ಮಲೇಬೆನ್ನೂರು, ಫೆ.6- ಸೌಹಾರ್ದತೆ ಸಾರುವ ಪಟ್ಟಣದ ಪ್ರಸಿದ್ಧ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ ಮತ್ತು ಉರುಸು ಅಂಗವಾಗಿ ಗುರುವಾರ ರಾತ್ರಿ ದರ್ಗಾ ಆವರಣದಲ್ಲಿ ಹಮ್ಮಿಕೊಂಡಿದ್ದ ಖವ್ವಾಲಿ ಕಾರ್ಯಕ್ರಮವನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು.
ಹರಿಹರ, ದಾವಣಗೆರೆ, ರಾಣೇಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಹಾವೇರಿ, ಹೊನ್ನಾಳಿ, ಚನ್ನಗಿರಿ, ಬಸವಾಪಟ್ಟಣ, ಸಾಸ್ವೆಹಳ್ಳಿ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ದೂರದ ಊರುಗಳಿಂದ ಜನ ದಾಖಲೆ ಸಂಖ್ಯೆಯಲ್ಲಿ ಮಲೇಬೆನ್ನೂರಿಗೆ ಆಗಮಿಸಿದ್ದರಿಂದ ದರ್ಗಾ ಆವರಣ ಜನರಿಂದ ತುಂಬಿ ತುಳುಕುತ್ತಿತ್ತು. ಗಾಯಕರಾದ ಮುಂಬಯಿಯ ಆಜೀಮ್ ಮತ್ತು ಜುನೇದ್ ಸುಲ್ತಾನಿ ಇವರ ಖವ್ವಾಲಿ ಜನಮನ ಸೆಳೆಯಿತು. ಇವರ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಕರು ನೋಟಿನ ಸುರಿಮಳೆ ಸುರಿಸಿ ಖುಷಿಪಟ್ಟರು.
ಖವ್ವಾಲಿ ನೋಡಲು ಜನ ತಡರಾತ್ರಿ 1 ಗಂಟೆವರೆಗೂ ಕಾರು, ಆಟೋಗಳಲ್ಲಿ ಆಗಮಿಸುತ್ತಲೇ ಇದ್ದರು. ಇದರಿಂದಾಗಿ ಪಟ್ಟಣದ ಹೆದ್ದಾರಿ ಉದ್ದಕ್ಕೂ ಮತ್ತು ಬಸ್ ನಿಲ್ದಾಣ, ನಂದಿಗುಡಿ ರಸ್ತೆ, ನಿಟ್ಟೂರು ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಾವಿರಾರು ವಾಹನಗಳು ನಿಂತಿದ್ದವು.
ಮಾಜಿ ಶಾಸಕ ಎಸ್ ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಇನ್ನೂ ಅನೇಕರು ದರ್ಗಾಕ್ಕೆ ಆಗಮಿಸಿ, ಚಾದರ ಹೊದಿಸಿ ಭಕ್ತಿ ಸಮರ್ಪಿಸಿದರು. ಗುರುವಾರ ಇಡೀ ದಿನ ಭಕ್ತರು ದರ್ಗಾಕ್ಕೆ ಆಗಮಿಸಿ, ಪ್ರಸಾದ ನೈವೇದಿಸಿ ಭಕ್ತಿ ಸಲ್ಲಿಸಿದರು.
ನ್ಯಾಯಾಧೀಶರಾದ ತಾಜ್ ಉದ್ದಿನ್, ದಾವಣಗೆರೆ ಮೇಯರ್ ಚಮನ್ ಸಾಬ್, ಪುರಸಭೆ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಪಿಎಸಿಎಸ್ ಅಧ್ಯಕ್ಷ ಕೆ.ಪಿ.ಗಂಗಾಧರ್, ಮುಖಂಡರಾದ ಎಂ.ಬಿ.ಸಜ್ಜು, ಸೈಯದ್ ಜಾಕೀರ್, ಬಾಷಾ ಸಾಬ್, ಖುದ್ದೂಸ್, ಅಯೂಬ್ ಖಾನ್, ಹಬೀಬ್ ಖಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಟಿ.ಹೆಚ್.ಓ ಡಾ. ಖಾದರ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಅಧ್ಯಕ್ಷ ಕೆ.ಅಬ್ದುಲ್ ರೆಹಮಾನ್, ರೈಸ್ ಮಿಲ್ ಮಾಲೀಕ ಎನ್.ಕೆ.ಬಸವರಾಜ್, ಪುರಸಭೆ ಸದಸ್ಯರಾದ ಖಲೀಲ್, ಸಾಬೀರ್ ಅಲಿ, ನಯಾಜ್, ದಾದಾಪೀರ್, ಷಾ ಅಬ್ರಾರ್, ಭೋವಿ ಶಿವು, ಗೌಡ್ರ ಮಂಜಣ್ಣ, ಬಿ.ವೀರಯ್ಯ, ಎ.ಆರೀಫ್ ಅಲಿ, ಬುಡ್ಡವ್ವರ ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಎಂ.ಬಿ.ರುಸ್ತುಮ್, ಚಮನ್ ಷಾ, ಅನ್ವರ್ ಸಾಬ್, ಜಮೀರ್ ಭಾಷಾ, ಭೋವಿ ಕುಮಾರ್, ಪಿ.ಹೆಚ್.ಶಿವಕುಮಾರ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಯುನೂಸ್, ಕುಂಬಳೂರು ವಾಸು, ತಿಪ್ಪೇಶ್, ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್, ಪತ್ರಕರ್ತ ಸಿಕಂದರ್ ಸೇರಿದಂತೆ ಇನ್ನೂ ಅನೇಕರು ಈ ದಿನ ಭಾಗವಹಿಸಿದ್ದರು.
ಸುನ್ನಿ ಜಾಮೀಯಾ ಮಸೀದಿಯ ಅಧ್ಯಕ್ಷ ಎಂ.ಬಿ. ಮಹ್ಮದ್ ಹಾಷಮ್, ಉಪಾಧ್ಯಕ್ಷ ಸೈಯದ್ ಸಾಬೀರ್, ಕಾರ್ಯದರ್ಶಿ ದಾದಾವಲಿ, ಖಜಾಂಚಿ ಯೂಸೂಫ್ ಖಾನ್, ಸೈಯದ್ ಖಾಲಿದ್ ಸೇರಿದಂತೆ ಕಮಿಟಿಯ ಇತರೆ ಪದಾಧಿಕಾರಿಗಳು ಹಾಜರಿದ್ದು, ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನೆ ನೇತೃತ್ವದಲ್ಲಿ ನೂರಾರು ಪೊಲೀಸರು ವಾಹನಗಳ ಹಾಗೂ ಜನರ ನಿಯಂತ್ರಣಕ್ಕೆ ಹರಸಾಹಸಪಟ್ಟರು.