ಸಾಣೇಹಳ್ಳಿ, ಮೇ 28- ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಇಲ್ಲಿನ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2024-25ನೇ ಸಾಲಿನ ರಂಗಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸುಸಜ್ಜಿತ ರಂಗ ಶಾಲೆಗೆ ಸೇರ ಬಯಸುವ ಆಸಕ್ತರು ಕನಿಷ್ಠ ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹಾಗೂ ಪದವಿ ಹೊಂದಿರಬೇಕು. ರಂಗಶಾಲೆಯ ವೆಬ್‌ಸೈಟ್ ಆದ www.theatreschoolsanehlli.org ಅಲ್ಲಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಜೂನ್ 25ರ ಒಳಗಾಗಿ `ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-577-515 ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ. ಈ ವಿಳಾಸದ ರಂಗಶಾಲೆಗೆ ಅರ್ಜಿ ಸಲ್ಲಿಸಲು ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ 9448398144 ಅಥವಾ 8861043553 ಸಂಪರ್ಕಿಸಿ.
December 24, 2024