ಭದ್ರಾದಿಂದ ನದಿಗೆ ನೀರು ಹರಿಸುವುದಕ್ಕೆ ವಿರೋಧ

ದಾವಣಗೆರೆ, ಮೇ 22 – ತುಂಗಭದ್ರಾ ನದಿಗೆ ಭದ್ರಾ ಅಣೆಕಟ್ಟೆಯಿಂದ ಪ್ರತಿದಿನ 2000 ಕೂಸೆಕ್ಸ್ ನೀರನ್ನು 6 ದಿನ ಹರಿಸಲು ಸರ್ಕಾರ ತೀರ್ಮಾನಿಸಿರುವುದನ್ನು ಭಾರತೀಯ ರೈತ ಒಕ್ಕೂಟ ವಿರೋಧಿಸಿದೆ.

ಭದ್ರಾ ನದಿಪಾತ್ರದಲ್ಲಿ ಮಳೆಯಾಗಿದೆ. ಹರಿಹರದ ಬಳಿ ನದಿಯಲ್ಲಿ ಈಗ 6 ರಿಂದ 8 ಸಾವಿರ ಕ್ಯೂಸೆಕ್ ಹರಿವಿದೆ. ಹೀಗಿರುವಾಗ ಅಣೆಕಟ್ಟೆಯಿಂದ ನೀರು ಬಿಡುವ ಅಗತ್ಯವಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಶಾಮನೂರು ಲಿಂಗರಾಜ್ ಹೇಳಿದ್ದಾರೆ.

ಗದಗ, ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಭದ್ರಾ ನದಿಯ ಮೂಲಕ ಮೇ 22ರ ರಾತ್ರಿ 10 ಗಂಟೆಯಿಂದ ಮೇ 28ರವರೆಗೆ ನೀರನ್ನು ಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

error: Content is protected !!