ವಿಕಲಚೇತನರು ಮತ್ತು ಅವರ ಅವಲಂಭಿಸಿದ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವುದೇ ಕಷ್ಟ. ಅಂತಹದರಲ್ಲಿ ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಹಣ ವಸೂಲಿ ಮಾಡುವುದು ದೊಡ್ಡ ಪಾಪ ಅಲ್ಲವೇ
ರಂಗ ಮಂದಿರ ನಿರ್ಮಾಣವಾದ ಬಳಿಕ ಕಲಾವಿದರಿಗೆ ತರಬೇತಿ : ಕಡಕೋಳ
ವೃತ್ತಿ ರಂಗಭೂಮಿ ರಂಗಾಯಣವನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆ ನಡೆಯುತ್ತಿದೆ. ರಂಗಮಂದಿರ ನಿರ್ಮಾಣದ ಬಳಿಕ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡಲಾಗುವುದು
ಭ್ರಷ್ಟಾಚಾರದ ಗುಂಡಿ ಮುಚ್ಚಲು ಹಾಸನ ಸಮಾವೇಶ
ಭ್ರಷ್ಠಾಚಾರದ ಗುಂಡಿ ಮುಚ್ಚುವ ಸಲುವಾಗಿ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಜನ ಕಲ್ಯಾಣ ಸಮಾವೇಶ ನಡೆಸಿದೆ. ಮೂರು ಉಪ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಸಮಾವೇಶ ಎಂದಿದ್ದಾರೆ. ಗೆದ್ದಿದ್ದು ಹೇಗೆ ಎಂಬುದು ಗೊತ್ತಿದೆ
ಮಕ್ಕಳ ರಕ್ಷಣೆ ಎಲ್ಲಾ ಇಲಾಖೆ ಅಧಿಕಾರಿಗಳ ಕರ್ತವ್ಯ
ಮಕ್ಕಳೇ ನಮ್ಮ ದೇಶದ ಸಂಪತ್ತಾಗಿದ್ದು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮಕ್ಕಳ ಸಹಾಯವಾಣಿಗೆ ಸಂಪರ್ಕಿಸುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣ ಎಂ.ಕೊಳ್ಳ ತಿಳಿಸಿದರು.
ವಕೀಲರು ಆಧುನಿಕ ತಂತ್ರಜ್ಞಾನ ಕೌಶಲ್ಯ ಅಳವಡಿಸಿಕೊಳ್ಳಿ
ಜಗಳೂರು : ವಿಜ್ಞಾನ ಹಾಗೂ ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದೆ. ’ಕೃತಕ ಬುದ್ದಿಮತ್ತೆ’ ಯನ್ನು ನ್ಯಾಯಾಂಗ ಕ್ಷೇತ್ರದಲ್ಲಿ ಸೃಜನಾತ್ಮಕವಾಗಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಬೇಕಿದೆ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್.ಕೆ. ರೇಷ್ಮಾ ಅಭಿಪ್ರಾಯಪಟ್ಟರು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಖಂಡನೆ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಹಾಗೂ ಧಾರ್ಮಿಕ ಮುಖಂಡರ ಬಂಧನ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಂಚಮಸಾಲಿ : ಮೀಸಲಾತಿ ಹೋರಾಟದಲ್ಲಿ ದೃತಿಗೆಡದೆ ಪಾಲ್ಗೊಳ್ಳಿ
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ವೀರಶೈವ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರಗಳಿಂದ ನಮಗೆ ನ್ಯಾಯ ದೊರಕಿಲ್ಲ
ಶೀಘ್ರ ಹದಡಿ ರಸ್ತೆ ದುರಸ್ತಿಗೆ ಆಗ್ರಹ
ನಗರದ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹೋಗುವ ಹದಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ಥಿ ಪಡಿಸುವಂತೆ ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬುಧವಾರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಇಂದು ರಾಜ್ಯಮಟ್ಟದ ಅಂತರ ಶಾಲಾ-ಕಾಲೇಜು ಹಂತದ `ಸಂಭ್ರಮ್’
ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು ಶಿವಗಂಗೋತ್ರಿ ತೋಳಹುಣಸೆಯಲ್ಲಿ ನಾಳೆ ದಿನಾಂಕ 7 ರ ಶನಿವಾರ ಐದನೇ ಆವೃತ್ತಿಯ ರಾಜ್ಯಮಟ್ಟದ ಅಂತರ್ ಶಾಲಾ-ಕಾಲೇಜು ಹಂತದ `ಸಂಭ್ರಮ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ
ದಾವಣಗೆರೆ ಜಿಲ್ಲಾ ಗೃಹರಕ್ಷಕದಳ ವತಿಯಿಂದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮವು ಇಂದು ಸಂಜೆ 4ಕ್ಕೆ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕವಾಯತು (ಡಿ.ಎ.ಆರ್.) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೆ. ಕೆಂಚನಗೌಡ ನಿಧನಕ್ಕೆ ಜಿಲ್ಲಾ ಕಸಾಪ ಕಂಬನಿ
ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ವಿವಿಧ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಕೆಂಚನಗೌಡ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ನೂಪುರ ನೃತ್ಯೋತ್ಸವ
ನಗರದ ನೂಪುರ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಳೆ ದಿನಾಂಕ 7 ರ ಶನಿವಾರ ಸಂಜೆ 6 ಕ್ಕೆ ನಗರದ ಬಂಟರ ಭವನದಲ್ಲಿ ನೂಪುರ ನೃತ್ಯೋತ್ಸವ- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ರೇಣುಕಾಚಾರ್ಯ ಉಚ್ಚಾಟನೆಗೆ ಒತ್ತಾಯ
ಮನಬಂದಂತೆ ಹೇಳಿಕೆ ನೀಡಿ, ಪಕ್ಷದ ಶಿಸ್ತನ್ನು ಹಾಳು ಮಾಡುತ್ತಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಬೇಕೆಂದು ಹೊನ್ನಾಳಿ ತಾಲ್ಲೂಕು ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಅವರು ಪಕ್ಷದ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ಇಂದು ನಿಕ್ಷಯ್ ವಾಹನಕ್ಕೆ ಚಾಲನೆ
ಕ್ಷಯ ಪ್ರಕರಣಗಳನ್ನು ಪತ್ತೆ ಹಚ್ಚುವ ಅಭಿಯಾನವನ್ನು ಡಿಸೆಂಬರ್ 7 ರಿಂದ ಮಾರ್ಚ್ 17 ರವರೆಗೆ ದೇಶಾ ದ್ಯಂತ ಚಾಲನೆ ನೀಡುತ್ತಿದ್ದು, ಇಂದು ಮಧ್ಯಾಹ್ನ 3 ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹ ಕಚೇರಿ ಬಳಿ ನಿಕ್ಷಯ್ ವಾಹನಕ್ಕೆ ಚಾಲನೆ ನೀಡುವರು.
ಎಲೆಬೇತೂರಿನಲ್ಲಿ ನಾಡಿದ್ದು ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ಕಾರ್ತಿಕೋತ್ಸವ
ಎಲೆಬೇತೂರು ಗ್ರಾಮದ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 9 ರ ಸೋಮವಾರ ಕಾರ್ತೀಕೋತ್ಸವ ನಡೆಯಲಿದೆ. ಬೆಳಿಗ್ಗೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಂಗಳಾರತಿ ನಡೆಯಲಿದೆ.
ಉಕ್ಕಡಗಾತ್ರಿಯಲ್ಲಿ ಇಂದು ಮೌಢ್ಯ ವಿರೋಧಿ ದಿನಾಚರಣೆ
ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಇಂದು ಸಂಜೆ 5 ಗಂಟಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಮೌಢ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ನಾಳೆ ದೇಹದಾರ್ಢ್ಯ ಸ್ಪರ್ಧೆ
ರಾಜ್ಯ ಮಟ್ಟದ ದೇಹದಾರ್ಢ್ಯ `ಕರ್ನಾಟಕ ಸಿರಿ-2024' ಹಾಗೂ `ಸರ್ಕಾರ್ ಮೆನ್ಸ್ ಫಿಸಿಕ್ ಐಕಾನ್ ಚಾಂಪಿಯನ್ಶಿಪ್' ಪಂದ್ಯಾವಳಿಯನ್ನು ನಾಡಿದ್ದು ದಿನಾಂಕ 7ರ ಶನಿವಾರ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ದೇಹದಾರ್ಢ್ಯ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಏಕಬೋಟೆ ತಿಳಿಸಿದರು.
ಆಯವ್ಯಯ : ಪಾಲಿಕೆಯಲ್ಲಿ ನಾಳೆ ಸಭೆ
ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 7ರ ಶನಿವಾರ ಬೆಳಿಗ್ಗೆ 11ಕ್ಕೆ ಪಾಲಿಕೆಯ 2025-26ನೇ ಆಯವ್ಯಯ ಪಟ್ಟಿ ತಯಾರಿಸಲು ಸಲಹೆ ಪಡೆಯಲು ಮೊದಲನೇ ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.
ಹೆಜ್ಜೇನು ದಾಳಿಗೆ ತುತ್ತಾಗಿ ವ್ಯಕ್ತಿ ಸಾವು
ತ್ಯಾವಣಿಗೆ : ಹೆಜ್ಜೇನು ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸಮೀಪದ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಕೆ.ನಾಗೇಂದ್ರಪ್ಪ (66) ಮೃತರು. ದೊಡ್ಡಘಟ್ಟ ಗ್ರಾಮದ ಸಮೀಪ ಇರುವ ತೋಟಕ್ಕೆ ತೆರಳಿದ್ದಾಗ ಜೇನು ನೊಣಗಳು ಕಡಿದಿವೆ.
ನಗರದಲ್ಲಿ ನಾಳೆ ನೇರ ಸಂದರ್ಶನ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 7 ರ ಶನಿವಾರ ಬೆಳಗ್ಗೆ 10 ಗಂಟೆಗೆ ವಾಕ್ಇನ್ ಇಂಟರ್ವ್ಹೀವ್ ಅನ್ನು ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಹರಪನಹಳ್ಳಿಯಲ್ಲಿ ಇಂದು ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿಯು ಇಂದು ಮತ್ತು ನಾಳೆ ಜರುಗಲಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸತೀಶ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಹೆಚ್. ಕೊಟ್ರೇಶ ತಿಳಿಸಿದ್ದಾರೆ.
ನಗರದಲ್ಲಿ ಇಂದು ವಿದ್ಯಾರ್ಥಿಗಳಿಗೆ ಥೀಮ್ ಪಾರ್ಕ್ ಉಚಿತ ವೀಕ್ಷಣೆ
ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರ ವೀಕ್ಷಣೆಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಇಂದು ಉಚಿತ ಪ್ರವೇಶ ಅವಕಾಶ ನೀಡಲಾಗಿದೆ.
ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಗೆ ಕಲಾ ಪ್ರಕಾರಗಳ ಜಾನಪದ ತರಬೇತಿ ಶಿಬಿರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನಾಡಿದ್ದು ನಗರದಿಂದ ಹರಿಹರಕ್ಕೆ ಕಾಲ್ನಡಿಗೆ
ಕುಂದುವಾಡ ಕೆರೆ ವಾಯು ವಿಹಾರ ಬಳಗ ದಿಂದ ನಗರದ ಬಿಎಸ್ಎನ್ಎಲ್ ಸರ್ಕಲ್ನಿಂದ ಹರಿಹರದ ಹರಿಹರೇ ಶ್ವರ ದೇವಸ್ಥಾನದ ಆವರಣದವರೆಗೆ ಕಾಲ್ನಡಿಗೆಯನ್ನು ಇದೇ ದಿನಾಂಕ 8 ರ ಭಾನುವಾರ ಬೆಳಿಗ್ಗೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ
ಮುರುಗಯ್ಯ ನಿಧನಕ್ಕೆ ಕಸಾಪ ಸಂತಾಪ
ನಗರದ ಬಿ.ಎಂ. ಮುರುಗಯ್ಯ ಕುರ್ಕಿ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
11 ರಂದು ಜಗಳೂರು ತಾ.ಪಂ.ನಲ್ಲಿ ಲೋಕಾಯುಕ್ತ ಎಸ್ಪಿ ಅಹವಾಲು ಸ್ವೀಕಾರ
ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್ ಕೌಲಾಪೂರೆ ಅವರು ಜಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇದೇ ದಿನಾಂಕ 11 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ನಗರದಲ್ಲಿ ಇಂದು ಅಂಬೇಡ್ಕರ್ 68ನೇ ಪರಿನಿರ್ವಾಣ ದಿನಾಚರಣೆ
68ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮತ್ತು ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಗುತ್ತದೆ
ನಗರದಲ್ಲಿ ಇಂದು – ನಾಳೆ `ಇಗ್ನಿಟ್ರಾನ್ 2k 24′ ಕಾರ್ಯಕ್ರಮ
ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ನಾಳೆ ದಿನಾಂಕ 6ರ ಶುಕ್ರವಾರ, ನಾಡಿದ್ದು ದಿನಾಂಕ 7 ರ ಶನಿವಾರ ಎರಡು ದಿನಗಳ ಕಾಲ ತಾಂತ್ರಿಕತೆಯ ಕಲಿಕಾ, ಪ್ರತಿಭಾ ಕೌಶಲ್ಯದ ಹಬ್ಬವಾಗಿರುವ ಇಗ್ನಿಟ್ರಾನ್ 2k 24 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ
ಹರಿಹರ ಹಿಂದೂ ರುದ್ರಭೂಮಿಯಲ್ಲಿ ಇಂದು ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಡಾ. ಅಂಬೇಡ್ಕರ್ ಅವರ 68 ನೇ ಮಹಾಪರಿನಿಬ್ಬಣ ಸದ್ಭಾವನಾ ದಿನವನ್ನು ಮೌಢ್ಯ ವಿರೋಧಿ ಪರಿವರ್ತನಾ ದಿನವನ್ನಾಗಿ ಆಚರಿಸಲಾಗುವುದು.
ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆ
ಜಿಲ್ಲಾಡಳಿತ, ಜಿ.ಪಂ, ನೆಹರು ಯುವ ಕೇಂದ್ರ, ಎ.ವಿ.ಕೆ. ಕಾಲೇಜು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 10 ರಂದು ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಇಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
ವಿಶೇಷಚೇತನರು ತ್ರಿಚಕ್ರವಾಹನ ಪಡೆಯಲು ಹಣ ನೀಡದಂತೆ ಮನವಿ
2023-24ನೇ ಸಾಲಿನ ತ್ರಿಚಕ್ರ ವಾಹನದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ವಿಮೆ ಮುಂತಾದ ದಾಖಲಾತಿಗಳು ಫಲಾನುಭವಿಗಳ ಹೆಸರಿನಲ್ಲಿ ನೋಂದಾಯಿತವಾಗಿರುತ್ತದೆ.
ಪೋಟೋಗ್ರಾಫಿ – ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ
ಡ್ರೋನ್ ಆಧಾರಿತ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದೆ.
ಕಾನೂನು, ಕಾಯ್ದೆಗಳಿಗೆ ಸಂವಿಧಾನವೇ ಅಡಿಪಾಯ
ಹರಿಹರ : ಪವಿತ್ರ ವಕೀಲ ವೃತ್ತಿಯ ಮೂಲಕ ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಪದ್ಮಶ್ರೀ ಮುನ್ನೋಳಿ ಹೇಳಿದರು.
ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಿ.ಎಂ. ಹಾಗೂ ಸಚಿವರಿಗೆ ಆಹ್ವಾನ
ಜಿಲ್ಲಾ ಮಾದಿಗ ಮತ್ತು ಚಲವಾದಿ ಸಮಾಜಗಳ ಸಮಾವೇಶವನ್ನು ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 15 ರಂದು ನಗರದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ಮಹಾನಗರಪಾಲಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಸ್ತಿ ಕ್ರೀಡೆ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ
ಹರಪನಹಳ್ಳಿ : ಕುಸ್ತಿ ಕ್ರೀಡೆ ದೇಶದ ಕಲೆಯಾಗಿದ್ದು, ಈ ಕ್ರೀಡೆ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಶ್ರೀ ಪದ್ಮನಾಭ ತೀರ್ಥರು ಮಧ್ವ ಸಿದ್ಧಾಂತವನ್ನು ಪ್ರಕಾಶಿಸಿದವರು : ಗೋಪಾಲಾಚಾರ್ ಮಣ್ಣೂರು
ಶ್ರೀ ಪದ್ಮನಾಭ ತೀರ್ಥರು ಮಧ್ವ ಸಿದ್ಧಾಂತವನ್ನು ಉತ್ತಮ ರೀತಿಯಲ್ಲಿ ಪ್ರಕಾಶ ಪಡಿಸಿದವರು ಎಂದು ಪಂಡಿತ ಗೋಪಾಲಾಚಾರ್ ಮಣ್ಣೂರು ಹೇಳಿದರು.
ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ
ಪರಮಪೂಜ್ಯ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದೇ ದಿನಾಂಕ 13 ರ ಶುಕ್ರವಾರ ಸಂಜೆ 6 ಗಂಟೆಗೆ ಕೊಟ್ಟೂರಿನ ಇಂದು ಕಾಲೇಜ್ನಲ್ಲಿ ಆಯೋಜನೆ ಮಾಡಲಾಗಿದೆ.
ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ
ರಂಗಭೂಮಿ ಕಲಾವಿದರು ಇಂದು ತುಂಬಾ ಕಷ್ಟದಲ್ಲಿದ್ದಾರೆ. ಅಂತಹ ಕಲಾವಿದರುಗಳಿಗೆ ಸರ್ಕಾರ ಮತ್ತು ಸಾರ್ವಜನಿಕ ಪ್ರೇಕ್ಷಕ ಪ್ರಭುಗಳು ಪ್ರೋತ್ಸಾಹ ನೀಡಬೇಕೆಂದು ಮುಂಡಗೋಡು ತಾಲ್ಲೂಕು ಅತ್ತಿವೇರಿ ಬಸವ ಧಾಮದ ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ ಕರೆ ನೀಡಿದರು.
ಒಂಟಿ ಮಹಿಳೆಯರಿಗೆ ರೇಷನ್ ಕಾರ್ಡ್ ನೀಡಲು ಆಗ್ರಹ
ಪತಿಯಿಂದ ದೂರವಾಗಿರುವ, ವಿಧವೆ ಹಾಗೂ ವಿವಾಹವಾಗದೇ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಒಂಟಿ ಮಹಿಳೆಯರಿಗೆ ವಿಶೇಷವಾಗಿ ಪ್ರತ್ಯೇಕ ರೇಷನ್ ಕಾರ್ಡ್ ನೀಡುವಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಒತ್ತಾಯಿಸಿದೆ.
ಬಿತ್ತನೆ, ನಾಟಿ ವೇಳೆ ಮುನ್ನಚ್ಚರಿಕೆ ಕ್ರಮ ಅಗತ್ಯ
ಕೃಷಿ ಬೆಳೆಗಳ ನಿರ್ವಹಣೆ ಕುರಿತು ನಗರದ ವರದಾ ಕೃಷಿಕರ ವೇದಿಕೆ ರೈತರಿಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಮಾಹಿತಿ ನೀಡಿದೆ.
ಮಲೇಬೆನ್ನೂರು ; ಅಂಬೇಡ್ಕರ್ ಮಹಾಪರಿನಿರ್ವಾಣ
ಮಲೇಬೆನ್ನೂರು : ಪಟ್ಟಣದ ಮುಖ್ಯ ವೃತ್ತದಲ್ಲಿ ಮತ್ತು ಎ.ಕೆ. ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನವನ್ನು ಎ.ಕೆ. ಕಾಲೋನಿಯ ಯುವಕರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಗ್ರಂಥಾಲಯದಲ್ಲಿ ಪರಿನಿರ್ವಾಣ ದಿನ
ಚಳ್ಳಕೆರೆ : ನಗರದ ಗ್ರಂಥಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಉಕ್ಕಡಗಾತ್ರಿ; ಮೌಢ್ಯ ವಿರೋಧಿ ದಿನ
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 86ನೇ ಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಯಿತು.
ನಾವೀನ್ಯತೆ ಬಲವಾಗಿದ್ದರೆ ದುಡಿಯುವ ಕೈಗಳಿಗೂ ಬಲ
ಇಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತ ನಿಜವಾಗಿಯೂ ಜಾಗತಿಕ ಶಕ್ತಿಶಾಲಿಯಾಗಿದೆ ಎಂದು ಡಿಎಕ್ಸ್ ಲಕ್ಸ್ಫಾಟ್ ಇಂಜಿನಿ ಯರಿಂಗ್ ನಿರ್ದೇಶಕ ಬ್ರಹ್ಮಚೈತನ್ಯ ಚಿನ್ನಿವರ್ ತಿಳಿಸಿದರು.
ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಬಹು ಮುಖ್ಯ
ಮಹಿಳೆಯರ ಪಾತ್ರ ಜೀವನದಲ್ಲಿ ಬಹು ಮುಖ್ಯವಾದದ್ದು, ಮಹಿಳೆಯರು ದುಡಿಯುವುದರಿಂದ ದೇಶದ ಆರ್ಥಿಕ ಮಟ್ಟ ಸುಧಾರಣೆಯಾಗಿದ್ದು, ದುಡಿಯುವ ಹಣದಲ್ಲಿ ಸ್ವಲ್ಪ ಹಣವನ್ನು ಒಂದೊಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು.
ತಾ|| ಕಸಾಪದಿಂದ ಅಕ್ಕಮಹಾದೇವಿಯ ಆದರ್ಶಗಳ ಕುರಿತು ದತ್ತಿ ಉಪನ್ಯಾಸ
ತಾಲ್ಲೂಕು ಕ.ಸಾ.ಪ. ದಾವಣಗೆರೆ, ಹರಪನಹಳ್ಳಿ ಮುಪ್ಪಣ್ಣ ಸಿದ್ದಮ್ಮ ಪ್ರೌಢಶಾಲೆ ಬೂದಾಳ್ ರಸ್ತೆ ದಾವಣಗೆರೆ ಇವರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.
ನೀಲಗುಂದ ಸಹಕಾರ ಸಂಘದ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಹರಪನಹಳ್ಳಿ : ತಾಲ್ಲೂಕಿನ ನೀಲಗುಂದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಡಿ.15 ರಂದು ನಡೆಯುವ ಚುನಾವಣೆಗೆ ಅರೇಮಜ್ಜಿಗೇರಿ ಗ್ರಾಮದಿಂದ ಹರಪನಹಳ್ಳಿ ನಾಗಪ್ಪ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಸಂವಿಧಾನದ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ
ಅಂಬೇಡ್ಕರ್ರವರ ಜನಪರ ಆಶಯಗಳು ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೊಡ್ಡ ದೇಶಕ್ಕೆ ನೀಡಿದ ಸಮಾನತೆಯ ಸಂವಿಧಾನದ ಬಗ್ಗೆ ಹೆಚ್ಚು ಹೆಚ್ಚಾಗಿ ಜನರ ಮಧ್ಯೆ ಪ್ರಚಾರ ಮಾಡಬೇಕಾಗಿದೆ
ಹರಿಹರಕ್ಕೆ ನಾಳೆ ಕಾಲ್ನಡಿಗೆ
ಕುಂದುವಾಡ ಕೆರೆ ವಾಯು ವಿಹಾರ ಬಳಗದ ವತಿಯಿಂದ ಹೊಸ ವರ್ಷದ ಪ್ರಯುಕ್ತ ದಾವಣಗೆರೆಯಿಂದ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಕದರಮಂಡಲಗಿ ಕಾಂತೇಶ ಸ್ವಾಮಿ ಕಾರ್ತಿಕೋತ್ಸವ, ತೆಪ್ಪೋತ್ಸವ ಇಂದು
ಬ್ಯಾಡಗಿ ತಾಲ್ಲೂಕಿನ ಸುಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ ಸ್ವಾಮಿಯ ಮಹಾಕಾರ್ತಿಕೋತ್ಸವ ಇಂದು ರಾತ್ರಿ 8.30ಕ್ಕೆ ನಡೆಯಲಿದೆ. ನಾಳೆ ಭಾನುವಾರ ರಾತ್ರಿ 10.30ಕ್ಕೆ ತೆಪ್ಪೋತ್ಸವ ನಡೆಯಲಿದೆ.
31 ರಿಂದ ನಗರದಲ್ಲಿ ಪ್ರವಚನ
ಶ್ರೀ ಶಿವಯೋಗೀಶ್ವರ ಭಜನಾ ಸಂಘದ ವತಿಯಿಂದ ಇದೇ ದಿನಾಂಕ 31 ರಿಂದ ಒಂದು ತಿಂಗಳ ಪರ್ಯಂತ ಪುರಾಣ ಪ್ರವಚನವು ಪ್ರತಿದಿನ ಸಂಜೆ 6.30 ರಿಂದ ರಾತ್ರಿ 8 ರವರೆಗೆ ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ನಗರದಲ್ಲಿಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಚಂಪಾಷಷ್ಠಿ
ನಗರದ ರವೀಂದ್ರನಾಥ್ ಬಡಾವಣೆ, ಸುಬ್ರಮಣ್ಯ ನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಅಂಗವಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ, ಅರ್ಚನೆ ಹಾಗೂ ಪೂಜಾ ಕಾರ್ಯಕ್ರಮವಿರುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ನಗರದಲ್ಲಿ ಇಂದು ವಿದ್ಯಾಧೀಶ ಆಚಾರ್ಯ ಗುತ್ತಲ ಮಹಾಭಾರತ ಪ್ರವಚನ, ದೀಪೋತ್ಸವ
ವಿಶ್ವ ಮಧ್ವ ಮಹಾಪರಿಷತ್ತಿನ ದಾವಣಗೆರೆ ಕೇಂದ್ರದ ರಜತ ಮಹೋತ್ಸವ ಅಂಗವಾಗಿ ಪಂಡಿತ ವಿದ್ಯಾಧೀಶ ಆಚಾರ್ಯ ಗುತ್ತಲ ಅವರಿಂದ ಮಹಾಭಾರತ ಪ್ರವಚನ ಕಾರ್ಯಕ್ರಮ ಇಂದಿನಿಂದ ಮೂರು ದಿನ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ.
ಕೈಗೂಡಿದ ದಶಕಗಳ ಕನಸು: ಸಮುದಾಯ ಭವನಕ್ಕೆ ಅಡಿಪಾಯ ಅಭಿವೃದ್ಧಿಯತ್ತ ಆನಗೋಡಿನ ರೈತ ಹುತಾತ್ಮರ ಸ್ಮಾರಕ
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ಹೊನ್ನಾಳಿ ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಾ. ಎಂ.ಆರ್. ಅಶೋಕ್ ಆಯ್ಕೆ
ಹೊನ್ನಾಳಿ : ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಹಾ ಪೋಷಕರಾಗಿರುವ ಹೊನ್ನಾಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿಗೆ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ. ಎಂ.ಆರ್. ಲೋಕೇಶ್ ಆಯ್ಕೆಯಾಗಿದ್ದಾರೆ.
ಹರಿಹರ : ಕಳಚಿ ಬಿದ್ದ ಸ್ವಾಗತ ಕಮಾನಿನ ಆರ್ಸಿಸಿ
ಹರಿಹರ : ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್ಸಿಸಿ ಕಳಚಿ ಬಿದ್ದ ಘಟನೆ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಡೆದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಆಶ್ರಯ ಸಮಿತಿ ಸದಸ್ಯರಾಗಿ ಮಾರುತಿ
ನಗರದ ಆಶ್ರಯ ಸಮಿತಿ ಸದಸ್ಯರ ನ್ನಾಗಿ ಬೇತೂರು ರಸ್ತೆ ದೇವರಾಜ ನಗರದ ಹೆಚ್.ಡಿ.ಮಾರುತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಕ್ಕಳನ್ನು ದುಡಿಸಿಕೊಂಡರೆ ಶಿಕ್ಷಾರ್ಹ ಅಪರಾಧ
ಹದಿನೆಂಟು ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಡಾ. ಬಿ.ಆರ್.ಅಂಬೇಡ್ಕರ್ ಜ್ಯೋತಿ ಯಾತ್ರೆಗೆ ಅದ್ಧೂರಿ ಸ್ವಾಗತ
ಕರ್ನಾಟಕ ದಲಿತ ಸಂಘಟ ನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 67 ನೇ ಮಹಾಪರಿ ನಿರ್ವಾಣದ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆ ಇಂದು ರಾತ್ರಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.
ಜಿ.ಎಂ. ವಿಶ್ವವಿದ್ಯಾಲಯದಿಂದ ರೋಬೋಟಿಕ್ಸ್ – ಆಟೋಮೇಷನ್ ಕುರಿತು ಟಿಂಕರಿಂಗ್ ಕಾರ್ಯಾಗಾರ
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾರಂಭಿಸಿರುವ ಜ್ಞಾನಜ್ಯೋತಿ ಕಾರ್ಯಕ್ರಮದ ಪ್ರವರ್ತಕ ಉಪಕ್ರಮವಾಗಿದ್ದು, ವಿದ್ಯಾರ್ಥಿನಿಯರಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ಪ್ರಾಥಮಿಕ ಗುರಿಯಾಗಿದೆ
ಅಡುಗೆ ಸುರಕ್ಷತೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಎಲ್ಪಿಜಿ ಗ್ಯಾಸ್ ಬಳಕೆಯ ಸುರಕ್ಷಿತ ಕ್ರಮ, ತೈಲ ಮಾರುಕಟ್ಟೆ ಕಂಪನಿಗಳಿಂದ ಪಾಕಶಾಲೆಯ ಕೌಶಲ್ಯಗಳನ್ನು ಆಚರಿಸುವಾಗ ಎಲ್ಪಿಜಿ ನಿರ್ವಹಣೆ ಹಾಗೂ ಅಡುಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ನಗರದ ಜಿನಿಸಿಸ್ ರಿಟ್ರೀಟ್ನಲ್ಲಿ ಈಚೆಗೆ ನಡೆಯಿತು.
9ಕ್ಕೆ ಶ್ರೀ ಗುರು ಕರಿಬಸವೇಶ್ವರ ಕಾರ್ತಿಕ
ನಗರದ ಲೇಬರ್ ಕಾಲೋನಿ 6ನೇ ಕ್ರಾಸ್ನಲ್ಲಿನ ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 9 ರಂದು ಸೋಮವಾರ ಸಂಜೆ 6.30ಕ್ಕೆ ಸ್ವಾಮಿಯ ಕಾರ್ತಿಕ ದೀಪೋತ್ಸವ ಏರ್ಪಡಿಸಲಾಗಿದೆ.
ಕನ್ನಡಪರ ಹೋರಾಟಗಾರ ಸಂತೋಷ್ಗೆ ಪ್ರಶಸ್ತಿ
ನಗರದ ಚನ್ನಗಿರಿ ವಿರುಪಾಕ್ಷಪ್ಪ ಧರ್ಮಶಾಲಾ ಮಂಟಪದಲ್ಲಿ ಇತ್ತೀಚೆಗೆ `ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ' ಪ್ರದಾನ ಸಮಾರಂಭ ಮತ್ತು 69ನೇ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಾಳಿಕಾದೇವಿ ರಸ್ತೆಯಲ್ಲಿರುವ ಪದ್ಮಭೂಷಣ ಡಾ. ರಾಜಕುಮಾರ್ ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಕರ್ನಾಟಕ ಲೋಕಸೇವಾ ಆಯೋಗದಿಂದ ನಾಳೆ ಪಿ.ಡಿ.ಓ ಪರೀಕ್ಷೆ
ಕರ್ನಾಟಕ ಲೋಕಸೇವಾ ಆಯೋಗದಿಂದ ನಾಡಿದ್ದು ದಿನಾಂಕ 7 ಮತ್ತು 8 ರಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೂಪ್ ಸಿ ಹುದ್ದೆಗಳಾದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ 150 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ