ಕುಂಬಳೂರಿನಲ್ಲಿ ನಾಳೆ ಹನುಮಂತ ದೇವರ ರಥೋತ್ಸವ

ಕುಂಬಳೂರಿನಲ್ಲಿ ನಾಳೆ  ಹನುಮಂತ ದೇವರ ರಥೋತ್ಸವ

ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ಇದೇ ದಿನಾಂಕ 27ರ ಬುಧವಾರ ಜರುಗಲಿದೆ. 

ಇಂದು ಬೆಳಿಗ್ಗೆ 8.30ಕ್ಕೆ ಆನೆ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ. ಭಕ್ತಾದಿಗಳಿಂದ ಹರಕೆ, ಬಾಯಿಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ಸೇರಿದಂತೆ ವಿವಿಧ ಹರಕೆಗಳು ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ. ದಿನಾಂಕ 27 ಬುಧವಾರ ಬೆಳಗಿನ ಜಾವ 5 ಗಂಟೆಗೆ ಸ್ವಾಮಿಯ `ಮಹಾರಥೋತ್ಸವವು’ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ ದೇವರುಗಳೊಡಗೂಡಿ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಶ್ರೀ ಸ್ವಾಮಿಯ ಬೇಟೆ ಆಡಿ ಬರುವುದಕ್ಕೆ ಹೋಗುವುದು, ನಂತರ 11.30ರವರೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದ್ದು, ಅನ್ನ ಸಂತರ್ಪಣೆ ನಡೆಯಲಿದೆ. 

error: Content is protected !!