ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಮೇ 22- ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಉನ್ನತ ಶಿಕ್ಷಣ ಪಡೆಯಲು ಇಚ್ಚಿಸುವ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸ ಬಹುದು. ಇದೇ ದಿನಾಂಕ 25ರೊಳಗಾಗಿ ತಮ್ಮ ದಾಖಲೆಗಳೊಂದಿಗೆ ಎಂ.ಸಿ.ಸಿ. `ಬಿ ಬ್ಲಾಕ್‌ನ 3ನೇ ಮುಖ್ಯರಸ್ತೆ, 3ನೇ ಅಡ್ಡ ರಸ್ತೆಯಲ್ಲಿನ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ಗೆ ಸಂಪರ್ಕಿಸಬಹುದು. ವಿವರಕ್ಕೆ 9980557155 ಸಂಪರ್ಕಿಸಿ.

error: Content is protected !!