ದಾವಣಗೆರೆ, ಆ.13- ಜಿಲ್ಲಾ ಮಡಿವಾಳ ಮಾಚಿದೇವ ಸಂಘದಿಂದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ನಾಡಿದ್ದು ದಿನಾಂಕ 15ರೊಳಗೆ ಸ್ವವಿವರವುಳ್ಳ ಅರ್ಜಿಗಳನ್ನು ವಿನೋಬ ನಗರದಲ್ಲಿರುವ ಮಾಚಿದೇವ ಸಮುದಾಯ ಭವನದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಎಂ.ನಾಗೇಂದ್ರಪ್ಪ- 9448000077, ಆರ್.ಎನ್.ಧನಂಜಯ್-9844001462, ಸುರೇಶ್ ಎಂ.ಕೋಗುಂಡೆ- 98804 97271, ಸಿ.ಗುಡ್ಡಪ್ಪ- 8892624949, ಪಿ.ಮಂಜುನಾಥ್- 9980087033ಗೆ ಸಂಪರ್ಕಿಸಬಹುದು.
March 13, 2025