ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ಪುನೀತ್ ರಾಜ್ ಕುಮಾರ್ ಬಡಾವಣೆಯಲ್ಲಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ನೂತನ ದೇವಸ್ಥಾನ ಮತ್ತು ನೂತನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದೆ.
ಇಂದು ಸಂಜೆ ಪೂಜೆ, ಧ್ವಜಾರೋಹಣ, ಗಂಗೆ ಪೂಜೆ, ಕಳಸ ಸ್ಥಾಪನೆ, ಗೋ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ಭಾನುವಾರ ಬ್ರಾಹ್ಮೀ ಸಮಯದಿಂದಲೇ ಕಾರ್ಯಕ್ರಮ ಆರಂಭವಾಗಲಿದ್ದು, ಮುತ್ತೈದೆ ಯರೊಂದಿಗೆ ಗಂಗೆ ಮತ್ತು ಕಳಶ ಪೂಜೆಗಳು ಏರ್ಪಾಡಾಗಿವೆ.
ನಂತರ ನಡೆಯುವ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ವಹಿಸುವರು.