Tag: ನ್ಯಾಮತಿ

Home ನ್ಯಾಮತಿ

ನ್ಯಾಮತಿ ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಸುಧಾ ಆಯ್ಕೆ

ನ್ಯಾಮತಿ : ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಸುಧಾ ಅವರು ಅವಿರೋಧವಾಗಿ ಆಯ್ಕೆಯಾದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಅವರಿಗೆ ಎರಡು ಲಕ್ಷ ದೇಣಿಗೆ ನೀಡಿದ ಇಂಜಿನಿಯರ್‌

ಒಂದು ತಿಂಗಳಿನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಇಂಜಿನಿಯರ್ ಯುವಕ ರಮೇಶ್ ಎರಡು ಲಕ್ಷ ರೂ.ಗಳನ್ನು ದೇಣಿಗೆಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನೀಡಿದರು.

ಚೀಲೂರಲ್ಲಿ ಇಂದು – ನಾಳೆ ವೀರಭದ್ರೇಶ್ವರ ಸ್ವಾಮಿ ಪ್ರವೇಶೋತ್ಸವದ ಕಾರ್ಯಕ್ರಮ

ನ್ಯಾಮತಿ : ತಾಲ್ಲೂಕಿನ  ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವಾಲಯದ ಪ್ರವೇಶೋತ್ಸವ, ಕಳಸಾರೋಹಣ, ಧರ್ಮಸಭೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಾಳೆ ದಿನಾಂಕ 12 ರ ಶುಕ್ರವಾರದಿಂದ 17 ರವರೆಗೆ ಜರುಗಲಿವೆ

ನ್ಯಾಮತಿ : ಹಳೇ ವಿದ್ಯಾರ್ಥಿಗಳಿಂದ ಗೌರವ ಸ್ನೇಹ ಸಮ್ಮಿಲನ

ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮ ವ್ಯಾಪ್ತಿಯ ಅಕ್ಕಪಕ್ಕದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ, ಬದುಕಿನ ದಾರಿ ದೀಪವಾಗಿದ್ದು, ವಿವಿಧ ಸ್ತರಗಳಲ್ಲಿನ ಹುದ್ದೆಗಳ ಕರ್ತವ್ಯ ನಿರ್ವಹಿಸಿ, ಸಮಾಜಮುಖಿಯಾಗಿ ಜೀವಿಸುವುದಕ್ಕೆ ಕಾರಣರಾದ ಗುರುಗಳನ್ನು ಇಂದು ಶಿಷ್ಯಂದಿರು ಗೌರವಿಸುತ್ತಿರುವುದು ವಿಶೇಷ ಹಾಗೂ ಇತರರಿಗೆ ಮಾದರಿಯ ಅರ್ಥಪೂರ್ಣ ಕಾರ್ಯವಾಗಿದೆ

ಬಸವೇಶ್ವರ ದೇಗುಲದ ಪ್ರವೇಶೋತ್ಸವ , ವಿಗ್ರಹ ಪ್ರತಿಷ್ಠಾಪನೆ , ಕಳಶಾರೋಹಣ

ನ್ಯಾಮತಿ : ತಾಲ್ಲೂಕಿನ ಹಳೇಮಳಲಿ ಗ್ರಾಮದ ಶ್ರೀ ಬಸವೇಶ್ವರ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಮತ್ತು ಕಾರ್ಯಕ್ರಮವು ನಾಡಿದ್ದು ದಿನಾಂಕ 29 ರ ಗುರುವಾರದಿಂದ ಮಾರ್ಚ್‌ 3 ರ ಭಾನುವಾರದವರೆಗೆ ನಡೆಯಲಿದೆ.

ಲಂಬಾಣಿ ಜನಾಂಗದ ಅಭಿವೃದ್ದಿಗೆ ಸರ್ಕಾರ ಬದ್ಧ

ನ್ಯಾಮತಿ : ರಾಜ್ಯದಲ್ಲಿರುವ ಲಂಬಾಣಿ ಜನಾಂಗ ವಿಶಿಷ್ಟ ಸಂಸ್ಕೃತಿ ಹೊಂದಿದೆ. ಈ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸವಳಂಗ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ನಾಲ್ವರು ನಿರ್ದೇಶಕರ ಅವಿರೋಧ ಆಯ್ಕೆ

ನ್ಯಾಮತಿ : ತಾಲ್ಲೂಕಿನ ಸವಳಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಐದು ವರ್ಷದ ಅವಧಿಗೆ ನಾಲ್ವರು ನಿರ್ದೇಶಕರ ಅವಿರೋಧ ಆಯ್ಕೆ ನಡೆದು ಎಂಟು ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾಗಿರುವುದಾಗಿ ಚುನಾವಣಾ ಧಿಕಾರಿ ನವೀನ್ ಕುಮಾರ್ ಘೋಷಿಸಿದರು.

ನಾಳೆ ಹೊನ್ನಾಳಿ – ನ್ಯಾಮತಿ ಪಂಚಾಯಿತಿ ಒಕ್ಕೂಟ ಸದಸ್ಯರ ಬೆಂಗಳೂರು ಚಲೋ

ನ್ಯಾಮತಿ, ಫೆ.6- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ, ಮಂಗಳ ವಾರ ತಹಶೀಲ್ದಾರ್ ಪಟ್ಟರಾಜ ಗೌಡರಿಗೆ ಮನವಿ ಅರ್ಪಿಸಿದರು.

ಫೆ.13 ರಿಂದ 15 ರವರೆಗೆ ಸಂತ ಸೇವಾಲಾಲ್‌ರ ಜಯಂತಿ

ನ್ಯಾಮತಿ : ಬರುವ ಫೆಬ್ರವರಿ 13 ರಿಂದ 15 ರ ವರೆಗೆ ನಡೆಯಲಿರುವ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಮಹೋತ್ಸದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸುವಂತೆ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು. 

ರಾಜ್ಯ ಮಟ್ಟದ ಮಳೆಯಾಶ್ರಿತ ಶೇಂಗಾ ಬೆಳೆ ಸ್ಪರ್ಧೆ: ಜಿಲ್ಲೆಗೆ ಪ್ರಥಮ, ದ್ವಿತೀಯ ಸ್ಥಾನ

ನ್ಯಾಮತಿ : ಕೃಷಿ ಇಲಾಖೆಯಿಂದ 2022- 23ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ಮಳೆಯಾಶ್ರಿತ ಶೇಂಗಾ ಬೆಳೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಮೊದಲ ಎರಡೂ ಸ್ಥಾನಗಳನ್ನು ಜಿಲ್ಲೆಯ ರೈತರು ತಮ್ಮದಾಗಿಸಿಕೊಂಡಿದ್ದಾರೆ.

ಬುಲೇರೋ ವಾಹನ ಪಲ್ಟಿ : 3 ಸಾವು

ನ್ಯಾಮತಿ : ಹಸು ಅಡ್ಡಬಂದ ಪರಿಣಾಮ ಬುಲೇರೋ ವಾಹನ ಪಲ್ಟಿಯಾಗಿ ಕ್ಯಾಬಿನ್‌ನಲ್ಲಿದ್ದ ಮೂರು ಮಂದಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟ ಘಟನೆ ತಾಲ್ಲೂಕಿನ ಚಿನ್ನಿಕಟ್ಟೆ ಬಳಿ ನಡೆದಿದೆ.

error: Content is protected !!