ದಾವಣಗೆರೆ, ಮಾ.1- ಶೈಕ್ಷಣಿಕ, ಆರ್ಥಿಕ, ಸಾಮಾಜಿ ಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕಾಟಿಕ್ (ಕಲಾಲ್) ಸಮಾಜ ವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ದಾವಣಗೆರೆ ಸಿಟಿ ಮತ್ತು ಹರಿಹರ ಟೌನ್ ಕಾಟಿಕ್ ಸಂಘದ ಅಧ್ಯಕ್ಷ ಪಿ. ಮಾಲತೇಶ್ ಕಲಾಲ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2011 ರಲ್ಲಿ ರಾಜ್ಯ ಸರ್ಕಾರದ ವತಿಯಿಂದ ಶಿವಮೊಗ್ಗ ಕುವೆಂಪು ವಿ.ವಿ. ಪ್ರೊ. ಎಂ. ಗುರುಲಿಂಗಯ್ಯ ಅವರಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ವರದಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಏಕನಾಥ್ ತಿಲಕ್ ಬನೂಖಂಡೆ, ಸುರೇಶ್ ಗಂಡಗಾಳೆ, ಹೆಚ್. ಶಶಿಕುಮಾರ್, ಸುರೇಶ್ ಕಿರೀಟ್ ಸಿ. ಕಲಾಲ್ ಉಪಸ್ಥಿತರಿದ್ದರು.