ದಾವಣಗೆರೆ, ಮಾ.6- ಹೆಲ್ಮೆಟ್ ವಿಚಾರವಾಗಿ ನಡೆದ ಕಾರ್ಯಾಚರಣೆಯಂತೆ ಅನಧಿಕೃತ ರಾಪಿಡೋ ಬೈಕ್ ಟ್ಯಾಕ್ಸಿ ವಿರುದ್ಧವೂ ಕಾರ್ಯಾಚರಣೆ ಮಾಡುವಂತೆ ಕರ್ನಾಟಕ ಚಾಲಕರ ಒಕ್ಕೂಟವು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಒತ್ತಾಯಿಸಿದೆ.
ನಗರದಲ್ಲಿ ಹೆಲ್ಮೆಟ್ ವಿಚಾರವಾಗಿ ಕಾನೂನು ಪಾಲಿಸುವಂತೆ ದಂಡ ವಿಧಿಸುವ ಅಧಿಕಾರಿಗಳು ಈ ಅನಧಿಕೃತ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ವಿಭಿನ್ನ ರೀತಿಯ ಹೋರಾಟಗಳನ್ನು ಚಾಲಕರ ಒಕ್ಕೂಟ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.