ನಾಲ್ಕು ವರ್ಷದ ಪದವಿ ಹೇರಿಕೆ ವಿದ್ಯಾರ್ಥಿಗಳಿಗಾದ ಅನ್ಯಾಯ

ದಾವಣಗೆರೆ, ಮಾ. 25- ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎನ್‌ಇಪಿ-2020ನ್ನು ಹಿಂಪಡೆಯುವುದಾಗಿ ಘೋಷಿಸಿತು. ಆದರೆ ಈಗ ನಾಲ್ಕು ವರ್ಷದ ಪದವಿಗೆ ಸಂಬಂ ಧಿಸಿದಂತಹ ಸಂದೇಶಗಳನ್ನು ಯುಯುಸಿ ಎಂಎಸ್ ಪೋರ್ಟಲ್ ಮುಖಾಂತರ ವಿದ್ಯಾರ್ಥಿ ಗಳಿಗೆ ಕಳುಹಿಸಲಾಗಿದೆ. ಅಂತಿಮ ವರ್ಷದ ಪದವಿ ಮುಗಿಸಲಿರುವ ವಿದ್ಯಾರ್ಥಿಗಳ ಮೇಲೆ ಸಿಡಿಲಿನಂತೆ ಎರಗಿರುವ ಈ ಸಂದೇಶ ಅವರನ್ನು ಆತಂಕಕ್ಕೆ ತಳ್ಳಿದೆ ಎಂದು ಎಐಡಿ ಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.

ಸರ್ಕಾರವು ನಾಲ್ಕು ವರ್ಷದ ಪದವಿ ಅನುಷ್ಠಾನಕ್ಕೆ ಮುಂದಾಗಿರುವುದು ಖಚಿತ ವಾಗುತ್ತಿದೆ. ಸರ್ಕಾರದ ಈ ನಡೆಯು ವಿದ್ಯಾ ರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ. ಇದು ವಿದ್ಯಾರ್ಥಿಗಳಿಗಾದ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಈ ರೀತಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡ ಬಾರದು ಮತ್ತು ಕೂಡಲೇ ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯ ಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಎನ್‌ಇಪಿ-2020 ರ ವಿರುದ್ಧ ರಾಜ್ಯದಲ್ಲಿ ನಡೆದ ಹೋರಾಟದಂತೆ, ನಾಲ್ಕು ವರ್ಷದ ಪದವಿ ಹೇರಿಕೆ ವಿರುದ್ಧ ಬೃಹತ್ ವಿದ್ಯಾರ್ಥಿ ಚಳವಳಿ ಭುಗಿಲೇಳುವುದಾಗಿ ರಾಜ್ಯದ ವಿದ್ಯಾರ್ಥಿಗಳ ಪರ ವಾಗಿ ಎಐಡಿಎಸ್‌ಓ ರಾಜ್ಯ ಕಾರ್ಯ ದರ್ಶಿ ಅಜಯ್ ಕಾಮತ್ ಎಚ್ಚರಿಸಿದ್ದಾರೆ. 

error: Content is protected !!