ಬಸ್ ಸಂಪರ್ಕ, ವಿಕಲಚೇತನ ಪಿಂಚಣಿ, ಜಮೀನಿನ ಹದ್ದುಬಸ್ತು, ಆಶ್ರಯ ಮನೆ, ಬೆಳೆ ಹಾನಿ ಪರಿಹಾರ, ಹೆರಿಗೆ ಭತ್ಯೆ, ಜಮೀನು ಗಡಿ ಸಮಸ್ಯೆ, ಸಾಲ ಸೌಲಭ್ಯ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಹೊತ್ತುಕೊಂಡು ಜನರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸ್ಪಂದನದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಮಾನ ಅವಕಾಶ-ಸೌಲಭ್ಯಕ್ಕಾಗಿ ಶ್ರವಣದೋಷವುಳ್ಳವರ ಪ್ರತಿಭಟನೆ
ಎಲ್ಲರಂತೆ ಸಮಾನವಾದ ಅವಕಾಶಗಳು, ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ಶ್ರವಣದೋಷವುಳ್ಳ ವಿಶೇಷ ಚೇತನರು ನಗರದ ಜಯದೇವ ವೃತ್ತದಲ್ಲಿಂದು ಬೇಡಿಕೆಗಳ ನಾಮಫಲಕಗಳ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದರು.
ಪತ್ರಿಕಾ ಮೌಲ್ಯ ಅಳವಡಿಸಿಕೊಳ್ಳುವುದು ಅನಿವಾರ್ಯ
ಪತ್ರಕರ್ತರು ವೃತ್ತಿ ಗೌರವದ ಜೊತೆ ಪತ್ರಿಕಾ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವೃತ್ತಿಪರವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ
ಹರಿಹರ ತಾಲ್ಲೂಕಿನ ಯಾವುದೇ ಇಲಾಖೆಗೆ ಹೋದರು ಸಾರ್ವ ಜನಿಕರ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಅಲೆದಾಡುವ ಕೆಲಸ ಒಂದಡೆ ಯಾದರೆ ಹಣ ನೀಡದೆ ಯಾವುದೇ ಕೆಲಸ ಗಳನ್ನು ಮಾಡುತ್ತಿಲ್ಲ.
15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಕಲ್ಲು ಕ್ವಾರಿ ಪರಿಶೀಲನೆ
ಕಲ್ಲು ಕ್ವಾರಿಗಳಲ್ಲಿ ನಿಯಮ ಉಲ್ಲಂಘಿಸಿ ಸ್ಪೋಟಕ ಬಳಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಮುಂದೆ 15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜಾನ ಇಲಾಖೆ ಜಂಟಿಯಾಗಿ ಪರಿಶೀಲನೆ ಕೈಗೊಳ್ಳಲಿವೆ
ಬಹುಮತ ಪಡೆದ ಸರ್ಕಾರ ಕೆಡವಿ ಅಧಿಕಾರ ಹಿಡಿದ ಬಿಜೆಪಿ: ಮಲ್ಲಿಕಾರ್ಜುನ್ ಖರ್ಗೆ ಕಿಡಿ
ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುಮತ ಪಡೆದ ಸರ್ಕಾರವನ್ನು ಕೆಡುವುದರ ಮೂಲಕ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಬಹುಮತ ಪಡೆದ ಸರ್ಕಾರ ಕೆಡವಿ ಅಧಿಕಾರ ಹಿಡಿದ ಬಿಜೆಪಿ: ಮಲ್ಲಿಕಾರ್ಜುನ್ ಖರ್ಗೆ ಕಿಡಿ
ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುಮತ ಪಡೆದ ಸರ್ಕಾರವನ್ನು ಕೆಡುವುದರ ಮೂಲಕ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಸದ್ಧರ್ಮ ನ್ಯಾಯಪೀಠದ ಕಲಾಪ ಇಲ್ಲ
ಸಿರಿಗೆರೆ : ಬರುವ ಫೆಬ್ರವರಿ ದಿನಾಂಕ 3, 10 ಮತ್ತು 17 ಈ ಮೂರು ಸೋಮವಾರಗಳಂದು ಸದ್ಧರ್ಮ ನ್ಯಾಯಪೀಠದ ಕಾರ್ಯ ಕಲಾಪಗಳು ನಡೆಯುವುದಿಲ್ಲ ಎಂದು ಪೀಠದ ಕಾರ್ಯದರ್ಶಿ ತಿಳಿಸಿದ್ದಾರೆ.
ಕೊಕ್ಕನೂರಿನಲ್ಲಿ ಮಾಂಗಲ್ಯ ಸರ ಅಪಹರಣ : ದೂರು ದಾಖಲು
ಮಲೇಬೆನ್ನೂರು : ಬೆಳಿಗ್ಗೆ ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿ, ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕೊಕ್ಕನೂರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಫೆ. 7ರ ಶಿಕ್ಷಣ- ಸಾಹಿತ್ಯ ಮೇಳ ಮುಂದಕ್ಕೆ
ಸುವರ್ಣ ದೇಶ ಪಬ್ಲಿಕೇಶನ್ ಹಾಗೂ ಎಲ್ ಆರ್ ಇವೆಂಟ್ಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ದಾವಣಗೆರೆ) ಇವರು ಜಂಟಿಯಾಗಿ ಫೆ. 7 ರಿಂದ ಆಯೋಜಿಸಿದ್ದ ಶಿಕ್ಷಣ-ಸಾಹಿತ್ಯ ಮೇಳವನ್ನು ಏಪ್ರಿಲ್ ತಿಂಗಳಿಗೆ ಮುಂದೂಡಲಾಗಿದೆ
ನಗರದಲ್ಲಿ ವಸ್ತು ಪ್ರದರ್ಶನ, ಆಹಾರ ಮೇಳ
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಶ್ರೀ ಶಂಕರ ಸಮುದಾಯ ಭವನದಲ್ಲಿ ಬರುವ ಫೆಬ್ರವರಿ 9ರಂದು ಸ್ಪೂರ್ತಿ 2025-ಸ್ವಾವಲಂಬನೆಯ ಪರಿಕಲ್ಪನೆ ವತಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಬಾಲ ಕಾರ್ಮಿಕರು, ಕಿಶೋರ ಕಾರ್ಮಿಕರು ಪತ್ತೆ
ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆ ನಡೆಸುವಾಗ ಗುತ್ತೂರು ಕಾಲೋನಿ ಇಟ್ಟಿಗೆ ಭಟ್ಟಿ ತಪಾಸಣೆಯಲ್ಲಿ 2 ಗಂಡು ಮಕ್ಕಳು ಹಾಗೂ 4 ಹೆಣ್ಣು ಮಕ್ಕಳು ಕಿಶೋರ ಕಾರ್ಮಿಕರು ಅಪಾಯಕಾರಿ ಉದ್ದಿಮೆಯಲ್ಲಿ ದುಡಿಯುತ್ತಿರುವುದು ಪತ್ತೆಯಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಲು ಆತ್ಮಸ್ಥೈರ್ಯದಿಂದ ಹೋರಾಡಿ ಜೀವ ನೋಪಾಯದಿಂದ ಪಾರು ಮಾಡಿದಂ ತಹ ಮಹಿಳೆಯ ರನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಪರಿಗಣಿಸಲು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗರದಲ್ಲಿ ಉಚಿತ ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ ಆರ್ಥಿಕವಾಗಿ ಹಿಂದುಳಿದವರು ಇದರ ಉಪಯೋಗ ಪಡೆದೊಳ್ಳಬಹುದು.
ವಾಲ್ಮೀಕಿ ಜಾತ್ರೆ : ರಾಜನಹಳ್ಳಿ ಮಠದಲ್ಲಿ ಇಂದು ಹಂದರಕಂಬ ಪೂಜೆ
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಹಮ್ಮಿಕೊಂಡಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆಯ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಶ್ರೀಮಠದ ಆವರಣದಲ್ಲಿ ಪೆಂಡಾಲ್ ನಿರ್ಮಾಣಕ್ಕೆ ಹಂದರಕಂಬ ಪೂಜೆಯನ್ನು ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಡಾ. ಹೆಚ್.ವಿ. ವಾಮದೇವಪ್ಪ
ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ. ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಯುವಜನತೆ ದಿಕ್ಕು ತಪ್ಪಿ ಸಾಗಬಾರದು. ಚಿಕ್ಕಂದಿನಿಂದಲೇ ಮಹತ್ವದ ಗುರಿಗಳನ್ನು ಹೊಂದಿರಬೇಕು.
ವಿನಯ್ಕುಮಾರ್ – ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ
ಹರಿಹರ : ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ವಾಯುಪಡೆಯಲ್ಲಿ ನೇಮಕಾತಿ ರ್ಯಾಲಿ
ವೈದ್ಯಕೀಯ ಸಹಾಯಕ ವೃತ್ತಿಗೆ ನೇಮಕಾತಿ ರ್ಯಾಲಿಯನ್ನು ಕೇರಳದ ಕೊಚ್ಚಿಯ ಎರ್ನಾಕುಲಂನಲ್ಲಿನ ಶೆಣೈಸ್, ಪಿಟಿ ಉಷಾ ರಸ್ತೆಯಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಡಿದ್ದು ದಿನಾಂಕ 29 ರಿಂದ ಫೆಬ್ರವರಿ 6 ರವರೆಗೆ ಏರ್ಪಡಿಸಲಾಗಿದೆ.
ಕರಾಟೆ : ರಾಷ್ಟ್ರಮಟ್ಟಕ್ಕೆ ಸಾದತ್
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿ ನಲ್ಲಿ ನಡೆದ 16ನೇ ರಾಜ್ಯ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ಚಾಣಕ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾದತ್ ಅಹಮದ್ ಬಂಗಾರದ ಪದಕ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುವಜನರು ಸರಿದಾರಿಯಲ್ಲಿ ಸಾಗಲು ಪ್ರೇರೇಪಿಸಲು ಸೂಕ್ತ ಮಾರ್ಗದರ್ಶನ ಅಗತ್ಯ
ವಿವೇಕಾನಂದರು ತಮ್ಮ ಆಲೋಚನೆಗಳು ಮತ್ತು ಚಿಂತನೆಗಳೊಂದಿಗೆ ಯುವಕರನ್ನು ಒಗ್ಗೂಡಿಸಲು ಬಯಸಿದರು. ಯುವಜನರು ಸರಿದಾರಿಯಲ್ಲಿ ಸಾಗಲು ಪ್ರೇರೇಪಿಸಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ
ನಗರದಲ್ಲಿ ಇಂದು
ಕರ್ನಾಟಕ ಡ್ರೈವರ್ ಸಮುದಾಯದ ಪರಿವರ್ತನೆ ಮತ್ತು ಅವರ ವ್ಯವಹಾರಗಳ ಡಿಜಿಟಲೀಕರಣಕ್ಕೆ ಸಹಕರಿಸುವ ಟೌನರ್ ಮತ್ತು ಓಐಓಟಿ ಆಪ್ಗಳ ಅಧಿಕೃತ ಸೇವೆಯ ಪ್ರಾರಂಭದ ಕಾರ್ಯಕ್ರಮವು ಇಂದು ಬೆಳಿಗ್ಗೆ 11ಕ್ಕೆ ವಿದ್ಯಾರ್ಥಿ ಭವನ ಸಮೀಪವಿರುವ ಟ್ಯಾಕ್ಸಿ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದೆ.
ಮಳಲಕೆರೆ ಪಿಎಸಿಎಸ್ಗೆ ಪಟೇಲ್ ರಾಮಚಂದ್ರಪ್ಪ ಅಧ್ಯಕ್ಷ
ಮಳಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಟೇಲ್ ಜಿ. ಎಸ್. ರಾಮಚಂದ್ರಪ್ಪ ಮತ್ತು ಉಪಾಧ್ಯಕ್ಷರಾಗಿ ಸಿದ್ದಣ್ಣರ ಎಂ. ಶೈಲಮ್ಮ ಇವರು ಆಯ್ಕೆಯಾಗಿದ್ದಾರೆ.
ಸಾಣೇಹಳ್ಳಿಯಿಂದ ಸಂತೇಬೆನ್ನೂರಿನವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ’
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದಿನಿಂದ ಇದೇ ದಿನಾಂಕ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ವಾಲ್ಮೀಕಿ ಜಾತ್ರೆ ರಾಜನಹಳ್ಳಿಯಲ್ಲಿ ನಾಳೆ ಸಭೆ
ಹರಿಹರ : ರಾಜನಹಳ್ಳಿ ಯಲ್ಲಿ ಫೆಬ್ರವರಿ 8 ಮತ್ತು 9 ರಂದು ನಡೆಯುವ 7ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋ ತ್ಸವದ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಡಿದ್ದು ದಿನಾಂಕ 28 ರಂದು ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿ ಸಲಾಗಿದೆ
ದುಶ್ಚಟಗಳಿಂದ ಹೊರ ಬಂದು ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈ ಜೋಡಿಸಿ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
‘ನಮ್ಮ ನಡೆ ಸರ್ವೋದಯದೆಡೆಗೆ’ ಕಾರ್ಯಕ್ರಮ
ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಇದೇ ದಿನಾಂಕ 27 ರಿಂದ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಭಾನುವಳ್ಳಿ ಪಿಎಸಿಎಸ್ನ 12 ಸ್ಥಾನಗಳಿಗೂ ಅವಿರೋಧ ಆಯ್ಕೆ
ಮಲೇಬೆನ್ನೂರು : ಭಾನುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಅಂಗಾಂಗ ದಾನ ಮಾಡಿದ ಪಾಲಕರಿಗೆ ಗಣರಾಜ್ಯೋತ್ಸವ ದಿನ ಸನ್ಮಾನ
ಐದು ಅಂಗಾಂಗಗಳನ್ನು ಮೃತರ ಇಚ್ಚೆಯ ಪ್ರಕಾರ ದಾನ ಮಾಡಿದ ಪಾಲಕರನ್ನು ನಾಡಿದ್ದು 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಗೌರವಿಸಿ ಸನ್ಮಾನಿಸಲಾಗುತ್ತಿದೆ
ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿಂದು – ನಾಳೆ ಎಡೆ ಜಾತ್ರೆ
ಹೊಂಡದ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮತ್ತು ನಾಳೆ ಎಡೆ ಜಾತ್ರೆ ನಡೆಯಲಿದೆ.
ನಗರದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು, ಪದಾಧಿಕಾರಿಗಳ ಸಭೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಕಾಂಗ್ರೆಸ್ ಸದಸ್ಯರು, 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಇಂದು ಡಿಆರ್ಆರ್ ಶಾಲೆ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ
ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆಯ 1988-89, 1999-2000ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ನಾಳೆ ದಿನಾಂಕ 25ರ ಶನಿವಾರ ಸಂಸ್ಥೆಯ ರಜತಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಂಡಿರುವುದಾಗಿ ಎಂ.ಶ್ರೀಕಾಂತ್ ಹೇಳಿದ್ದಾರೆ.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅವರಾತ್ರಿ ಅಮಾವಾಸ್ಯೆ ಪೂಜೆ
ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 29ರ ಬುಧವಾರ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ರಂಗಭೂಮಿ, ಜನರ ಮನ ಪರಿವರ್ತನೆ ನೀಡಿ ಬದುಕಿಗೆ ಮೌಲ್ಯ, ಜವಾಬ್ದಾರಿ ತರುತ್ತದೆ
ಜನಮಾನಸದಲ್ಲಿ ಮೌಲ್ಯಗಳನ್ನು ಬಿತ್ತಿ ವಿಕಾಸದ ಬೆಳಕನ್ನು ತೋರುವ ರಂಗಭೂಮಿ, ಜನರ ಮನ ಪರಿವರ್ತನೆ ಹಾಗೂ ಸಮಾಜ ಸುಧಾರಣೆಗೆ ಪ್ರೇರಣೆ ನೀಡಿ ಬದುಕನ್ನು ಹಸನಾಗಿಸುತ್ತದೆ. ಶಿಸ್ತು, ಶ್ರದ್ಧೆ, ಕ್ರಿಯಾಶೀಲತೆ ಹಾಗೂ ಜವಾಬ್ದಾರಿಯ ಕಾರ್ಯ ನಿರ್ವಹಣೆಯನ್ನು ಕಲಿಸುತ್ತದೆ
ಎಸ್ಸೆಸ್, ಎಸ್ಸೆಸ್ಸೆಂ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ
ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಬರಲಿರುವ ಮಹಾನಗರ ಪಾಲಿಕೆಯ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲಾಗುವುದು.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಳೆ ಅವರಾತ್ರಿ ಅಮವಾಸ್ಯೆ
ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಬುಧವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ - ಪೂಜೆ ನಡೆಯಲಿದೆ.
ಹಳೇಬಾತಿ ಹಾ.ಉ.ಸ. ಸಂಘಕ್ಕೆ ಆಯ್ಕೆ
ಹಳೇಬಾತಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರತ್ನಮ್ಮ ಮಾಗಾನಹಳ್ಳಿ ಹನುಮಂತಪ್ಪ ಅಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಗ್ಯಶ್ರೀ ತಿಳಿಸಿದ್ದಾರೆ.
ವಿದ್ಯಾನಗರ ಲಯನ್ಸ್ನಿಂದ ಶಿಕ್ಷಕರ ತರಬೇತಿ ಕಾರ್ಯಾಗಾರ
ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾನಗರದ ಲಯನ್ಸ್ ಸೇವಾ ಭವನದಲ್ಲಿ ಜ.7ರಿಂದ 8ರ ವರೆಗೆ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ತರಬೇತುದಾರ ಶಿವಯೋಗಿ ಕಬ್ಬಿನ ಕಂಥಿಮಠ ನಡೆಸಿ ಕೊಟ್ಟರು.
ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ಜನಜಾಗೃತಿ ಸಮಾವೇಶ
ಹರಪನಹಳ್ಳಿ : ಸಮುದಾಯದ ಜನರ ಆಶೋತ್ತರಗಳಿಗೆ, ಸಾಂವಿಧಾನಿಕ ಬೇಡಿಕೆಗಳಿಗೆ ಸ್ಪಂದಿಸುವಂತೆ ಬೃಹತ್ ಜನಜಾಗೃತಿ ಸಮಾವೇಶದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದೊಂದಿಗೆ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ
ಡಿ.ಕೆ ಮಾಧವಿಗೆ ಏಷಿಯಾ ಪೆಸಿಫಿಕ್ ಐಕೋನಿಕ್ ಅವಾರ್ಡ್
ನಮನ ಅಕಾಡೆಮಿ ಸಂಸ್ಥಾಪಕ ಕಾರ್ಯದರ್ಶಿ ಡಿ.ಕೆ ಮಾಧವಿ ಅವರಿಗೆ `2025ರ ಏಷಿಯಾ ಪೆಸಿಫಿಕ್ ಐಕೋನಿಕ್ ಅವಾರ್ಡ್' ಲಭಿಸಿದೆ.
ಸಂವಿಧಾನವೇ ಭಾರತೀಯರ ಭಗವದ್ಗೀತೆ
ರಾಣೇಬೆನ್ನೂರು : ನಮ್ಮ ಸಂವಿಧಾನದ ಆಚರಣೆಯೇ ಗಣರಾಜ್ಯೋತ್ಸವ. ಸಮಾನತೆ, ಭ್ರಾತೃತ್ವ, ಸೋದರತ್ವ ಮತ್ತು ವೈಚಾರಿಕತೆ ಹಾಗೂ ವೈಜ್ಞಾನಿಕವಾಗಿ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ರಚಿಸಿದ ನಮ್ಮ ಸಂವಿಧಾನವೇ ಭಾರತೀಯರ ಭಗವದ್ಗೀತೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಹೊನ್ನಾಳಿ ಶಿಕ್ಷಕಿ ಕಾಣೆ; ಆತ್ಮಹತ್ಯೆ ಶಂಕೆ
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಫೈನಾನ್ಸ್ ಕಂಪನಿ ಸಾಲಗಾರರ ಕಿರುಕುಳದಿಂದ ಬೇಸತ್ತು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು
ಸಂಸ್ಕೃತ ವಿಶ್ವವಿದ್ಯಾಲಯದಿಂದ ಶ್ರೀಶೈಲ ಜಗದ್ಗುರುಗಳ ಗ್ರಂಥ ಪ್ರಕಟಣೆ
`ಸಿದ್ಧಾಂತ ಶಿಖಾಮಣಿ - ಭಗವದ್ಗೀತೆಯೋ : ಮೀಮಾಂಸಾ' ಎಂಬ ಗ್ರಂಥವನ್ನು ಪ್ರಕಟಿಸಲು ಕ್ರಮ ಕೈಗೊಂಡಿರುವುದಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
ರಾಜನಹಳ್ಳಿಯಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪರಿಶೀಲನೆ
ಸ್ಮಾರ್ಟ್ ಸಿಟಿ ವತಿಯಿಂದ ರಾಜನಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಅವರು ಇಂದು ಪ್ರಗತಿ ಪರಿಶೀಲನೆ ನಡೆಸಿದರು.
ಸಹಕಾರ ತತ್ವದಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ : ಎಂ. ಆರ್. ಪ್ರಭುದೇವ್
ಸಹಕಾರ ತತ್ವದ ಜೀವನದಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಂ.ಆರ್. ಪ್ರಭುದೇವ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಮಾಸಾಚರಣೆ
ಧ.ರ.ಮ ವಿಜ್ಞಾನ ಕಾಲೇಜಿನ ಎನ್.ಸಿ.ಸಿ ಹಾಗೂ ಎನ್ನೆಸ್ಸೆಸ್ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ಯ ಜಾಥಾ ಹಾಗೂ ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಜೀಬ್ರಾ ಪಟ್ಟಿಗಳನ್ನು ಹಾಕಿ, ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರು.
ಇಂಗಳಗೊಂದಿ ಬಳಿ ಅಕ್ರಮ ಮರಳು ವಶ
ಮಲೇಬೆನ್ನೂರು : ಸಮೀಪದ ಇಂಗಳಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಟನ್ ನಷ್ಟು ಮರಳನ್ನು ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕವಿತಾ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ಧೋರಣೆಯಿಂದ ಪರಿತಪಿಸುತ್ತಿರುವ ಮಧ್ಯಮ ವರ್ಗದ ಜನರು
ರಾಜ್ಯ ಸರ್ಕಾರದ ಧೋ ರಣೆಯಿಂದಾಗಿ ಜನ ಸಾಮಾನ್ಯರು ಅದರಲ್ಲಿಯೂ ಮಧ್ಯಮ ವರ್ಗದ ಜನ ಪರಿತಪಿಸುವಂತಾಗಿದೆ ಎಂದು ಹಿರಿಯ ಮುಖಂಡ ಜೆ.ಸೋಮನಾಥ್ ಟೀಕಿಸಿದ್ದಾರೆ.
ಹೆಣ್ಣು ಮಕ್ಕಳ ಹಕ್ಕುಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ
ಹರಿಹರ : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂದು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೆಬಲ್ ಕಿಡ್ಸ್ ಪ್ರಿ - ಸ್ಕೂಲ್ ಮತ್ತು ಡೇ ಕೇರ್, ಹರಿಹರದಲ್ಲಿ ಇಂದು ನೆರವೇರಿಸಲಾಯಿತು.
ಬಾತಿ ಗುಡ್ಡ : 76ನೇ ಗಣರಾಜೋತ್ಸವ
ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾ ಡೆಮಿ ವತಿಯಿಂದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಬಾತಿ ಗುಡ್ಡದಲ್ಲಿ ಚಾರಣ ಮಾಡುವುದರ ಮೂಲಕ ಬೆಟ್ಟದ್ದ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದರೊಂದಿಗೆ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಫೆ. 1 ರಂದು ರಂಭಾಪುರಿ ಶ್ರೀಗಳ 34ನೇ ವಧಂತಿ ಮಹೋತ್ಸವ
ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ - ಜನ ಜಾಗೃತಿ ಧರ್ಮ ಸಮಾರಂಭವು ಹಗರಿಬೊಮ್ಮನಹಳ್ಳಿ ತಾಲ್ಲೂಕು ಹಂಪಸಾಗರದಲ್ಲಿ ಫೆಬ್ರವರಿ 1 ಶನಿವಾರ ಬೆಳಿಗ್ಗೆ 11.30 ಗಂಟೆಗೆ ಜರುಗಲಿದೆ.
ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರ ವಾಚನಾಲಯದ ಉದ್ಘಾಟನೆ
ನಗರದ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ರಿಗಾಗಿ ಸ್ಥಾಪಿಸಲಾಗಿರುವ ವಾಚನಾಲಯದ ಉದ್ಘಾಟನೆಯನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಭಾನುವಾರ ನೆರವೇರಿಸಿದರು.
ರಾಷ್ಟ್ರೀಯ ಹಬ್ಬಗಳು ಸರ್ಕಾರಿ ಆಚರಣೆಗೆ ಸೀಮಿತ
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ಕೂಡ ಸರ್ಕಾರಿ ಆಚರಣೆಗೆ ಸೀಮಿತವಾಗಿರುವುದು ದುರಂತ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಬೇಸರ ವ್ಯಕ್ತಪಡಿಸಿದರು.
ಜಿ.ಎಸ್. ಅನಿತ್ಕುಮಾರ್ ಅವರಿಗೆ ಗ್ಲೋಬಲ್ ಅಚೀವರ್ಸ್ ಅವಾರ್ಡ್
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರತಿವರ್ಷ ವಿಶ್ವವಾಣಿಯು `ಗ್ಲೋಬಲ್ ಅಚೀವರ್ಸ್ ಅವಾರ್ಡ್' ನೀಡಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿಗೆ ವಾಣಿಜ್ಯೋದ್ಯಮಿ, ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್ಕುಮಾರ್ ಆಯ್ಕೆಯಾಗಿದ್ದಾರೆ.
ಸಂವಿಧಾನದ ಮಹತ್ವ ಸಾರುವ ಬ್ಯಾಡ್ಜ್ ಧರಿಸಿದ ಸಚಿವರು, ಸಂಸದರು
ಜಿಲ್ಲಾಡಳಿತದಿಂದ ಭಾನುವಾರ ಏರ್ಪಾಡಾಗಿದ್ದ 76ನೇ ಗಣರಾ ಜ್ಯೋತ್ಸವ ಸಮಾರಂಭದಲ್ಲಿ ಭಾಗ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂವಿಧಾನದ ಮಹತ್ವ ಸಾರುವ ಸಂವಿಧಾನದ ಪೀಠಿಕೆಯ ಬ್ಯಾಡ್ಜ್ ಧರಿಸುವ ಮೂಲಕ ಗಮನ ಸೆಳೆದರು.
ಭಾನುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಮಲೇಬೆನ್ನೂರು : ಭಾನುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಿಗೂ ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ರಾಷ್ಟ್ರಮಟ್ಟದ ಅಬಾಕಸ್ : ಕಿಡ್ಸ್ ಅಬಾಕಸ್ ಸೆಂಟರ್ನ 7 ವಿದ್ಯಾರ್ಥಿಗಳು ಚಾಂಪಿಯನ್
ಕಲುಬುರ್ಗಿಯಲ್ಲಿ ಕಳೆದ ವಾರ ನಡೆದ 6ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಗರದಲ್ಲಿ ಇಂದು ಪುರಾಣ ಪ್ರವಚನ ಮಂಗಲೋತ್ಸವ
ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತ ಪುರಾಣ ಪ್ರವಚನವು ಇಂದು ಮಂಗಲಗೊಳ್ಳಲಿದೆ.
ಪುರಾಣ ಪ್ರವಚನದಲ್ಲಿ ಕಲಾವಿದರಿಗೆ ಸನ್ಮಾನ
ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತದ ಪುರಾಣದಲ್ಲಿ ಮೈಸೂರಿನ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಭೀಮಶಂಕರ ಬೀದೂರ್ ನೇತೃತ್ವದ 20 ಜನರ ತಂಡ ತಬಲಾ ಸೋಲೋ ನಡೆಸಿದರು.
ಸಂಸದರ ಸಮಯಾವಕಾಶಕ್ಕೆ ಕಾಯುವುದು ಸಲ್ಲದು
ಹರಿಹರ : ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು ನಾನಾ ಯೋಜನೆ, ಕಟ್ಟಡಗಳ ಉದ್ಘಾಟನಾ ಸಮಾರಂಭ ಆಯೋಜಿಸಲು ಸಂಸದರ ಸಮಯಾವಕಾಶಕ್ಕಾಗಿ ಕಾಯುವುದು ಸರಿಯಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಹರಿಹರ ತುಂಗಭದ್ರಾ ಕ್ರೆಡಿಟ್ ಸೊಸೈಟಿಗೆ ಹೇಮಂತರಾಜ್ ಅಧ್ಯಕ್ಷ
ಹರಿಹರ : ನಗರದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ನೂತನ ಅಧ್ಯಕ್ಷರಾಗಿ ಡಿ. ಹೇಮಂತರಾಜ್ ಮತ್ತು ಉಪಾಧ್ಯಕ್ಷರಾಗಿ ಕೆ.ಬಿ. ಮಂಜುನಾಥ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೆಚ್. ಸುನಿತಾ ಘೋಷಣೆ ಮಾಡಿದರು.
ಎಸ್ಸೆಸ್ ಆರೋಗ್ಯಕ್ಕಾಗಿ ಧರ್ಮಸ್ಥಳ, ಕುಕ್ಕೆಯಲ್ಲಿ ವಿಶೇಷ ಪೂಜೆ
ಶಾಸಕ ಶಾಮನೂರು ಶಿವಶಂಕರಪ್ಪರ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲೆಂದು ಮಹಾನಗರ ಪಾಲಿಕೆ 38ನೇ ವಾರ್ಡ್ನ ಸದಸ್ಯ ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ದೇವರ ದರ್ಶನ ಪಡೆಯಲಾಯಿತು.
ನಗರ ದೇವತೆಗೆ ಹರಕೆ ತೀರಿಸಿದ ಎಸ್ಸೆಸ್ ಯುವ ಅಭಿಮಾನಿ ಬಳಗ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ಗುಣಮುಖರಾಗಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ದೇವತೆ ದುರ್ಗಾಂಬಿಕಾ ದೇವಿಗೆ 101 ಕಾಯಿ ಒಡೆಯುವ ಮೂಲಕ ಎಸ್.ಎಸ್ ಯುವ ಅಭಿಮಾನಿ ಬಳಗ ಹರಕೆ ತೀರಿಸಿತು.
ನೇತಾಜಿ ಆದರ್ಶ ಯುವಕರಿಗೆ ಮಾದರಿ : ದಿನೇಶ್ ಕೆ. ಶೆಟ್ಟಿ
ನಗರದ ರಾಮ್ ಅಂಡ್ ಕೋ ಸರ್ಕಲ್ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಎಐಡಿಎಸ್ಓನಿಂದ ನೇತಾಜಿ ಜನ್ಮ ದಿನಾಚರಣೆ
ಎಐಡಿಎಸ್ಓ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನ ಆಚರಿಸಲಾಯಿತು.