ಮಾನ್ಯರೇ,
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನಿಂದ ಬೆಂಗಳೂರುವರೆಗೆ ಹೋಗುವಾಗ ನೆಲಮಂಗಲದಿಂದ ತುಮಕೂರಿನ ಟೋಲ್‌ವರೆಗೆ ರಸ್ತೆಯಲ್ಲಿ ಹಾಕಿರುವ ಹಂಪ್ಸ್‌ಗಳಿಗೆ ಯಾರು ಪರ್ಮಿಶನ್ ಕೊಟ್ಟಿರುವರೋ ಗೊತ್ತಿಲ್ಲ.
ನಿನ್ನೆ ತಾನೇ ಒಂದೇ ಕುಟುಂಬದ ಆರು ಜನ ಕಾರು ಅಪಘಾತದಲ್ಲಿ ಮರಣ ಹೊಂದಿದ್ದು, ಇಂದು ಮತ್ತೊಂದು ಅಪಘಾತ ನಡೆದಿದೆ. ಪ್ರತಿದಿನ ಇದೇ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ನೆಲಮಂಗಲದಿಂದ ತುಮಕೂರು ಮುಟ್ಟುವಷ್ಟರಲ್ಲಿ ಆಸ್ಪತ್ರೆಗೆ ಹೋಗಿ ಬರುವ ಪೇಶೆಂಟ್‌ಗಳು, ವಯಸ್ಸಾದವರು ಇದ್ದರೆ ಅವರ ಗತಿ ದೇವರೇ ಕಾಪಾಡಬೇಕು.
ಯಾಕೆ ಇಲ್ಲಿ ಇಷ್ಟು ರೋಡ್ ಹಂಪ್ಸ ಹಾಕಲಾಗಿದೆ? ಇದರಿಂದ ಯಾರಿಗೆ ಪ್ರಯೋಜನ? ಎಷ್ಟು ಜನರಿಗೆ ಇದರಿಂದ ತೊಂದರೆಯಾಗಿದೆ ಎಂಬುದನ್ನು ತಿಳಿಯಬೇಕಾದರೆ, ಈ ರೋಡಿನಲ್ಲಿ ಚಲಿಸಲೇಬೇಕು. ಇಲ್ಲಿಯವರೆಗೂ ಯಾರೂ ಈ ಬಗ್ಗೆ ಪ್ರಶ್ನೆ ಮಾಡದಿರುವುದು ಕೂಡ ಸೋಜಿಗವೆನಿಸಿದೆ. ಎಲ್ಲಿಯೂ ಇಲ್ಲದ ಈ ರೋಡ್ ಹಂಪ್ಸ್ ಇಲ್ಲಿಯೇ ಇರುವುದು ಏಕೆ.ಎಂಬುದನ್ನು ತಿಳಿಸಬೇಕಾಗಿ ನನ್ನ ವಿನಂತಿ. ಹಾಗೂ ಈ ರೋಡ್ ಹಂಪ್ಸ್‌ಗಳನ್ನು ಸಂಬಂಧಪಟ್ಟವರು ಕೂಡಲೇ ತೆಗೆದು ಹಾಕಲು ಈ ಮೂಲಕ ನನ್ನ ಕಳಕಳಿಯ ಮನವಿ .
– ಜಿ.ಬಿ.ಹಾವೇರಿ, ದಾವಣಗೆರೆ. 9900363666.