ನಗರದಲ್ಲಿ ಇಂದಿನಿಂದ `ನಿನಾದ- 9′ ಗೀತ ಗಾಯನ ತರಬೇತಿ ಶಿಬಿರ

ನಗರದಲ್ಲಿ ಇಂದಿನಿಂದ `ನಿನಾದ- 9′  ಗೀತ ಗಾಯನ ತರಬೇತಿ ಶಿಬಿರ

ಸುಶ್ರಾವ್ಯ ಸಂಗೀತ ವಿದ್ಯಾಲಯದ ವತಿಯಿಂದ   ಇಂದಿನಿಂದ 5 ದಿನಗಳ ಕಾಲ ‘ನಿನಾದ-9’ ಗೀತ ಗಾಯನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  

ಈ ಶಿಬಿರದಲ್ಲಿ ನಾಡಿನ ಹೆಮ್ಮೆಯ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಆಯ್ದ 10 ಗೀತೆಗಳ ಗಾಯನ ತರಬೇತಿ ನೀಡಲಾಗುವುದು. ಕನ್ನಡ ನಾಡು-ನುಡಿ, ಪ್ರಕೃತಿ ಸಂರಕ್ಷಣೆ, ಮಾತೃವಾತ್ಸಲ್ಯ, ಭಾವೈಕ್ಯತೆ, ಸಂಸ್ಕಾರ ಹಾಗೂ ನೀತಿಗಳನ್ನೊಳಗೊಂಡ ವಿವಿಧ ಗೀತೆಗಳ ಕಲಿಕೆಯು ಗಾಯನದೊಂದಿಗೆ  ಉತ್ತಮ ವ್ಯಕ್ತಿತ್ವಕ್ಕೆ ಪ್ರೇರಣೆಯಾಗಬಲ್ಲವು.

ಶಿಬಿರದಲ್ಲಿ ಗಾಯನದ ಜೊತೆಗೆ ಕವಿಯ ಜೀವನ, ಸಾಧನೆ ,ಸಾಹಿತ್ಯ ರಚನೆ ಕುರಿತ ಮಾಹಿತಿಯನ್ನೂ ತಿಳಿಸಿ ಕೊಡಲಾಗುತ್ತದೆ. ರಸಪ್ರಶ್ನೆ, ಗಾದೆ, ಒಗಟು ಮುಂತಾದ ಚಟುವಟಿಕೆಗಳೂ, ಸವಿಯಲು ರುಚಿಯಾದ ತಿನಿಸುಗಳೂ ಇರಲಿವೆ. ಶಿಬಿರಾರ್ಥಿಗಳಿಗೆ ಹಾಡಿನ ಪುಸ್ತಕ, ಆಯ್ದ ಗೀತೆಗಳ ಕರೋಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. 6 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದ ಆಸಕ್ತರು(ಸ್ತ್ರೀ/ಪುರುಷ) ಭಾಗವಹಿಸಬಹುದು

ವಿದ್ಯಾಲಯದ ಸಂಸ್ಥಾಪಕರಾದ ಶ್ರೀಮತಿ ಯಶಾ ದಿನೇಶ್ ಅವರ ಪರಿಕಲ್ಪನೆಯಲ್ಲಿ ಈ ಶಿಬಿರ ಏರ್ಪಾಡಾಗಿದೆ. ವಿವರಕ್ಕೆ ಶ್ರೀಮತಿ ಯಶಾ ದಿನೇಶ್  (9449808886) ಅವರನ್ನು ಸಂಪರ್ಕಿಸಬಹುದು..

error: Content is protected !!