ಹರಿಹರ, ಫೆ. 3- ಹರಿಹರ ಪಿಎಲ್ಡಿ ಬ್ಯಾಂಕಿನ ಆಡಳಿತ ಮಂಡಳಿಯ 4 ನಿರ್ದೇಶಕ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಯಿತು. 10 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು.
ಹರಿಹರ ಸಾಲಗಾರರ ಕ್ಷೇತ್ರದಿಂದ ಎಂ. ಪ್ರಭುದೇವ್ 16 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಗೋಪಾಲ್ ಪವಾರ್ 6 ಮತಗಳನ್ನು ಪಡೆದರು. ನಿಟ್ಟೂರು ಸಾಲಗಾರರ ಕ್ಷೇತ್ರದಿಂದ ಗುಳದಹಳ್ಳಿಯ ನಾಗರಾಜ್ ಅವರು 22 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ನಿಟ್ಟೂರಿನ ಉಮಾಪತಿ ಅವರು 10 ಮತಗಳ್ನು ಪಡೆದರು.
ಮಲೇಬೆನ್ನೂರು ಸಾಲಗಾರರಲ್ಲದ ಕ್ಷೇತ್ರದಿಂದ ಕೊಕ್ಕನೂರಿನ ನಂದಿಗೌಡ 26 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಓಂಕಾರಪ್ಪ ಅವರು 16 ಮತಗಳನ್ನು ಪಡೆದರು. ತಾಂತ್ರಿಕ ಕಾರಣದಿಂದ ಬಿಳಸನೂರು ಕ್ಷೇತ್ರದ ಮತ ಎಣಿಕೆ ನಡೆದಿಲ್ಲ ಎನ್ನಲಾಗಿದೆ. ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಚುನಾವಣಾಧಿಕಾರಿಯಾಗಿದ್ದರು.