ಹರಿಹರದಲ್ಲಿ ರಂಗು-ರಂಗಿನ ಹೋಳಿ

ಹರಿಹರದಲ್ಲಿ ರಂಗು-ರಂಗಿನ ಹೋಳಿ

ಹರಿಹರ, ಮಾ.25- ನಗರದಲ್ಲಿ ರಂಗು ರಂಗಿನ ಹೋಳಿ ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸಲಾಯಿತು.

ನಿನ್ನೆ ರಾತ್ರಿ  ನಗರದ ವಿವಿಧ ಬಡಾವಣೆಯಲ್ಲಿ ಕಾಮದಹನ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು.  ವಿವಿಧ ಬಡಾವಣೆಗಳಲ್ಲಿ ಯುವಕ-ಯುವತಿಯರು ಬಣ್ಣವನ್ನು ಮುಖಕ್ಕೆ ಹಚ್ಚುವುದರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು. ನಡವಲಪೇಟೆ ಯುವಕ ಸಂಘ, ಹೊಸಭರಂಪುರ ಬಡಾವಣೆ ಯುವಕ ಸಂಘ, ಕೋಟೆ ಬಡಾವಣೆ ಯುವಕ ಸಂಘ ಇತರೆ ಕಡೆಗಳಲ್ಲಿ  ಡಿ.ಜೆ. ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಿ ತಾಳಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹಾಕುತ್ತಾ ಹೋಳಿ ಹಬ್ಬದ ಸಡಗರವನ್ನು ಸಂಭ್ರಮಿಸಿದರು.

ಯುವಕರು ಮರಕ್ಕೆ ನೇತು ಹಾಕಲಾಗಿದ್ದ ಮಡಿಕೆ ಒಡೆದು ಸಾಹಸ ಪ್ರದರ್ಶಿಸಿದರು. ತಲೆಗೆ ಮೊಟ್ಟೆ ಹೊಡೆದುಕೊಳ್ಳುತ್ತಾ, ಧರಿಸಿದ ಅಂಗಿಯನ್ನು ಹರಿದುಕೊಂಡು ಕೇಕೆ ಹಾಕಿದರು. ಬೇರೆ ಬೇರೆೆ ಕಡೆ ಇರುವ ಗೆಳೆಯರಿಗೆ, ಯುವಕರು ಮತ್ತು ಯುವತಿಯರು ಬೈಕ್ ಮೇಲೆ ತಂಡೋಪ ತಂಡವಾಗಿ ತೆರಳಿ ಬಣ್ಣವನ್ನು ಹಚ್ಚಿದರು.  ಎಸ್.ಎಸ್.ಎಲ್.ಸಿ‌ ಪರೀಕ್ಷೆ ಇದ್ದ ಪರಿಣಾಮ ಹಲವಾರು ಕಡೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದು ಕಂಡುಬಂದಿತು. 

error: Content is protected !!