ಜೈನ್ ವಿದ್ಯಾಲಯ, ಸಿ.ಬಿ.ಎಸ್.ಇ

ದಾವಣಗೆರೆ, ಮೇ 14 – ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ನಗರದ ಜೈನ್ ವಿದ್ಯಾಲಯ, ಸಿ.ಬಿ.ಎಸ್.ಇ ಶೇ. 100% ರಷ್ಟು ಫಲಿತಾಂಶ ಲಭಿಸಿದೆ.

ಶಾಲೆಯ ಮಕ್ಕಳು 4 ಡಿಸ್ಟಿಂಕ್ಷನ್, 23 ಅತ್ಯುನ್ನತ ಶ್ರೇಣಿ, 10 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸುಜಿತ್‍ಕುಮಾರ ದೀಪ್‍ಚಂದ ಶಾ ಮತ್ತು ದೀಪಾಲಿ ಸುಜಿತ್‍ಕುಮಾರ ಶಾ ಇವರ ಪುತ್ರಿ ಅಂಜಲಿ ಸುಜಿತ್‍ಕುಮಾರ ಶಾ 91.2 % ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.  ಆರ್.ಜೈನ್. ಸಂತೋಷ ಕುಮಾರ್ ಮತ್ತು ಎಸ್.ಜೈನ್. ಭಾವನ ಇವರ ಪುತ್ರ ಎಸ್.ಜೈನ್. ಜೈನಮ್ 88 % ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರು, ಶಿಕ್ಷಕರು ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. 

error: Content is protected !!