ಬಸವ ಜಯಂತಿ ಅಂಗವಾಗಿ ಮಜ್ಜಿಗೆ ವಿತರಣೆ

ಬಸವ ಜಯಂತಿ ಅಂಗವಾಗಿ ಮಜ್ಜಿಗೆ ವಿತರಣೆ

ದಾವಣಗೆರೆ, ಮೇ 14 – ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಬಸವ ಬಳಗ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಶುಕ್ರವಾರ ಬಸವ ಜಯಂತಿ ಅಂಗವಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಬಿ. ಪರಮೇಶ್ವರಪ್ಪ, ಅಜಯ್ ಕುಮಾರ್, ಜಾಗತಿಕ ಲಿಂಗಾಯತ ಮಹಾಸಭೆಯ ಬಸವನಾಳು ಮರುಳಸಿದ್ದಯ್ಯ, ಬಸವ ಬಳಗದ ಕಾರ್ಯದರ್ಶಿ ವೀಣಾ ಮಂಜುನಾಥ್, ಆವರಗೆರೆ ರುದ್ರಮುನಿ, ಶಿವಯೋಗಿ, ಶಿವನಕೆರೆ ಬಸವಲಿಂಗಪ್ಪ, ಮಂಜುಳಾ ಬಸವಲಿಂಗಪ್ಪ ಮತ್ತಿತರರಿದ್ದರು.

error: Content is protected !!