ದಾವಣಗೆರೆ, ಜು. 24 – ವಿದೇಶದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡಲಿಚ್ಛಿಸುವ ಪರಿಶಿಷ್ಟ ವರ್ಗ ಮತ್ತು ಜಾತಿಯ ವಿದ್ಯಾರ್ಥಿ ಗಳಿಗೆ ನೀಡುತ್ತಿದ್ದ ಸಹಾಯ ಧನ ಕಡಿತ ಗೊಳಿಸಿದ ರಾಜ್ಯ ಸರ್ಕಾರದ ನಡೆಯನ್ನು ಎಐಡಿಎಸ್‌ಓ ಅತ್ಯುಗ್ರವಾಗಿ ಖಂಡಿಸಿದೆ.
ಪ್ರೋತ್ಸಾಹ ಧನ, ಸಹಾಯ ಧನ ಮತ್ತು ವಿದ್ಯಾರ್ಥಿ ವೇತನ ಸೇರಿದಂತೆ ಶೋಷಿತ ವರ್ಗದ ವಿದ್ಯಾರ್ಥಿಗಳ ಏಳಿಗೆಗಾಗಿ ಜಾರಿಯಾಗಿದ್ದ ಹಲವು ಯೋಜನೆಗಳನ್ನು ಅನುದಾನ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಆಗ್ರಹಿಸಿದೆ.
ಉನ್ನತ ವ್ಯಾಸಂಗ ಮಾಡ ಬಯಸುವ ಬಡ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿ ಹೊರಬೇಕಿದ್ದ ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಕಾಳಜಿ ಮರೆಯುವ ಜತೆಗೆ, ವಿದ್ಯಾರ್ಥಿ ವಿರೋಧಿ ನಿಲುವು ತೋರಿಸುತ್ತಿದೆ ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ದೂರಿದ್ದಾರೆ.