ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಬೆಸ್ಕಾಂ ಎಇಇ

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಬೆಸ್ಕಾಂ ಎಇಇ

ದಾವಣಗೆರೆ, ಮೇ 28- ತಾಲ್ಲೂಕಿನ ನೇರಿಗೆ ಗ್ರಾಮದ ದಂಬಳಿ ಮಾದೇಶ್ವರಪ್ಪ ಅವರ ಜಮೀನಿನಲ್ಲಿ ಹಾದು ಹೋದ ಬೀಳುವ ಸ್ಥಿತಿಯಲ್ಲಿದ್ದ 11 ಕೆ.ವಿ ವಿದ್ಯುತ್‌ ಲೈನ್‌ನ ಕಂಬಗಳನ್ನು ಆನಗೋಡು ಬೆಸ್ಕಾಂ ಅಧಿಕಾರಿಗಳು ಶನಿವಾರ ಸರಿಪಡಿಸಿದ್ದಾರೆ.

ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್‌ ಕಂಬಗಳು, ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಲು ಭಯ ತರಿಸಿದ್ದವು. ಈ ಹಿನ್ನೆಲೆ `ಬೀಳುತ್ತಿರುವ ಕಂಬದಿಂದ ಕೃಷಿಗೆ ಅಡ್ಡಿ’ ಎಂಬ ಶೀರ್ಷಿಕೆಯಡಿ ಮೇ 24ರಂದು `ಜನತಾವಾಣಿ’ಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಬೆಸ್ಕಾಂ ಅಧಿಕಾರಿಗಳು, ರೈತರ ಕೃಷಿ ಕಾರ್ಯಕ್ಕೆ ವಿಘ್ನವಾಗಿದ್ದ ಲೈಟ್‌ ಕಂಬಗಳನ್ನು ಸರಿಪಡಿಸಿದ್ದರಿಂದ ರೈತರಲ್ಲಿ ಹಾಗೂ ನೇರಿಗೆ ಗ್ರಾಮಸ್ಥರಲ್ಲಿ ಸಂತಸ ತಂದಿದೆ. ತಾಲ್ಲೂಕಿನ ಆನಗೋಡು ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ನೇರಿಗೆ ಗ್ರಾಮದಿಂದ ಕೊಡಗನೂರಿಗೆ ಹೋಗುವ ಮಾರ್ಗದ ದೊಡ್ಡರಂಗವ್ವನಹಳ್ಳಿಯ ಜಮೀನುಗಳಿಗೆ ಹೋದ ಎಲ್ಲ ವಿದ್ಯುತ್‌ ಕಂಬಗಳನ್ನು ಸರಿಪಡಿಸಿದ್ದಾರೆ ಎಂದು ರೈತರು `ಜನತಾವಾಣಿ’ಗೆ ತಿಳಿಸಿದ್ದಾರೆ.

error: Content is protected !!