ನ್ಯಾಮತಿ, ಜು. 26- ನ್ಯಾಮತಿ ನಗರದ ಪೋಸ್ಟ್ ಆಫೀಸ್ ಹಿಂಭಾಗದ ಮನೆಯೊಂ ದರಲ್ಲಿ ಕಳ್ಳತನವಾಗಿದ್ದು, 1.18 ಲಕ್ಷ ರೂ. ಬೆಲೆಯ ಆಭರಣ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಕಳೆದ ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆ ಮುಂದಿನ ಇಂಟರ್‌ಲಾಕ್ ಬೀಗ ಮುಗಿದು ಒಳ ಪ್ರವೇಶಿಸಿ ಕಳ್ಳತನ ಮಾಡಿ ದ್ದಾರೆ. ಈ ಕುರಿತು ಎನ್.ವಿ. ಹನುಮಂತರಾವ್ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
January 7, 2025