ದಾವಣಗೆರೆ, ಮೇ 14 – ನಗರದ ಲಲಿತಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಸತಿಯುತ ಶಾಲೆಗೆ ಶೇ. 100 ರಷ್ಟು ಫಲಿತಾಂಶ ಲಭಿಸಿದೆ. ಬಿ. ಪ್ರೇಮಾ, ವಿದ್ಯಾರ್ಥಿನಿಯು 455 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಕೆ.ಎಸ್. ಪ್ರಜ್ವಲ್ 444, ಜಿ.ಸಿ. ನಯನ 437, ಎಂ. ಚೈತನ್ಯ 413, ವಿ. ಚಿನ್ಮಯಿ 408, ಅಂಕಗಳನ್ನು ಗಳಿಸಿದ್ದಾರೆ. 10 ವಿದ್ಯಾರ್ಥಿಗಳ ಡಿಸ್ಟಿಂಕ್ಷನ್, 31 ವಿದ್ಯಾರ್ಥಿಗಳ ಪ್ರಥಮ ದರ್ಜೆ, 17 ವಿದ್ಯಾರ್ಥಿಗಳ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಇ.ಆರ್ ಕಾರ್ಯದರ್ಶಿ ಡಾ. ಎಂ.ಇ. ರವಿರಾಜ ಅಭಿನಂದಿಸಿದ್ದಾರೆ.
January 5, 2025