ದಾವಣಗೆರೆ, ಏ. 23- ನಗರದ ಲಲಿತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಿಂದ ಒಟ್ಟು 105 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 51 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 48 ವಿದ್ಯಾರ್ಥಿಗಳು ಪ್ರಥಮ ದರ್ಜೆ, 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗೆಯೇ ಶೇ. 95 ಕ್ಕಿಂತ ಹೆಚ್ಚು 9 ವಿದ್ಯಾರ್ಥಿಗಳು ಮತ್ತು ಶೇ. 90ಕ್ಕಿಂತ ಹೆಚ್ಚು 18 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸತ್ಯವತಿ ಎಸ್. (584) ಸ್ವಾಲಿಹಾ ಎಂ. (582) ಕವನ ಕೆ.ಜಿ. (579) ಮಂಜುನಾಥ್ ಎಂ.ಸಿ. (579) ಮಲ್ಲಿಕಾರ್ಜುನ್ ಜಿ.ಎಚ್. (577) ಮತ್ತು ವಾಣಿಜ್ಯ ವಿಭಾಗದಲ್ಲಿ ಕೆ.ಪಿ. ಚಂದನ (578), ಗೌಸಿಯಾ ಆರ್. (576) ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾರೆ.
ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ : ಸಂಸ್ಥೆ ವತಿಯಿಂದ ಪ್ರತಿ ವರ್ಷ ಶಾಲಾ ಮತ್ತು ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಶೇ. 96ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 10 ಗ್ರಾಂ ಬಂಗಾರದ ಪದಕ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಪ್ರಸ್ತುತ 2023-24ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಿಂದ ಐದು ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದದಿಂದ ಒಬ್ಬ ವಿದ್ಯಾರ್ಥಿ ಒಟ್ಟು ಆರು ವಿದ್ಯಾರ್ಥಿಗಳು 10 ಗ್ರಾಂ ಬಂಗಾರದ ಪದಕ ಮತ್ತು ಸ್ಮರಣಿಕೆಗೆ ಭಾಜನರಾಗಿರುವುದನ್ನು ಕಂಡು ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಇ.ಆರ್, ಕಾರ್ಯದರ್ಶಿ ಡಾ. ಎಂ.ಇ. ರವಿರಾಜ ಮತ್ತು ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.