ಗಾಂಧಿ ಭವನದಲ್ಲಿ ಚಿಂತನಾಗೋಷ್ಠಿ

ಗಾಂಧಿ ಭವನದಲ್ಲಿ ಚಿಂತನಾಗೋಷ್ಠಿ

ದಾವಣಗೆರೆ, ಮೇ 14- ನಗರದ ಗಾಂಧಿ ಭವನದಲ್ಲಿ ಗಾಂಧಿ ಭವನ ಹಾಗು ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪ್ರಥಮ ಚಿಂತನ ಗೋಷ್ಠಿ ಆರಂಭಿಸಲಾಯಿತು.

ಸಂತೇಬೆನ್ನೂರಿನ  ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ತಾಜುದ್ದೀನ್ ಬೇತೂರ್ ಮತ್ತು ತ್ಯಾವಣಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ  ಮಹಾಂತೇಶ್ ನಿಟ್ಟೂರು ಅವರನ್ನು ಸಂಚಾಲಕರಾಗಿ ಸ್ವಯಂ ಪ್ರೇರಣೆಯಿಂದ ಕಾರ್ಯ ನಿರ್ವಹಣೆ ಮಾಡಲು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಉತ್ತರಾದಿ ಸಂಘದ ಉಷಾರಾಣಿ, ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಸ್. ಅಜಯಕುಮಾರ್, ಗಾಂಧೀ ಗ್ರಾಮ ಸೇವಾಶ್ರಮದ ಸಾಧಕ ಕಡ್ಲೆಬಾಳ್ ಪ್ರಕಾಶ್, ಗ್ರಾಮ ಸ್ವರಾಜ್ಯ ಅಭಿಯಾನದ ಆವರಗೆರೆ ರುದ್ರಮುನಿ, ಗಾಂಧಿ ಭವನದ ಗ್ರಂಥಪಾಲಕ  ಈಶ್ವರ್ ಭಾಗವಹಿಸಿದ್ದರು.

error: Content is protected !!