ರಾಣೇಬೆನ್ನೂರು ಸಮೀಪದ ಐರಣಿ ಹೊಳೆಮಠದ ಮಹಾ ತಪಸ್ವಿ ಶ್ರೀ ಗುರು ಮುಪ್ಪಿನಾರ್ಯ ಮಹಾತ್ಮಾಜಿಯವರ 41ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀ ನಿಂಗಜ್ಜ ಸ್ವಾಮಿಯವರ 10ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಐರಣಿ ಗ್ರಾಮದ ಶ್ರೀ ಗುರುಕುಲ ಕ್ಷೇತ್ರ ಮನೆ ಮಠದಲ್ಲಿ ಇಂದು ನಡೆಯಲಿದೆ.
ಅಂದು ಪ್ರಾತಃಕಾಲ 9 ಗಂಟೆಗೆ ಚಳಗೇರಿಯ ಶ್ರೀ ಚನ್ನಯ್ಯ ಶಾಸ್ತ್ರಿಗಳವರಿಂದ ಸಾಮೂಹಿಕ ಶ್ರೀ ಪಂಚಾಕ್ಷರಿ ಮಹಾ ಮಂತ್ರ ಜಪದೊಂದಿಗೆ ಶ್ರೀಗಳವರ ಪಾದುಕಾಭಿಷೇಕ, ಬಿಲ್ವಾರ್ಚನೆ ಪೂಜೆ ಜರುಗಲಿದೆ. ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ಏರ್ಪಾಡಾಗಿದೆ.
ಈ ಎಲ್ಲಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಗಜದಂಡ ಮಹಾಸ್ವಾಮೀಜಿ ವಹಿಸುವರು.