ದಾವಣಗೆರೆ, ಮೇ 13- ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದ 10ನೇ ತರಗತಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಶಾಲೆಗೆ ಶೇ.100ರ ಫಲಿತಾಂಶ ಲಭಿಸಿದೆ.
ಶಾಲೆಯ 20 ಮಕ್ಕಳು ಅತ್ಯುನ್ನತ ಶ್ರೇಣಿ, 55 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಪ್ರೊಫೆಸರ್ ಡಿ. ರವಿಕುಮಾರ್ ಮತ್ತು ವಿ.ಸಿ ಉಷಾ ಅವರ ಪುತ್ರ ಆರ್. ಧ್ರುವ ಕುಮಾರ್ ರೆಡ್ಡಿ 500ಕ್ಕೆ 474 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಚ್.ಎಂ. ತೇಜಸ್ವಿನಿ (460), ಎನ್. ಲಕ್ಷ್ಮೀ 458 ಅಂಕ ಪಡೆದ ಇವರು ಮೊದಲ ಮೂರು ಸ್ಥಾನ ಗಳಿಸಿದ್ದಾರೆ.