರ್ಕಾರವೇ ಕೊಡಬೇಕು: ಎಸ್ಸೆಸ್
ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯ ವೇತನ ನೀಡಬೇಕು, ನಮ್ಮಿಂದ ಕೊಡಲಾಗದು ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿಗಳೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.
ಜಾನಪದ ನೃತ್ಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಮಂಡ್ಯ ಪ್ರಥಮ
ನಗರದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಕಲಾವಿದರು ಜಾನಪದ ನೃತ್ಯ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
ನಗರದಲ್ಲಿ ಇಂದು ಹೈನುಗಾರಿಕೆ ತರಬೇತಿ
ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ, ಆಧುನಿಕ ಹೈನುಗಾರಿಕೆ, ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ.
ನಾಳೆ ಮಹಾನಗರ ಪಾಲಿಕೆ ಆಯವ್ಯಯ ಸಲಹಾ ಸಭೆ
ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯವ್ಯಯ ತಯಾರಿಸಲು ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆ ಪಡೆಯಲು ನಾಡಿದ್ದು ದಿನಾಂಕ 8 ರಂದು ಬೆಳಿಗ್ಗೆ 11 ಗಂಟೆಗೆ ಮೇಯರ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಎರಡನೇ ಸಭೆ ಕರೆಯಲಾಗಿದೆ.
ಪಾಲಿಕೆಯ ನಿವೃತ್ತ ನೌಕರರಿಗೆ 2 ವರ್ಷದ ಅರ್ಹತಾದಾಯಕ ಬಡ್ತಿ ನೀಡಲು ಒತ್ತಾಯ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ನಗರಕ್ಕೆ ಇಂದು ಬಿಜೆಪಿ ಸತ್ಯ ಶೋಧನಾ ತಂಡ
ನಗರಕ್ಕೆ ಇಂದು ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ ನೀಡಲಿದ್ದು, ಬೆಳಿಗ್ಗೆ 10.30 ಕ್ಕೆ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಲಿದ್ದು. ನಂತರ 11.45 ಕ್ಕೆ ಎಸ್.ಎಂ. ಕೃಷ್ಣ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಮಧ್ಯಾಹ್ನ 12.30 ಕ್ಕೆ ಸಿ.ಜಿ. ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ
ವೃತ್ತಿಪರ ತರಬೇತಿ ಅರ್ಜಿ ಆಹ್ವಾನ
ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಮೈಸೂರಿನಲ್ಲಿ ವಿವಿಧ ವೃತಿಪರ ಯೋಜ ನೆಗಳಿಗೆ ತರಬೇತಿ ನೀಡಲಾಗುವುದು.
ಭದ್ರಾ ನಾಲೆಗಳ ಆಧುನೀಕರಣಕ್ಕೆ ಭಾರತೀಯ ರೈತ ಒಕ್ಕೂಟದ ಆಗ್ರಹ
ಭದ್ರಾ ನಾಲೆಗಳ ಆಧುನೀಕರಣ ಹಾಗೂ ಭದ್ರಾ ಅಣೆಕಟ್ಟೆಯಲ್ಲಿ ನೀರು ಸೋರಿಕೆಯಾಗುವುದನ್ನು ತಡೆಯಲು ಗ್ರೌಟಿಂಗ್ ಮಾಡುವಂತೆ ಭಾರತೀಯ ರೈತ ಒಕ್ಕೂಟ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಯುವ ಜನೋತ್ಸವದಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುವ ಜನೋತ್ಸವದಲ್ಲಿ ಕಥೆ ಹಾಗೂ ಕವನ ಬರೆಯುವ ಸ್ಪರ್ಧೆ ಕೇವಲ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾಡಲಾಗಿದೆ. ಕನ್ನಡ ಭಾಷೆಗೆ ಆದ್ಯತೆ ನೀಡಿಲ್ಲ.
ಶ್ಯಾಗಲೆಯಲ್ಲಿ ಇಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ - ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶ್ಯಾಗಲೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳ ಕಡೆಗಣನೆ
ಇದೇ ದಿನಾಂಕ 11 ಮತ್ತು 12 ರಂದು ಜಗಳೂರಿನಲ್ಲಿ ನಡೆಯಲಿರುವ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಅರ್ಜಿ ಆಹ್ವಾನ
ಎಸ್ಬಿಐ ಮತ್ತು ಇತರೆ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೈಸೂರಿನ ಕೇಂದ್ರ ಕಚೇರಿಯಲ್ಲಿ 45 ದಿನಗಳ ತರಬೇತಿಯನ್ನು ನಡೆಸಲಾಗುವುದು.
ನಗರದಲ್ಲಿ ಇಂದು ಫುಡ್ ಫೆಸ್ಟ್
ಭದ್ರಾ ಸಮೂಹ ಶಿಕ್ಷಣ ಸಂಸ್ಥೆಯ 2024-25ನೇ ಸಾಲಿನ ಭದ್ರಾ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಆವರಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ನಗರದ ಅನ್ವಯ ಆಸ್ಪತ್ರೆಯಲ್ಲಿ ಇಂದು ಕ್ಯಾನ್ಸರ್ ತಪಾಸಣೆ
ಅನ್ವಯ ಆಯುರ್ವೇದ ಆಸ್ಪತ್ರೆ, ಗೋಸೇವಾ ಗತಿವಿಧಿ ಕರ್ನಾಟಕ ಹಾಗೂ ಮಾ ಗೋ ಪ್ರಾಡಕ್ಟ್ಸ್ ಪ್ರೈ.ಲಿ., ಇವರ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ್ಗೆ ಪಂಚಗವ್ಯ ಆಧಾರಿತ ಆಯುರ್ವೇದ ಚಿಕಿತ್ಸೆ ಮತ್ತು ಸಮಾಲೋಚನಾ ಶಿಬಿರವನ್ನು ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಳ್ಳಲಾಗಿದೆ.
ಕಲಾಕುಂಚದಿಂದ ಸಂಕ್ರಾಂತಿ ಕವಿಗೋಷ್ಠಿಗೆ ಆಹ್ವಾನ
ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ಇದೇ ದಿನಾಂಕ 11 ರ ಮಂಗಳವಾರ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಸಂಕ್ರಾಂತಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ
ಕೆ.ಎನ್.ಹಳ್ಳಿ ಪಿಎಸಿಎಸ್ ಚುನಾವಣೆ : 9 ಜನ ಆಯ್ಕೆ
ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 9 ಜನ ಆಯ್ಕೆಯಾಗಿದ್ದಾರೆ.
ನ್ಯಾಮತಿ ತಾ.ಗೆ ಆಹಾರ ಧಾನ್ಯ ಹಂಚಿಕೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನ್ಯಾಮತಿ ತಾಲ್ಲೂಕಿನ ಪಡಿತರ ಚೀಟಿದಾರರಿಗೆ ಡಿಸೆಂಬರ್ ಮಾಹೆಯಲ್ಲಿ ಬಿಡುಗಡೆಯಾದ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ
ಭಾರತೀಯ ರೈತ ಒಕ್ಕೂಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಡಿಎಸ್ಎಸ್ ಸೇರಿದಂತೆ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ನಾಳೆ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ನಿಶ್ಚಿತ ಗೌರವ ಧನ ನೀಡಬೇಕೆಂಬುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಾಡಿದ್ದು ದಿನಾಂಕ 7 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಷಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು ಪಾರಂಪರಿಕ ವೈದ್ಯ ಪರಿಷತ್ನ 25ನೇ ಸಂಸ್ಥಾಪನಾ ದಿನಾಚರಣೆ
ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಹಾಗೂ ಪಾರಂಪರಿಕ ವೈದ್ಯ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಪಾರಂಪರಿಕ ವೈದ್ಯ ಪರಿಷತ್, ಕರ್ನಾಟಕದ 25ನೇ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ.
ಹರಿಹರದಲ್ಲಿ ಇಂದು ಸಾರ್ವಜನಿಕ ಸಮಾಲೋಚನಾ ಸಭೆ
ನಗರದ ನಗರಸಭೆಯ ಸಭಾಂಗಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಆಯವ್ಯಯ ತಯಾರಿಸಲು ಮೊದಲ ಹಂತದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಕನ್ನಡ ವಿಷಯಾಧರಿತ, ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ ವಿಷಯಾಧಾರಿತ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ಪ್ರಕಾಶನದ ಪ್ರಕಾಶಕರಾದ ಎ.ಸಿ.ಶಶಿಕಲಾ ಶಂಕರಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಟುವಳ್ಳಿಗೆ ಇಂದು ಪಾರಂಪರಿಕ ವೈದ್ಯ ಮಹದೇವಯ್ಯ
ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಹತ್ತಿರದ ಪತಂಜಲಿ ವೆಲ್ನೆಸ್ ಸೆಂಟರ್ಗೆ ಇಂದು ಮಧ್ಯಾಹ್ನ 3 ಗಂಟೆಗೆ ಕುದೂರಿನ ಮೂಳೆ ತಜ್ಞರೂ, ಪಾರಂಪರಿಕ ವೈದ್ಯರೂ ಆದ ಮಹದೇವಯ್ಯ ಅವರು ಭೇಟಿ ನೀಡಲಿದ್ದಾರೆ.
ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ 10ರಂದು ವೈಕುಂಠ ಏಕಾದಶಿ ಉತ್ಸವ
ನಗರದ ಎಂ.ಸಿ.ಸಿ. `ಬಿ' ಬ್ಲಾಕ್ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ಮಹೋತ್ಸವ ಮಹೋತ್ಸವ ನಡೆಯಲಿದೆ.
ವಿಕಲಚೇತನ ಫಲಾನುಭವಿಗಳಿಗೆ ರಿಯಾಯಿತಿ ದರದ ಬಸ್ ಪಾಸ್
ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್ಪಾಸ್ (ಹೊಸ, ನವೀಕರಣ) ಗಳನ್ನು ಪಡೆಯಲು ಸೇವಾ ಸಿಂಧು ಫೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಐತಿಹಾಸಿಕ ಸತ್ಯ ಹೇಳಲು ಅಡ್ಡಿಯಾಗುತ್ತಿರುವ ಭಾವನಾತ್ಮಕ ಕಾರಣ
ಹರಿಹರ : ಇತಿಹಾಸದ ಅಂಶಗಳನ್ನು ರಾಜಕೀಯಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಸಾಮಾಜಿಕ ನೆಮ್ಮದಿಗೂ ಭಂಗವನ್ನುಂಟು ಮಾಡುತ್ತಿದೆ ಎಂದು ಶಾಸಕ ಬಿ.ಪಿ ಹರೀಶ್ ಕಳವಳ ವ್ಯಕ್ತಪಡಿಸಿದರು.
ಚನ್ನಗಿರಿ ತಾ. ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೆ. ಸಿದ್ದಲಿಂಗಪ್ಪಗೆ ಸನ್ಮಾನ
ಚನ್ನಗಿರಿ ತಾಲ್ಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಕೆ. ಸಿದ್ದಲಿಂಗಪ್ಪ ಅವರನ್ನು ಅವರ ಸ್ವಗೃಹದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟ ಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಸನ್ಮಾನಿಸಿದರು.
ಹರಪನಹಳ್ಳಿ : ಸಾವಿತ್ರಿ ಬಾಪುಲಿ ಜಯಂತಿ
ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಪುಲೆಯವರ 194ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಸಿದ್ದೇಶ್ವರ ಬ್ಯಾಂಕ್: 27 ವರ್ಷಗಳ ನಂತರ ಮೊದಲ ಚುನಾವಣೆ; ಅರಕೇರಿ ಗುಂಪಿಗೆ ಜಯ
ರಾಣೇಬೆನ್ನೂರು : ಹುಟ್ಟಿ 27 ವರ್ಷಗಳಾದರೂ ಯಾವುದೇ ಭಿನ್ನಮತ ಬರದೇ ಪ್ರತಿ ಬಾರಿಯೂ ಅವಿರೋಧವಾಗಿಯೇ ಆಡಳಿತ ವಹಿಸಿಕೊಳ್ಳುತ್ತಿದ್ದ ಪ್ರಸಿದ್ಧ ವರ್ತಕ, ಸಾಧು ಲಿಂಗಾಯತ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಶಣ್ಣ ಅರಕೇರಿ ಅವರ ತಂಡ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುವ ಮೂಲಕ ಶ್ರೀ ಸಿದ್ದೇಶ್ವರ ಕೋ- ಆಪ್ ಬ್ಯಾಂಕಿನ ಆಡಳಿತವನ್ನು ಮತ್ತೆ ವಹಿಸಿಕೊಂಡಿತು.
ಹರಪನಹಳ್ಳಿ : ನಾ. ಡಿಸೋಜ ನಿಧನಕ್ಕೆ ಕಸಾಪ ಸಂತಾಪ
ಹರಪನಹಳ್ಳಿ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ನಾ. ಡಿಸೋಜ ಅವರ ನಿಧನಕ್ಕೆ ಹರಪನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಂಬನಿ ಮಿಡಿದಿದೆ.
ಹೊಸಳ್ಳಿ ಮಠದಲ್ಲಿ ನರ್ಸಿಂಗ್ ಕಾಲೇಜು ಆರಂಭ
ಮಲೇಬೆನ್ನೂರು : ಹೊಸಳ್ಳಿ ವೇಮನ ಗುರುಪೀಠದ ವಿದ್ಯಾಪೀಠದ ಆಶ್ರಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದೆಂದು ಶ್ರೀ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಕನ್ನಡ ರಥಕ್ಕೆ ಎಲ್ಲೆಡೆ ಸಂಭ್ರಮದ ಸ್ವಾಗತ
ಜಗಳೂರು : ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ 5 ನೇ ದಿನದಂದು `ಕನ್ನಡ ರಥ' ಸಂಚಾರಕ್ಕೆ ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು, ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ಮುಖಾಂತರ ಬೀಳ್ಕೊಡಲಾಯಿತು.
ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ
ಜಗಳೂರು : ಇದೇ ಜನವರಿ 11ಹಾಗೂ 12ರಂದು ಜಗಳೂರಿನಲ್ಲಿ ನಡೆಯಲಿರುವ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರು ಸಹಕಾರ ನೀಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.
ರಸ್ತೆ, ಚರಂಡಿ, ಸಿಸಿ ಕ್ಯಾಮೆರಾ, ಬೀದಿ ದೀಪ ಇತ್ಯಾದಿ…
ಹರಿಹರ : ಪಾದಚಾರಿಗಳಿಗೆ ಫುಟ್ಪಾತ್ ರಚನೆ, ಹರಿಹರೇಶ್ವರ ದೇವಸ್ಥಾನಕ್ಕೆ ಮೂಲ ಸೌಕರ್ಯ, ನಗರದ ರಸ್ತೆ, ಚರಂಡಿಗಳ ನಿರ್ಮಾಣ, ಕನ್ನಡ ಭವನ ನಿರ್ಮಾಣ, ಬೀದಿ ದೀಪ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರಿಂದ ಹರಿದು ಬಂದ ಸಲಹೆಗಳಿವು.
ನಾ.ಡಿಸೋಜ ಅಗಲಿಕೆಯಿಂದ ಸಾಹಿತ್ಯಕ್ಕೆ ಬಡತನ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡದ ಹಿರಿಯ ಸಾಹಿತಿ ನಾ. ಡಿಸೋಜ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು, ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಹಾಗೂ ಕಸಾಪ ಪದಾಧಿಕಾರಿಗಳು ಡಿಸೋಜ ಅವರನ್ನು ನೆನೆದು ಭಾವುಕರಾಗಿ ಕಂಬನಿ ಮಿಡಿದರು.
ರಾಕ್ ಕ್ಲೈಂಬಿಂಗ್
`ಧೈರ್ಯಂ ಸರ್ವತ್ರ ಸಾಧನಂ' ಎಂಬಂತೆ ಜೀವ ಭಯ ಹಂಗಿಲ್ಲದೇ ರಾಜ್ಯ ಮಟ್ಟದ ಯುವಜನೋತ್ಸವದ ರಾಕ್ ಕ್ಲೈಂಬಿಂಗ್ನಲ್ಲಿ ಕ್ರೀಡಾಪಟು
ಅತ್ತಿಗೆರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಶಿವಕುಮಾರ್
ತಾಲ್ಲೂಕಿನ ಅತ್ತಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಟಿ.ಶಿವಕುಮಾರ್ ಕಬ್ಬೂರು, ಕೆ.ಎಸ್. ಅಜ್ಜಯ್ಯ ಅತ್ತಿಗೆರೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಾಲಾಜಿ ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ 10ರಂದು ವೈಕುಂಠ ಏಕಾದಶಿ
ಸ್ಥಳೀಯ ಬಾಲಾಜಿ ನಗರದ ಕುಂದುವಾಡ ಕೆರೆಯ ಬಳಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇದೇ ದಿನಾಂಕ 10 ರಂದು ವೈಕುಂಠ ಏಕಾದಶಿ ನಡೆಯಲಿದೆ.
ಜಿಲ್ಲಾ ಸರ್ಕಾರಿ ವಕೀಲರಾಗಿ ಶಾಮನೂರು ಪ್ರಕಾಶ್
ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ನಗರದ ವಕೀಲ ಶಾಮನೂರು ಪ್ರಕಾಶ್ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು
ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು, ಜನರನ್ನು ನಾಸ್ತಿಕರ ನ್ನಾಗಿ ಮಾಡಬಾರದು. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಬಂಜೆತನ ಶಾಪವಲ್ಲ : ಡಾ.ವರದಾ ಕಿರಣ್
ಹೊನ್ನಾಳಿ : ಬಂಜೆತನವು ಶಾಪವಲ್ಲ ಎಂಬ ಆತ್ಮಧೈರ್ಯ ತುಂಬುವ ಹಾಗೂ ಶಿಬಿರದ ಸದುಪಯೋಗ ಪಡೆದುಕೊಂಡು ಮಾನಸಿಕ ಒತ್ತಡದಿಂದ ಹೊರಬರುವಂತೆ ಅರಿವು ಮೂಡಿಸುವುದೇ ಶಿಬಿರದ ಮುಖ್ಯ ಉದ್ದೇಶ
ವಿಜ್ಞಾನ ವಸ್ತು ಪ್ರದರ್ಶನ
ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಫುಟ್ಬಾಲ್: ಶಿವಮೊಗ್ಗದ ಜೈನ್ ತಂಡ ವಿನ್ನರ್
ರಿಂಗ್ ರಸ್ತೆ ಬಳಿ ಇರುವ ಟರ್ಫ್ ಕ್ಲಬ್ ನಲ್ಲಿ ನಡೆದ ಅಂತರ ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಶಿವಮೊಗ್ಗದ ಜೈನ್ ತಂಡ ಎಸ್.ಕೆ.ಎಫ್.ಸಿ ತಂಡದ ವಿರುದ್ಧ 3-1ರಿಂದ ಜಯಗಳಿಸಿ ಪ್ರಥಮ ಸ್ಥಾನ ದೊಂದಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ತನ್ನದಾಗಿಸಿಕೊಂಡಿತು.
ಗೋವಾದಲ್ಲಿ ಯೋಗಾಸನ ಸ್ಪರ್ಧೆ : ಪ್ರಶಸ್ತಿ
ನ್ಯಾಷ ನಲ್ ಯೋಗ ಅಸೋಸಿಯೇಷನ್ ಆಫ್ ಇಂಡಿ ಯಾದ ಆಶ್ರಯದಲ್ಲಿ ಗೋವಾದ ಫಿಟ್ನೆಸ್ ಸ್ಟುಡಿಯೋ ಓಪನ್ ಪಾರ್ಕ್ನಲ್ಲಿ ನಡೆದ ಆಲ್ ಇಂಡಿಯಾ ಯೋಗಾಸನ ಚಾಂಪಿಯನ್ ಶಿಪ್ನಲ್ಲಿ ನಗರದ ಎಸ್ಎಎಸ್ಎಸ್ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಟೆನ್ನಿಸ್ ಪಂದ್ಯ : ಮಂಜುನಾಥ್ ಪ್ರಥಮ
ಬಳ್ಳಾರಿ ನಗರದಲ್ಲಿ ಈಚೆಗೆ ಮುಕ್ತಾಯಗೊಂಡ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಆಫೀಸರ್ ಕ್ಲಬ್ನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಎ.ಜಿ.ಎಂ. ಹಾಗೂ ವಕೀಲ ಜಿ.ಆರ್. ಮಂಜುನಾಥ 65 ನೇ ವಯಸ್ಸಿನ ವಿಭಾಗದಲ್ಲಿ ಸಿಂಗಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.
ಭೀಮಾ ಕೊರೆಗಾಂವ್ ವಿಜಯೋತ್ಸವ
ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೊರೆಗಾಂವ್ ಯುದ್ದದಲ್ಲಿ ಗೆದ್ದ ನಿಮಿತ್ತ ವಿಜಯೋತ್ಸವ ಆಚರಿಸಲಾಯಿತು.
ಉಪನ್ಯಾಸಕರ ವಜಾ ಆದೇಶ ಹಿಂಪಡೆಯಲು ಎಐಡಿಎಸ್ಓ ಒತ್ತಾಯ
ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ಭಾರದ ಕೊರ ತೆಯ ಕಾರಣ ನೀಡಿ, ಉಪ ನ್ಯಾಸಕರನ್ನು ಕೆಲಸ ದಿಂದ ವಜಾಗೊಳಿಸು ವಂತೆ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಆದೇಶ ಹೊರಡಿಸಿರುವುದನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸಿದೆ.
ಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರುಗಳ ಆಯ್ಕೆ
ಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಜಿ. ವೀರೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ನಾಗರತ್ನಮ್ಮ ಕೆ.ಜಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಚುನಾವಣೆ ಪ್ರಭಾಕರ್, ಆರ್ಜಿಎಸ್ ಗುಂಪಿಗೆ ಜಯ
ನಗರದ ಪ್ರತಿಷ್ಟಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕಿನ ಚುನಾವಣೆಯಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರುಗಳಾಗಿದ್ದ ಆರ್.ಎಲ್.ಪ್ರಭಾಕರ್ ಮತ್ತು ಆರ್.ಜಿ.ಶ್ರೀನಿವಾಸ ಮೂರ್ತಿ ಅವರುಗಳ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಕೋಳಿ ಜೂಜಾಟದ ಸಂಕಷ್ಟ ಅನಾವರಣಗೊಳಿಸಿದ ಗೀತೆ
ಯುವ ಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲಾ ತಂಡ, ಕೋಳಿ ಜೂಜಾಟ ಪಂದ್ಯದ ಕುರಿತು ಜಾನಪದ ಗೀತೆಯನ್ನು ನೃತ್ಯದೊಂದಿಗೆ ಪ್ರದರ್ಶಿಸಿದರು. ಕೋಲಾರ ಜಿಲ್ಲೆ ಸೇರಿದಂತೆ ಆಂಧ್ರ ಗಡಿ ಭಾಗದಲ್ಲಿ ಪ್ರಚಲಿತ ಇರುವ ಕೋಳಿ ಪಂದ್ಯ ಗ್ರಾಮೀಣ ಭಾಗದಲ್ಲಿನ ಮೋಜಿನ ಆಟ ವಾಗಿದೆ.
ಗುರುಗಳ ಸ್ಥಾನಕ್ಕೆ ಶಿಷ್ಯನೂ ಆಯ್ಕೆ ಆದದ್ದು ಸಂತಸ ತಂದಿದೆ
ಹರಿಹರ : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ, ಗುರುಗಳು ಅಧ್ಯಕ್ಷರಾಗಿದ್ದ ಸ್ಥಾನಕ್ಕೆ ಅವರ ಶಿಷ್ಯ ಕೂಡ ಆಯ್ಕೆಯಾಗಿರುವುದು ಅತೀವ ಸಂತಸವನ್ನು ನೀಡಿದೆ
ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ
ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಡಾ. ಎ.ಬಿ. ರಾಮಚಂದ್ರಪ್ಪ ಅವರನ್ನು ಸಂಘಟನಾತ್ಮಕ ಸೇವೆಗಾಗಿ ರಾಜ್ಯಮಟ್ಟದ ಜೀವನ ಸಾಧನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಲ್ಲಿಗೂ ದೈವತ್ವ ನೀಡುವ ಅದ್ಭುತ ಶಕ್ತಿ ಚಿತ್ರಕಲೆಗಿದೆ : ಶಾಸಕ ಶಿವಗಂಗಾ ಬಸವರಾಜ್
ದಾರಿಯಲ್ಲಿ ಬಿದ್ದ ಕಲ್ಲಿನ ಮೇಲೆ ದೇವರ ಚಿತ್ರ ಬಿಡಿಸಿ, ಅದಕ್ಕೆ ಭಾವನಾತ್ಮಕ ರೂಪ ನೀಡಿ, ದೈವತ್ವ ಒದಗಿಸುವ ಅದ್ಭುತ ಶಕ್ತಿ ಚಿತ್ರಕಲೆಗಿದೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಯುವಜನೋತ್ಸದಲ್ಲಿ ಮೇಳೈಸಿದ ಜಾನಪದ ನೃತ್ಯ ವೈಭವ
ಬಿ.ಐ.ಇ.ಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಭಾನುವಾರ ಆಯೋಜಿಸಲಾದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯ ವಿವಿಧ ಜಾನಪದ ನೃತ್ಯಗಳ ವೈಭವ ಮೇಳೈಯಿಸಿತು.
ಜೇನು ಕುರುಬರ ಹಾಡು, ಕಥೆ ಬರೆಯುವ ಸ್ಪರ್ಧೆ
ಬಾಪೂಜಿ ಎಂ.ಬಿ.ಎ ಕಾಲೇಜು ಸಭಾಂಗಣದ ವೇದಿಕೆ 2 ರಲ್ಲಿ ಜಾನಪದ ನೃತ್ಯ ಸ್ಪರ್ಧೆಗಳು ನಡೆದವು. ವಿವಿಧ ಪದವಿ ಪೂರ್ವ, ಪದವಿ, ಸ್ನಾತಕೋತ್ತರ 31 ಜಿಲ್ಲೆಗಳ ಜಾನಪದ ಗೀತೆಗಳನ್ನು ಹಾಡುವ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದವು.
ಘೋಷಣಾ ಸ್ಪರ್ಧೆಗೆ ಶಾಸಕ ಬಿ.ಪಿ.ಹರೀಶ್ ಚಾಲನೆ
ದೇಶದ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಮಹಿಳೆಯರ ಕೊಡುಗೆ ಅನನ್ಯವಾದದು ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.
ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕು
ಮಲೇಬೆನ್ನೂರು : ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯು 23ನೇ ಸ್ಥಾನದಲ್ಲಿದೆ. ಅದನ್ನು 10ನೇ ಸ್ಥಾನದೊಳಗೆ ಬರುವಂಥಹ ಮಹತಕ್ಕಾರ್ಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ರಾಣೇಬೆನ್ನೂರು : ರಸ್ತೆ ಕಾಮಗಾರಿಗೆ ಶಾಸಕ ಕೋಳಿವಾಡ ಚಾಲನೆ
ರಾಣೇಬೆನ್ನೂರು : ಇಲ್ಲಿನ ಮೃತ್ಯುಂಜಯ ನಗರದಲ್ಲಿ, ತಮ್ಮ ರೂ. 60 ಲಕ್ಷ ಅನುದಾನ ದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಭೂಮಿಪೂಜೆ ನೆರವೇರಿಸಿದರು.