ಬಾಡಾ ಕ್ರಾಸ್ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ 279ನೇ ಬುದ್ಧ ಪೌರ್ಣಿಮೆ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ.
ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಪುಣ್ಯಾಶ್ರಮದ ಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ, ನಿರ್ದೇಶಕ ಜಿ.ಹೆಚ್. ಯಲ್ಲಪ್ಪ ಉಪಸ್ಥಿತರಿರುವರು.
ಇಂದಿನ ಪ್ರಸಾದ ಸೇವೆಯನ್ನು ರಾಜಗುಪ್ತ ಲಿಂ. ಶ್ರೀಮತಿ ಪಿ.ಆರ್. ಶಾರದಾ ಮತ್ತು ಸಹೋದರರು ಮತ್ತು ಮಕ್ಕಳು, ಮೊಮ್ಮಕ್ಕಳು ಚೈತನ್ಯ ಶಿವಯೋಗಿ ಗಂಡಸಿ ಕುಟುಂಬ ಹಾಗೂ ಲಿಂ. ಶ್ರೀಮತಿ ಲಲಿತಮ್ಮ, ಹೆಚ್. ಬಸವರಾಜಪ್ಪ ಮತ್ತು ಮಕ್ಕಳು ಹಾಗೂ ಶ್ರೀಮತಿ ಬಾರಿಕರ ಕರಿಯವ್ವ ವಹಿಸಿಕೊಂಡಿದ್ದಾರೆ.