ಮಲೇಬೆನ್ನೂರು, ಮೇ 12- ಪಟ್ಟಣದ ಜಿಗಳಿ ರಸ್ತೆಯ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಗೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಸಂಸ್ಥೆಯ ಪ್ರಾಚಾರ್ಯೆ ಜಿ.ಓ ಸುಜಾತ ತಿಳಿಸಿದ್ದಾರೆ.
ಪರೀಕ್ಷೆ ಎದುರಿಸಿದ 21 ವಿದ್ಯಾರ್ಥಿಗಳ ಪೈಕಿ 5 ಮಕ್ಕಳು ಡಿಸ್ಟಿಂಕ್ಷನ್, 11 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದು, ಸಿ. ಪ್ರಿಯದರ್ಶಿನಿ 575 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಂ.ಎಂ. ತೇಜಸ್ವಿನಿ (ಶೇ.91.36), ಕೃಪಾ ಪಾಟೀಲ್ (ಶೇ.91.04), ರುಮಾನಾ ಫರ್ಜಿನ್ (ಶೇ.86.08), ಸುನಿಧಿ ಏ. ಆರ್ (ಶೇ.82) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೃಪಾ ಪಾಟೀಲ್ ಸಮಾಜ ವಿಜ್ಞಾನದಲ್ಲಿ 100 ಕ್ಕೆ 100, ಎಂ.ಎಂ. ತೇಜಸ್ವಿನಿ ಕನ್ನಡದಲ್ಲಿ 125 ಕ್ಕೆ 124 ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯು ಮೆಚ್ಚುಗೆ ವ್ಯಕ್ತಪಡಿಸಿದೆ.