ದಾವಣಗೆರೆ, ಆ. 13 – ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು 5ನೇ ವರ್ಷದ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯು ಇದೇ ದಿನಾಂಕ 17 ಮತ್ತು 18 ರಂದು ನಡೆಯಲಿದೆ.
ದಾವಣಗೆರೆ ಜಿಲ್ಲೆಯಿಂದ ಎಲ್ಲಾ ಯೋಗ ಕ್ರೀಡಾಪಟುಗಳು ಮತ್ತು ನಗರದ ಎಲ್ಲಾ ಯೋಗ ಕೇಂದ್ರಗಳಲ್ಲಿರುವ ಆಸಕ್ತ ಯೋಗ ಕ್ರೀಡಾಪಟುಗಳು ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ನೇರವಾಗಿ ಭಾಗವಹಿಸಲು ಅರ್ಹತೆ ಇದೆ ಎಂದು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಯೋಗಾಚಾರ್ಯ ಎನ್. ಪರಶುರಾಮ್ (9035551568) ತಿಳಿಸಿದ್ದಾರೆ.