ದಾವಣಗೆರೆ, ಮೇ 5 – ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ವೋಟ್ ಹಾಕಿಸಿಕೊಳ್ಳಲು ಇಟ್ಟುಕೊಂಡಿದೆ. ಆದ್ದರಿಂದ ಇಸ್ಲಾಂನವರು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಅಭ್ಯರ್ಥಿ ತಸ್ಲಿಂ ಬಾನು ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ಸಿಟಿಗೆ ಕೋಟ್ಯಾಂತರ ಹಣ ವ್ಯಯಿಸಿದ್ದರೂ ನಗರದ ಕೆಲವೆಡೆ ಚರಂಡಿ, ರಸ್ತೆಗಳು ಅಭಿವೃದ್ಧಿಯಾಗಿಲ್ಲ ಎಂದು ದೂರಿದರು. ಮುಸಲ್ಮಾನರನ್ನು ದುಡಿಸಿಕೊಳ್ಳುವ ಕಾಂಗ್ರೆಸ್ ಪಕ್ಷ ಸೋಲಿಸಲು, ನಮ್ಮ ಸಮಾಜದವರು ಮುಸ್ಲಿಂ ಸಮಾಜದ 12 ಜನ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಹೇಳಿದರು. ಹೆಗಡೆ ನಗರ ಸ್ಥಳಾಂತರಿಸಿ, ಅಲ್ಲಿದ್ದ ನಿವಾಸಿಗಳ ಬದುಕನ್ನು ಅತಂತ್ರ ಸ್ಥಿತಿಗೆ ತಂದಿದ್ದಾರೆ. ಆದ್ದರಿಂದ ಎಲ್ಲರೂ 12 ಜನ ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರಿಗಾದರೂ ತಪ್ಪದೇ ಮತ ಹಾಕುವಂತೆ ಮನವಿ ಮಾಡಿದರು.
ಈ ವೇಳೆ ಸುಭಾನ್ ಸಾಬ್, ಸಲಿಂ, ಫರ್ವೇಜ್, ರಶೀದ್ ಖಾನ್ ಸುದ್ದಿಗೋಷ್ಠಿಯಲ್ಲಿದ್ದರು.