ಎಲೆಬೇತೂರಿನಲ್ಲಿ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ರಥೋತ್ಸವ

ಎಲೆಬೇತೂರಿನಲ್ಲಿ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ರಥೋತ್ಸವ

ದಾವಣಗೆರೆ, ಏ. 18 – ಎಲೆಬೇತೂರು ಗ್ರಾಮದಲ್ಲಿ  ಸಂಜೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಯ ರಥೋತ್ಸವ ಭಕ್ತರ, ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿ ಬಾಳೆ ಕಂಬ, ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದಿಂದ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ಬಂದು ರಥೋತ್ಸವದ ಮೂರು ಸುತ್ತು ಪ್ರದಕ್ಷಣೆ ಹಾಕಿ, ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿ ರಥವನ್ನು ಏರುತ್ತಿದ್ದಂತೆಯೇ ಭಕ್ತರು ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿಗೆ ಜೈ ಎಂದು ಜೈಕಾರ ಹಾಕಿದರು. 

ಹೋಳಿಗೆ ಎಡೆ ಹಾಕಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ ನಂತರ ಸ್ವಾಮಿಯ ಪಟ ಹರಾಜು ನಡೆದು 34,000 ಸಾವಿರ ರೂ.ಗಳಿಗೆ ಬುಡ್ನಾರಪ್ಳ ನಾರಪ್ಪ ಹರಾಜಿನಲ್ಲಿ ಕೂಗಿ ಪಟವನ್ನು ತಮ್ಮದಾಗಿಸಿಕೊಂಡರು. ನಂತರ ಭಕ್ತರು ರಥೋತ್ಸವದ ಗಾಲಿಗೆ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ರಥ ಚಲಿಸುತ್ತಿದ್ದಂತೆಯೇ ಬೀದಿ ಬಳಿ ನಿಂತಿದ್ದ ಭಕ್ತರು ಕೈಮುಗಿದು, ಭಕ್ತಿ ಸಮರ್ಪಿಸಿದರು.

error: Content is protected !!