ಎನ್.ಟಿ. ಎರ್ರಿಸ್ವಾಮಿ ಅವರ `ಬ್ಯಾಂಕಾಯಣ’ ಕೃತಿ ಲೋಕಾರ್ಪಣೆ

ಎನ್.ಟಿ. ಎರ್ರಿಸ್ವಾಮಿ ಅವರ `ಬ್ಯಾಂಕಾಯಣ’ ಕೃತಿ ಲೋಕಾರ್ಪಣೆ

ಬೆಂಗಳೂರು, ಮೇ 17- ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಾಯ ಮಾಡುವುದರಿಂದ ಬದುಕಿನಲ್ಲಿ ಸಂತೋಷ ಹಾಗೂ ಆತ್ಮತೃಪ್ತಿ ಕಂಡುಕೊಳ್ಳಬಹುದು ಎಂದು ಕೆನರಾ ಬ್ಯಾಂಕ್‌ನ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕಚಂದ್ರ ಹೇಳಿದರು.

ಇಲ್ಲಿನ ಜೈ ಭೀಮ್ ಭವನದಲ್ಲಿ ಕೆನರಾ ಬ್ಯಾಂಕ್ ಹಾಗೂ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ ನಡೆದ `ಅಂಬೇಡ್ಕರ್ ಜಯಂತಿ’ ಮತ್ತು `ಬ್ಯಾಂಕಾಯಣ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್.ಟಿ. ಎರ್ರಿಸ್ವಾಮಿ ಅವರ ಸಾರ್ಥಕ ಬದುಕು ಮತ್ತು ವೃತ್ತಿ ಕಥನವು ಬ್ಯಾಂಕಿನ ಸಮಸ್ತ ಸಿಬ್ಬಂದಿಗೆ ಮಾರ್ಗದರ್ಶನವಾಗಲಿ  ಎಂದು ಆಶಿಸಿದರು.

ಹೃದಯರೋಗ ತಜ್ಞ ಡಾ.ಬಿ.ಎಚ್ ನಟೇಶ್‌ ಅವರು ಅಂಬೇಡ್ಕರ್ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು.

ಕೆನರಾ ಬ್ಯಾಂಕ್ ಪ್ರಧಾನ ಕಛೇರಿಯ ಮಹಾ ಪ್ರಬಂಧಕರಾದ ಪಿ. ಗೋಪಾಲಕೃಷ್ಣ, ರಾಮನಾಯ್ಕ್‌, ಹಿರಿಯ ಪತ್ರಕರ್ತೆ ಮಂಜುಶ್ರೀ ಕಡಕೋಳ, ಹಿರಿಯ ಪತ್ರಕರ್ತ ಟಿ.ಎನ್. ಷಣ್ಮುಖ, ಸಾಹಿತಿ ಮಲ್ಲಿಕಾರ್ಜುನ್ ಕಡಕೋಳ ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!