ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ

ಅಕ್ಕಮಹಾದೇವಿ ಸಮಾಜ ದಲ್ಲಿ ಇಂದು ಹುಣ್ಣಿಮೆ ಕಾರ್ಯ ಕ್ರಮದ ಅಂಗವಾಗಿ ಬಸವೇಶ್ವರ ಜಯಂತಿ ಹಾಗೂ ತಾಯಂದಿರ ದಿನಾಚರಣೆ ಏರ್ಪಡಿಸಲಾಗಿದೆ. 

ಬಸವಣ್ಣನವರ ಕುರಿತು ಹರಿ ಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಸೌಭಾಗ್ಯ ಎಸ್. ಹಿರೇಮಠ ಮಾತನಾಡುವರು.

ಅಕ್ಕಮಹಾದೇವಿ ಸಮಾಜದ  ಆವರಣ ದಲ್ಲಿ  ಸಂಜೆ 5 ಕ್ಕೆ ನಡೆಯುವ ಕಾರ್ಯ ಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ‌. ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು,  ಶ್ರೀಮತಿ ನೀಲಗುಂದ ಜಯಮ್ಮ ಅವರು ಚಿಂತನ-ಮಂಥನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

ಆಶಾ ಚಿತ್ರಕಿ ಅವರಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ಶಾಂತಾ ಯಾವಗಲ್ ಅವರು ಸಂಯೋಜಿಸಿರುವ ಕಾರ್ಯಕ್ರಮದಲ್ಲಿ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.

error: Content is protected !!