ಹರಿಹರ, ಏ.18- ನಗರದ ಟಿ.ಬಿ. ರಸ್ತೆ, ಹೊಸಭರಂಪುರ ಬಡಾವಣೆಯ 1, 2, 3ನೇ ಕ್ರಾಸ್, ಹಳೇಭರಂಪುರ ಕಣದ ರಸ್ತೆ ಸೇರಿದಂತೆ ಇತರೆಡೆ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ದುರಸ್ತಿಗೆ ಯಾವುದೇ ರೀತಿಯ ಕಬ್ಬಿಣವನ್ನು ಹಾಕದೇ ಮತ್ತು ಹಳೆಯ ರಸ್ತೆಯನ್ನು ಚಿಪ್ಪಿಂಗ್ ಕೂಡ ಮಾಡದೇ ಕೇವಲ ರಸ್ತೆಗೆ ಕಾಂಕ್ರೀಟ್ ಹಾಕುತ್ತಾ ರಸ್ತೆ ದುರಸ್ತಿ ಮಾಡುವ ಮೂಲಕ ಕಳಪೆ ಗುಣಮಟ್ಟದ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ದುರಸ್ತಿ ಪಡಿಸಿದ ರಸ್ತೆಗೆ ಯಾವುದೇ ರೀತಿಯ ನೀರೂ ಸಹ ಸರಿಯಾಗಿ ಹಾಕದೇ ಒಂದು ಕಡೆ ಅಗಲ ಹೆಚ್ಚು ಮತ್ತೊಂದು ಕಡೆಯಲ್ಲಿ ಚಿಕ್ಕದಾಗಿ ರಸ್ತೆಯ ಕಾಮಗಾರಿ ಮಾಡಲಾಗುತ್ತಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಕಳಪೆ ಗುಣಮಟ್ಟದ ಕಾಮಗಾರಿ ಪರಿಶೀಲನೆ ನಡೆಸಿ, ಗುಣಮಟ್ಟದ ಕಾಮಗಾರಿ ಆಗುವಂತೆ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಆಗ್ರಹಿಸಿದರು.