ನಗರದಲ್ಲಿ ಇಂದು ಚಿಂತನಾ ಗೋಷ್ಠಿ

ಕರ್ನಾಟಕ ಸಾಂಸ್ಕೃತಿಕ ಅಭಿವೃದ್ಧಿ ಪರಿಷತ್ ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ಸಹಯೋಗದೊಂದಿಗೆ ಬುದ್ದ ಪೂರ್ಣಿವೆ ಅಂಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಗಾಂಧೀ ಭವನದಲ್ಲಿ ಚಿಂತನಾ ಗೋಷ್ಠಿ ಹಾಗೂ ಕವಿಗೋಷ್ಠಿ  ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಂಸ್ಕೃತಿಕ ಅಭಿವೃದ್ಧಿ ಪರಿಷತ್‌ನ ಅಧ್ಯಕ್ಷ ಎಸ್. ಅಜಯ್ ಕುಮಾರ್ ತಿಳಿಸಿದ್ದಾರೆ

ತಿಂಗಳ ಅಂಗಳ ಬಳಗದ ಎಲ್ಲಾ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಬುದ್ಧ ಪೂರ್ಣಿಮೆ ಕುರಿ ತಂತೆ ಒಂದು ಕವನ ವಾಚಿಸಿ, ಚಿಂತನಾ ಗೋಷ್ಠಿ ಯಲ್ಲಿ  ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಸಾಂಸ್ಕೃತಿಕ ಅಭಿವೃದ್ಧಿ ಪರಿಷತ್‌ನ ಕಾರ್ಯಕ್ರಮ ಸಂಚಾಲಕ ಮಹಾಂತೇಶ್ ಬಿ. ನಿಟ್ಟೂರ್, ತಾಜು ದ್ದೀನ್ ಬೇತೂರು, ತಿಂಗಳ ಅಂಗಳ ಬಳಗದ ಸಂಚಾ ಲಕ ಗಂಗಾಧರ ಬಿ.ಎಲ್. ನಿಟ್ಟೂರ್ ತಿಳಿಸಿದ್ದಾರೆ. 

error: Content is protected !!