ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ವತಿಯಿಂದ 3ನೇ ವರ್ಷದ ಪುರಿ ಶ್ರೀ ಜಗನ್ನಾಥ ರಥಯಾತ್ರೆಯು ದಾವಣಗೆರಯಲ್ಲಿ ಇಂದು ನಡೆಯಲಿದೆ ಎಂದು ಇಸ್ಕಾನ್ ಜಿಲ್ಲಾ ಮುಖ್ಯಸ್ಥರಾದ ಅವಧೂತ ಚಂದ್ರ ದಾಸರು ತಿಳಿಸಿದ್ದಾರೆ.
ಮಧ್ಯಾಹ್ನ 1.30ಕ್ಕೆ ಮಂಡಿಪೇಟೆಯ ಕೋದಂಡ ರಾಮ ದೇವಸ್ಥಾನದಿಂದ ನೂತನ ರಥದಲ್ಲಿ, ಜಗನ್ನಾಥನ ರಥಯಾತ್ರೆ ಜರುಗಲಿದೆ.
ಸಂಸದರಾದ ಡಾ. ಪ್ರಭಾ ಮಲ್ಲಿಕಾ ರ್ಜುನ್ ರಥಯಾತ್ರೆ ಉದ್ಘಾಟಿ ಸಲಿದ್ದಾರೆ. ಸಂಜೆ 5ಕ್ಕೆ ಜಗನ್ನಾ ಥನ ಮಹಾ ಮಂಗಳಾರತಿ ಆದ ನಂತರ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸಮಾ ರೋಪ ನಡೆಯಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಸಮಾರೋಪ ಕಾರ್ಯ ಕ್ರಮದಲ್ಲಿ ನೃತ್ಯ, ನಾಟಕ ಮತ್ತು ಗುರುಗಳಿಂದ ಆಶೀರ್ವಚನ ಹಾಗೂ ಪ್ರಸಾದ ವ್ಯವಸ್ಥೆ ಆಯೋಜಿಸಿದೆ ಎಂದರು.