ಮಾಯಕೊಂಡದಲ್ಲಿ ಇಂದು ನಮ್ಮೂರ ಕನ್ನಡ ಹಬ್ಬ

ಕನ್ನಡ ಯುವಶಕ್ತಿ ಕೇಂದ್ರ ವತಿಯಿಂದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮವನ್ನು ಶ್ರೀ ಆಂಜನೇಯ ಸ್ವಾಮಿ ವೃತ್ತದಲ್ಲಿ ಇಂದು ನಡೆಯಲಿದೆ. 

ಬೆಳಿಗ್ಗೆ 10.30ಕ್ಕೆ ಕನ್ನಡ ತಾಯಿ ಭುವನೇಶ್ವರಿ ಭವ್ಯ ಮೆರವಣಿಗೆ, 11 ಗಂಟೆಗೆ ಮೈಸೂರಿನ ಜೆಎಸ್ಎಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉಷಾ ಹೆಗಡೆ ಅವರಿಂದ ಕನ್ನಡ ಧ್ವಜಾರೋಹಣ ಜರುಗಲಿದೆ.

ಸಂಜೆ 4 ಗಂಟೆಗೆ ದಿ. ಸಿ.ಕೆ.ಪುಟ್ಟಲಿಂಗಪ್ಪ ವೇದಿಕೆಯಲ್ಲಿ ಏರ್ಪಡಾಗಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಆರ್.ಲತಾ ಮಲ್ಲಿಕಾರ್ಜುನ ವಹಿಸುವರು.

ಮುಖ್ಯ ಅತಿಥಿಗಳು : ಶಾಸಕ ಕೆ.ಎಸ್.ಬಸವಂತಪ್ಪ, ಡಾ. ಉಷಾ ಹೆಗಡೆ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಯಕೊಂಡದ ಕರ್ನಾಟಕ ಪಬ್ಲಿಕ್ ಶಾಲಾ ಪ್ರಾಂಶುಪಾಲ ಡಾ. ಸಿ.ಬಸವ ರಾಜಪ್ಪ, ಸಿಪಿಐ ಟಿ.ನಾಗರಾಜ್.

error: Content is protected !!