ಸೈಬರ್ ವಂಚನೆ – ಒಳಸುಳಿವು : ನಗರದಲ್ಲಿ ಇಂದು ಜಾಗೃತಿ

ವರ್ತಮಾನ ಫೋರಂ ಫಾರ್ ಇಂಟೆಲೆಕ್ಚುಯಲ್ ಡಿಬೆಟ್ಸ್ ದಾವಣಗೆರೆ ಇವರ ವತಿಯಿಂದ ಇಂದು ಸಂಜೆ 6 ಕ್ಕೆ ‘ಸೈಬರ್ ವಂಚನೆ – ಒಳಸುಳಿವು’ ಜಾಗೃತಿ ಕಾರ್ಯಕ್ರಮವನ್ನು ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ‘ಸೈಬರ್ ವಂಚನೆ – ಒಳ ಸುಳಿವು’ ಮಾದರಿಗಳು, ಮುನ್ನೆಚ್ಚರಿಕೆ ಹಾಗೂ ಕಾನೂನಾತ್ಮಕ ಪರಿಹಾರಗಳು ವಿಷಯದ ಕುರಿತು ಜಾಗೃತಿ ಮೂಡಿಸಲಾಗಿದ್ದು, ವಿಷಯ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮತ್ತು ಬೆಂಗಳೂರಿನ ಸೈಬರ್ ಭದ್ರತೆ ಮತ್ತು ನಿರ್ವಹಣಾ ಸಲಹೆಗಾರ ಎ.ಎಸ್. ಯಶವಂತ್ ಮಾಹಿತಿ ನೀಡಲಿದ್ದಾರೆ.

error: Content is protected !!