ಕನಕದಾಸರ ಕೀರ್ತನೆ ಗಳನ್ನು ಅರಿತುಕೊಂಡು ಅವರು ಪ್ರತಿಪಾದಿಸಿದ್ದ ಸಮ ಸಮಾಜ ನಿರ್ಮಾಣದಲ್ಲಿ ತೊಡಗಬೇಕಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕರೆ ನೀಡಿದ್ದಾರೆ.
ಜೀವಪರ, ಜನಪರ, ವೈಜ್ಞಾನಿಕವಾಗಿರುವ ರಂಗಭೂಮಿ
ರಂಗಭೂಮಿ ಜೀವಪರ, ಜನಪರ, ವಾಸ್ತವಕ್ಕೆ ಹತ್ತಿರವಾದ ಮತ್ತು ವೈಜ್ಞಾನಿಕವಾಗಿರುವ ನಾಟಕಗಳು ಸಹೃದಯ ಪ್ರೇಕ್ಷಕರೆದುರಿಗೆ ಬರುತ್ತವೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಬಿಜೆಪಿ: ಯಶಸ್ವೀ ಸದಸ್ಯತ್ವ ಅಭಿಯಾನ
ಬಿಜೆಪಿ ನನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದು ರಾಜ್ಯ ಬಿಜೆಪಿ ಯುವ ಘಟಕದ ಉಪಾಧ್ಯಕ್ಷ ಜಿ ಎಸ್ ಶ್ಯಾಮ್ ತಿಳಿಸಿದರು.
ಕೀರ್ತನೆಗಳ ಮೂಲಕವೇ ಅಸಮಾನತೆ ವಿರುದ್ಧ ಜಾಗೃತಿ
ಹರಪನಹಳ್ಳಿ : ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಾಮಾಜಿಕ ಅಸಮಾನತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಸಾಂಸ್ಕೃತಿಕ ಪರಂಪರೆಗೆ ದಾಸರ ಕೊಡುಗೆ ಅನನ್ಯ
ಹರಿಹರ : ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯವಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಪಿಎಸಿಎಸ್ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ
ಮಲೇಬೆನ್ನೂರು : ಸ್ವಂತ ಕಛೇರಿ ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.
ಚಂಡೆ ಮದ್ದಳೆ..
ಜಿಲ್ಲಾಡಳಿತದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಗಾಜಿನ ಮನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭಾನುವಾರ ಸಂಜೆ ಕಲಾವಿದರು ಚಂಡೆ ಮದ್ದಳೆ ನಡೆಸಿಕೊಟ್ಟರು.
ಭಜನಾ ಸ್ಪರ್ಧೆ …
ಜೈನ್ ಮಿಲನ್ ಹಾಗೂ ಆದಿನಾಥ ಜೈನ್ ಮಿಲನ್ ಮತ್ತು ಸಮಸ್ತ ದಿಗಂಬರ ಜೈನ ಸಮಾಜದದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ದಾವಣಗೆರೆ ವಿಭಾಗ ಮಟ್ಟದ ಕಿರಿಯರ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು.
ಹೊನ್ನಾಳಿ : ವಚನ ಸಾಹಿತ್ಯದಲ್ಲಿ ವೈಚಾರಿಕತೆ ದತ್ತಿ
ಹೊನ್ನಾಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಡದಕಟ್ಟೆ ಗ್ರಾಮದ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11ಕ್ಕೆ `ವಚನ ಸಾಹಿತ್ಯದಲ್ಲಿ ವೈಚಾರಿಕತೆ' ದತ್ತಿ ಉಪನ್ಯಾಸ ನಡೆಯಲಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮುರಿಗಪ್ಪಗೌಡ ತಿಳಿಸಿದರು.
ಶ್ರೀ ಸತ್ಯಸಾಯಿ ಬಾಬಾ ಜನ್ಮ ದಿನ
ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ದಿನೋತ್ಸವದ ಅಂಗವಾಗಿ ಈಶ್ವರಮ್ಮ ಶಾಲೆಯಲ್ಲಿ ಇಂದಿನಿಂದ ಇದೇ ದಿನಾಂಕ 23ರವರೆಗೆ ಪಂಚ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಂತೆ, ಜಾತ್ರೆ ನಿಷೇಧ
ಖಾಲಿ ಇರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಇದೇ ದಿನಾಂಕ 23 ರಂದು ಮತದಾನ ನಡೆಯಲಿದ್ದು, ಉಪಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಇಂದಿನಿಂದ ಜ್ಯೋತಿಷ್ಯ ಡಿಪ್ಲೋಮಾ ಪರೀಕ್ಷೆ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಂಯೋಜನೆ ಹಾಗೂ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿರುವ ನಗರದ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ ವಿದ್ಯಾ ಪ್ರತಿಷ್ಠಾನ ಸಂಸ್ಥೆಯು ಜ್ಯೋತಿಷ್ಯ ತರಗತಿಗಳನ್ನು ನಡೆಸುತ್ತಿದೆ.
ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಈ ವರ್ಷದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
26ಕ್ಕೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭೆ
ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸಂಸ್ಥೆಯ ಆವರಣದಲ್ಲಿ ಇದೇ ದಿನಾಂಕ 26ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಶಾಖೆಯ 2021-22, 2022-23 ಮತ್ತು 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇಷನ್ ವತಿಯಿಂದ ಧ್ಯಾನ ಶಿಬಿರವು ಇಂದಿನಿಂದ ಇದೇ ದಿನಾಂಕ 24ರವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30 ರವರೆಗೆ ನಡೆಯಲಿದೆ.
ಬಗರ್ ಹುಕ್ಕುಂ ಹಕ್ಕು ಪತ್ರ ನೀಡದಿದ್ದರೆ ಕಂದಾಯ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನ
ಬೆಳಗಾವಿಯಲ್ಲಿ ಬರುವ 9ರಂದು ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯ್ದೆಗಳನ್ನು ಸರ್ಕಾರ ರದ್ದು ಮಾಡಬೇಕು ಎಂದು ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ ಆಗ್ರಹಿಸಿದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇ-ಕೆವೈಸಿ ; ಕೃಷಿ ಇಲಾಖೆ ಸೂಚನೆ
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2024-25 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಸಾಗುವಳಿ ಹೊಂದಿರುವ ಪ್ರತಿಯೊಬ್ಬ ರೈತ ಕುಟುಂಬವು ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದು
ಇಂದಿನ ಮದ್ಯ ಮಾರಾಟಗಾರರ ಬಂದ್ ಕರೆ ಹಿಂದಕ್ಕೆ : ಕವಿತಾಳ್
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮದ್ಯ ಮಾರಾಟಗಾರರು ನಾಳೆ ದಿನಾಂಕ 20ರ ಬುಧವಾರ ರಾಜ್ಯಾದ್ಯಂತ ನಡೆಸಲುದ್ದೇಶಿಸಿದ್ದ ಮದ್ಯ ಮಾರಾಟ ಬಂದ್ ಕರೆಯನ್ನು ಹಿಂತೆಗೆದುಕೊಂಡಿದ್ದಾರೆ
ನಗರದ ಸಪ್ತಗಿರಿ ಶಾಲೆಯಲ್ಲಿ ಇಂದು ಕಾನೂನು ಅರಿವು ಕಾರ್ಯಕ್ರಮ
ಸಪ್ತಗಿರಿ ಪ್ರೌಢಶಾಲೆಯಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಶಾಲಾ ಮಕ್ಕಳಿಗಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀಮತಿ ನಿವೇದಿತಾ ಟಿ.ಎಂ. ಉದ್ಘಾಟಿಸುವರು.
ನಗರದಲ್ಲಿ ಇಂದು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಸಮಿತಿ ಸಭೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಇಂದು ಬೆಳಿಗ್ಗೆ 10.30 ಕ್ಕೆ ಎಪಿಎಂಸಿ ಭವನದಲ್ಲಿ ರಾಜ್ಯ ಸಮಿತಿ ಸಭೆ ಹಮ್ಮಿ ಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ತಿಳಿಸಿದರು.
ಚಿತ್ರದುರ್ಗ : ಅಯ್ಯಪ್ಪ ಸ್ವಾಮಿ ಬ್ರಹ್ಮೋತ್ಸವ
ಚಿತ್ರದುರ್ಗ : ಮೆದೆಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ನಿನ್ನೆ ಆರಂಭಗೊಂಡಿದ್ದು, ಬರುವ ಜನವರಿ 13ರವರೆಗೆ ನಡೆಯಲಿದೆ.
ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇಷನ್ ವತಿಯಿಂದ ಧ್ಯಾನ ಶಿಬಿರವು ಇಂದಿನಿಂದ ಇದೇ ದಿನಾಂಕ 24ರವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30 ರವರೆಗೆ ನಡೆಯಲಿದೆ.
ನಾಡಿದ್ದು ರಾಜ್ಯ ಸಹಕಾರಿ ಸಮಾವೇಶ
ಸಹಕಾರ ಭಾರತಿ ವತಿಯಿಂದ ಇದೇ ದಿನಾಂಕ 22 ರಂದು ಬೆಳಿಗ್ಗೆ 11 ಕ್ಕೆ ನಗರದ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಸಮುದಾಯ ಭವನದಲ್ಲಿ ರಾಜ್ಯ ಸಹಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ
ಕದಳಿ ವೇದಿಕೆಯಿಂದ ಪ್ರಬಂಧ ಸ್ಪರ್ಧೆ
ಕದಳಿ ಮಹಿಳಾ ವೇದಿಕೆಯ ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯ ರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಹರಪನಹಳ್ಳಿ ಹೆಚ್.ಪಿ.ಎಸ್ ಪದವಿ ಕಾಲೇಜಿನಲ್ಲಿ ಇಂದು `ಕನ್ನಡ ಹಬ್ಬ’
ಹಿರೇಮೇಗಳಗೆರೆ ಪಾಟೀಲ್ ಸಿದ್ದನಗೌಡ ಪದವಿ ಮಹಾ ವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಕ್ರೀಡಾ ಚಟುವಟಿಕೆ ಮತ್ತು ಕನ್ನಡಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಶಾಸಕರಿಗೆ ನೂರು ಕೋಟಿ ಆಫರ್ ಕೇವಲ ಪ್ರಚಾರದ ಗಿಮಿಕ್ಗಾಗಿ ಆರೋಪ
ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ನೀಡಿದವರು ಯಾರು ? ಎಂಬುದನ್ನು ಅವರ ಹೆಸರಿನ ಸಮೇತ ಶಾಸಕ ರವಿ ಗಾಣಿಗ ಅವರು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಹರಿಹರದಲ್ಲಿ ಇಂದು ಶ್ರೀ ಶಿವಾನಂದ ತೀರ್ಥ ಸ್ವಾಮಿಯ ಆರಾಧನೆ
ಹರಿಹರದ ಕೋಟೆ ಬಡಾ ವಣೆಯ ಶ್ರೀ ಓಂಕಾರ ಮಠದಲ್ಲಿ ಶ್ರೀ ಶಿವಾನಂದ ತೀರ್ಥ ಸ್ವಾಮಿ ಗಳವರ 76ನೇ ವರ್ಷದ ಆರಾ ಧಾನ ಮಹೋತ್ಸವವು ಇಂದು ನಡೆಯಲಿದೆ
ನಗರದಲ್ಲಿ ಇಂದು ಶ್ರೀ ಶಿವಾನಂದ ತೀರ್ಥಗುರುಗಳ 76ನೇ ಪುಣ್ಯಾರಾಧನೆ
ದಾವಣಗೆರೆ : ನಗರದ ಜಯದೇವ ವೃತ್ತದಲ್ಲಿನ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ನ ಶ್ರೀ ಗುರುವ ದತ್ತಾತ್ರೇಯ ದೇವಾಲಯದಲ್ಲಿ ಶ್ರೀ ಶಿವಾನಂದ ತೀರ್ಥಸ್ವಾಮಿಗಳವರ 76ನೇ ಪುಣ್ಯಾರಾಧನಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಕನ್ನಡ ರಾಜ್ಯೋತ್ಸವ
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 23ರಿಂದ ಪ್ರವಚನ
ನಗರದ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರಿಂದ 29ರವರೆಗೆ ಪ್ರತಿದಿನ ಸಂಜೆ 7 ರಿಂದ ಪ್ರವಚನ ನಡೆಯಲಿದೆ.
ನಗರದಲ್ಲಿ ಇಂದು ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ
ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ.
ಅತ್ತಿಗೆರೆಯಲ್ಲಿ ಇಂದು ಸಹಕಾರ ಸಪ್ತಾಹದ ಸಮಾರೋಪ
ಸಹಕಾರ ಇಲಾಖೆಗಳ ನೇತೃತ್ವದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಅತ್ತಿಗೆರೆ ಶ್ರೀ ನಂದಿಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ಇಂದು ಬೆಳಿಗ್ಗೆ 11 ಕ್ಕೆ ಹಮ್ಮಿಕೊಳ್ಳಲಾಗಿದೆ.
‘ಆನಿ ತಿಂತೀನಿ, ಕುದುರಿ ತಿಂತೀನಿ? !!..’
ಸುಮಾರು 58 ವರ್ಷಗಳ ಹಿಂದೆ ಇರಬಹುದು, ನಗರದ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಉಪಾಧ್ಯಾಯಿನಿಯಾಗಿ ಗಿರಿಜಮ್ಮ ಎಂಬುವವರು ಇದ್ದರು
ಭದ್ರಾ ನಾಲೆಗಳಲ್ಲಿ 26ಕ್ಕೆ ನೀರು ನಿಲುಗಡೆ
ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ಬೆಳೆಗಳಿಗೆ ಜುಲೈ 29 ರಿಂದ ಹರಿಸಲಾಗುತ್ತಿದ್ದ ನೀರನ್ನು ಇದೇ ದಿನಾಂಕ 26ಕ್ಕೆ ನಿಲುಗಡೆ ಮಾಡಲಾಗುವುದೆಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.
ಜಗಳೂರು ಉತ್ಸವ ; ಸಾಂಸ್ಕೃತಿಕ ಪರಂಪರೆಯ ಸಂಶೋಧನಾ ಕಿರು ಚಿತ್ರ ಪ್ರದರ್ಶನ
ಜಗಳೂರು : ಡಿಸೆಂಬರ್ 28 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಮೆರಾಗಿನ ಕಿರುಚಿತ್ರ ಪ್ರದರ್ಶಿಸಲಾಗುವುದು
ಕೊಕ್ಕನೂರಿನಲ್ಲಿ 24ರಂದು ಬೃಹತ್ ಆರೋಗ್ಯ ಮೇಳ
ಮಲೇಬೆನ್ನೂರು : ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ನಿಟುವಳ್ಳಿಯಲ್ಲಿ ಇಂದು ಶಿವಚಿದಂಬರೇಶ್ವರ ಜಯಂತ್ಯೋತ್ಸವ
ನಿಟುವಳ್ಳಿಯ ಶ್ರೀ ಶಿವಚಿದಂಬರ ಕ್ಷೇತ್ರದಲ್ಲಿ ಶ್ರೀ ಶಿವಚಿದಂಬರೇಶ್ವರ ಜಯಂತ್ಯೋತ್ಸವದ ಪ್ರಯುಕ್ತ ಸಂಸ್ಥಾಪಕ ಗೌರವ ಅಧ್ಯಕ್ಷ ವಿ. ಮೋಹನ್ ದೀಕ್ಷಿತರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಪ್ರಯಾಣಿಕನ ರಕ್ಷಣೆ : ಎನ್.ಲಕ್ಷ್ಮಣ ನಾಯ್ಕಗೆ ಸನ್ಮಾನ
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲು ಚಲಿಸುವ ವೇಳೆ ಪ್ರಯಾಣಿಕರೊಬ್ಬ ಹತ್ತಲು ಪ್ರಯತ್ನಿಸಿ, ಆಯತಪ್ಪಿ ಪ್ಲಾಟ್ ಫಾರ್ಮ್ ಮೇಲೆ ಬಿದ್ದ ವೇಳೆ ಜಿಲ್ಲಾ ಗೃಹ ರಕ್ಷಕ ದಳದ ಎನ್. ಲಕ್ಷ್ಮಣ ನಾಯ್ಕ ತಕ್ಷಣಕ್ಕೆ ಪ್ರಯಾಣಿಕನನ್ನು ಪ್ರಾಣಾಪಾಯದಿಂದ ಪಾರುಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯೋಗ ಗುರು ಪರಶುರಾಮ್ಗೆ ಪ್ರಶಸ್ತಿ
ನಗರದ ಎಸ್ಎಎಸ್ಎಸ್ ಯೋಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಂತರರಾಷ್ಟ್ರೀಯ ಯೋಗ ಪಟ ಎನ್.ಪರಶುರಾಮ್ ಅವರಿಗೆ ‘ಹೆಮ್ಮೆಯ ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ.
ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕು
ಹರಪನಹಳ್ಳಿ : ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕೇ ಹೊರತು, ಅದನ್ನು ನಾಶಪಡಿಸುವ ಕೆಲಸ ಮಾಡಬಾರದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಅಭಿಪ್ರಾಯಿಸಿದರು.
ಹರಿಹರ ಅಮ್ಮನ ಡಬ್ಬಿಗಡಿಗೆಯಲ್ಲಿ 3.38 ಲಕ್ಷ ರೂ. ಕಾಣಿಕೆ ಸಂಗ್ರಹ
ಹರಿಹರ : ನಗರದಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ನಡೆಯವ ಗ್ರಾಮದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಾದ್ಯಂತ ಸಂಚರಿಸಿದ ಡಬ್ಬಿ ಗಡಿಗೆಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು.
ಆಹಾರ ಸಚಿವನಾಗಿದ್ದಾಗ 20 ಲಕ್ಷ ಪಡಿತರ ಕಾರ್ಡ್ ರದ್ದು ಮಾಡಿದ್ದೆ
ನಾನು ಈ ಹಿಂದೆ ಆಹಾರ ಸಚಿವನಾಗಿದ್ದ ಸಂದರ್ಭದಲ್ಲಿ 20 ಲಕ್ಷ ಅನರ್ಹ ಪಡಿತರ ಕಾರ್ಡುಗಳನ್ನು ರದ್ದು ಮಾಡಿದ್ದೆ. ಅನರ್ಹರಿಗೆ ಕಾರ್ಡುಗಳನ್ನು ರದ್ದು ಮಾಡುವುದು ಒಳ್ಳೆಯದೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿದ್ಯಾನಗರ ಇನ್ನರ್ವ್ಹೀಲ್ನಿಂದ ಮಕ್ಕಳ ದಿನಾಚರಣೆ
ವಿದ್ಯಾನಗರ ಇನ್ನರ್ವ್ಹೀಲ್ ಸಂಸ್ಥೆ ವತಿಯಿಂದ ತರಳಬಾಳು ಬಡಾವಣೆಯ ಮಾಗನೂರು ರಾಜಶೇಖರಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಝಾನ್ಸಿ ಕಿಯಾದಿಂದ `ಕಾರ್ನಿವಲ್ ಲಿಮೋಸಿನ್’ ಕಾರ್ ಬಿಡುಗಡೆ
ನಗರದ ಪಿ.ಬಿ. ರಸ್ತೆಯಲ್ಲಿರುವ ಝಾನ್ಸಿ ಕಿಯಾ ಶೋರೂಮ್ನಲ್ಲಿ ಇಂದು ಕಿಯಾ ಕಾರ್ನಿವಲ್ ನೂತನ ಮಾದರಿಯ ಅತ್ಯಾಧುನಿಕ ವ್ಯವಸ್ಥೆಯ `ಕಾರ್ನಿವಲ್ ಲಿಮೋಸಿನ್' ಕಾರನ್ನು ಈಚೆಗೆ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
23 ರಂದು ನಗರದಲ್ಲಿ ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 23ರ ಶನಿವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ-ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಅಂತರ್ ಕಾಲೇಜು ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಚಾಲನೆ
ಅಂತರ್ ಕಾಲೇಜು ವೇಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ನಗರದ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ ಆದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ವೇಟ್ ಲಿಫ್ಟಿಂಗ್ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಜ್ಜಯಿನಿ ಜಗದ್ಗುರು ಜನ್ಮ ವರ್ಧಂತಿ ನೋಟ್ಬುಕ್ ಮತ್ತು ಪೆನ್ನು ವಿತರಣೆ
ಕೊಟ್ಟೂರು : ತಾಲ್ಲೂಕಿನ ಉಜ್ಜಯಿನಿ ಪೀಠದಲ್ಲಿ ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಜನ್ಮ ವರ್ಧಂತಿಯ ನಿಮಿತ್ತ್ಯ ಪೀಠದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ನುಗಳನ್ನು ಮಹಾ ಸನ್ನಿಧಿಯವರ ಅಮೃತ ಹಸ್ತದಿಂದ ಕೊಡಲಾಯಿತು.
ಕ್ಷಯರೋಗ ಪತ್ತೆ ಆಂದೋಲನ
ರಾಣೇಬೆನ್ನೂರು : ಕ್ಷಯರೋಗವು ಒಂದು ಸೋಂಕು ರೋಗವಾಗಿದ್ದು, ಸಾರ್ವಜನಿಕರು ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರ ಮಂಡಲಗಿ ಹೇಳಿದರು.1
ಹರಿಹರದಲ್ಲಿ ಇಂದು ಶ್ರೀ ಶಿರಡಿ ಸಾಯಿಬಾಬಾ ಕಾರ್ತಿಕೋತ್ಸವ
ಪಟೇಲ್ ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಕಾರ್ತಿಕೋತ್ಸವವನ್ನು ಇಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ್ ಪಟೇಲ್ ತಿಳಿಸಿದರು.
ಹರಿಹರ ಎಂಕೆಇಟಿ ಶಾಲೆ ವಿದ್ಯಾರ್ಥಿಗಳಿಗೆ ಜಯ
ಹರಿಹರ : ಭಾರತ್ ವಿಕಾಸ್ ಪರಿಷತ್ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನ ಹಿಂದೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ `ಭಾರತ್ ಕೋ ಜಾನೋ' ರಸ ಪ್ರಶ್ನೆ ಸ್ಪರ್ಧೆಯಲ್ಲಿ ಅರುಣಾಚಲ್ ವಿ. ಲದ್ವಾ ಮತ್ತು ಕುಶಾಲ್ ಪಿ.ಎನ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ನಾಳಿನ ರಾಜ್ಯ ಸಹಕಾರಿ ಸಮಾವೇಶಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು
ಮಲೇಬೆನ್ನೂರು : ದಾವಣಗೆರೆಯಲ್ಲಿ ನಾಳೆ ಹಮ್ಮಿಕೊಂಡಿರುವ `ರಾಜ್ಯ ಸಹಕಾರಿ ಸಮಾವೇಶ'ಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯದರ್ಶಿ ಜಿಗಳಿ ಇಂದೂಧರ್ ಮನವಿ ಮಾಡಿದ್ದಾರೆ.
ಜವಾಹರ್ ಬಾಲ್ ಮಂಚ್ ವತಿಯಿಂದ ಮಕ್ಕಳ ದಿನಾಚರಣೆ
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ನೆಹರೂರವರ ಆಸೆಯಗಿತ್ತು.
ಪತ್ರಕರ್ತರು ಸಮಾಜ ಮುಖಿ ಕಾಯಕ ಮಾಡಬೇಕು
ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ತುಂಬಾ ಗೌರವದ ಸ್ಥಾನವಿದೆ. ಸಮಾಜದ ಓರೆಕೋರೆ ತಿದ್ದುವಂತಹ ಪತ್ರಿಕಾ ವೃತ್ತಿ ಗೌರವ ಕಾಪಾಡುವ ಮೂಲಕ ಸಮಾಜಕ್ಕೆ ಸಾಧ್ಯವಾದ ಒಳ್ಳೆಯದನ್ನು ಮಾಡುವಂತೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಿತನುಡಿದರು.
ರೈತರು ಜೇನು ಹುಳುವಿನಂತೆ ಒಟ್ಟಾಗಿರಬೇಕು
ರೈತರು ಜೇನು ಹುಳುವಿನಂತೆ ಒಟ್ಟಾಗಿರಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಿವಿ ಮಾತು ಹೇಳಿದರು.
ಅಂಬಿಕಾ ಬಡಾವಣೆಯ ನಕ್ಷೆ ರದ್ದು ದೂಡಾ ನಿರ್ಧಾರಕ್ಕೆ ಸ್ವಾಗತ
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ನಗರದ ಅಂಬಿಕಾ ಬಡಾವಣೆಯ ನಕ್ಷೆಯನ್ನು ರದ್ದುಪಡಿಸಿರುವ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಸ್ವಾಗತಿಸಿದ್ದಾರೆ.
ಪತ್ರಕರ್ತ ಕೆ.ಏಕಾಂತಪ್ಪ ಅವರಿಗೆ ರಾಜ್ಯ ದತ್ತಿ ಪ್ರಶಸ್ತಿ
ಕರ್ನಾಟಕ ರಾಜ್ಯ ಎಸ್ಸಿ - ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ 2024ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನಗರದ ಶಿವಮೊಗ್ಗ ಮಲ್ನಾಡವಾಣಿ ಸಂಪಾದಕ ಕೆ. ಏಕಾಂತಪ್ಪ ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ಬಾಸ್ಕೆಟ್ ಬಾಲ್ ತಂಡಕ್ಕೆ ಕೌಶಿಕ್ ಆಯ್ಕೆ
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ನ ಆಟಗಾರ ಕೌಶಿಕ್ ಎ. ಟಿ. ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾನೆ.
`ಐದನೇ ದಿನ ಯಾವಾಗ ??’
ಕಾರ್ತಿಕ ಗೌರಿಗೆ ಒಂಭತ್ತು ದಿನಗಳ ಕಾಲವೂ ಆರತಿ ತೆಗೆದು ಕೊಂಡು ಹೋಗುವವರು ದಿನಕ್ಕೊಂದು ಬಗೆಯ ಆರತಿ ತೆಗೆದುಕೊಂಡು ಹೋಗುತ್ತಿದ್ದರು.
ಮಲೇಬೆನ್ನೂರು: ವಿವಿಧೆಡೆ ಕನಕದಾಸರ ಜಯಂತಿ
ಮಲೇಬೆನ್ನೂರು : ಪಟ್ಟಣದ ವಿವಿಧೆಡೆ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮೀಣ ಜನರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಕಾರಣ
ಹರಪನಹಳ್ಳಿ : ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಾಣಲು ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಿಟುವಳ್ಳಿಯಲ್ಲಿ ಇಂದು – ನಾಳೆ ಶಿವಚಿದಂಬರೇಶ್ವರ ಜಯಂತ್ಯೋತ್ಸವ
ನಿಟುವಳ್ಳಿಯ ಶ್ರೀ ಶಿವಚಿದಂಬರ ಕ್ಷೇತ್ರದಲ್ಲಿ ಶ್ರೀ ಶಿವಚಿದಂಬರೇಶ್ವರ ಜಯಂತ್ಯೋತ್ಸವದ ಪ್ರಯುಕ್ತ ಸಂಸ್ಥಾಪಕ ಗೌರವ ಅಧ್ಯಕ್ಷವಿ. ಮೋಹನ್ ದೀಕ್ಷಿತರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.
ಪಾಕಿಸ್ತಾನದ ಸೈನಿಕರನ್ನು ಬಂಧಿಸಿದ್ದ ದಿಟ್ಟ ಮಹಿಳೆ ಇಂದಿರಾ ಗಾಂಧಿ
ಪಾಕಿಸ್ತಾನದ ಸಾವಿರಾರು ಸೈನಿಕರನ್ನು ಬಂಧಿಸಿದ್ದ ದಿಟ್ಟ ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್.ನಾಗಭೂಷಣ್ ಶ್ಲ್ಯಾಘಿಸಿದರು.
ಉಜ್ವಲ ಭವಿಷ್ಯಕ್ಕೆ ಕಠಿಣ ಶ್ರಮದ ಓದು ಮುಖ್ಯ: ರೇಣುಕಾ
ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಯಾಗಿಯೋ ಅಥವಾ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾದರೆ ಇಂದು ಕಠಿಣ ಪರಿಶ್ರಮದಿಂದ ಓದುವುದು ಅಗತ್ಯ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹೇಳಿದರು.
ನಗರದಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ನಿಂದ ಮಧುಮೇಹ ತಪಾಸಣಾ ಶಿಬಿರ
ನಗರದ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ನಮ್ಮ ನಡೆ ಆರೋಗ್ಯದೆಡೆ ಎಂಬ ಘೋಷಣೆಯೊಂದಿಗೆ ಮಧುಮೇಹ-ಸ್ವಾಸ್ಥ್ಯ ಮೇಳದ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ರಾಜ್ಯ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ
ಜಗಳೂರು : ವಿವಿಧ ಬೇಡಿಕೆಗಳ ಈಡೇರಿಕೆ ಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ತಾ. ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.