ದಾವಣಗೆರೆ, ಮಾ.7- ನಮನ ಅಕಾಡೆಮಿಯಿಂದ ನಾಳೆ ದಿನಾಂಕ 8ರ ಶುಕ್ರವಾರ ನಡೆಯಲಿರುವ ಶಿವರಾತ್ರಿ ಹಬ್ಬದಂದು ವಿದುಷಿ ಮಾಧವಿ ಡಿ.ಕೆ. ಹಾಗೂ ಅವರ ಶಿಷ್ಯಂದಿರಿಂದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮನ ಅಕಾಡೆಮಿ ಉಪಾಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ 9.30ಕ್ಕೆ ರಿಂಗ್ ರಸ್ತೆಯಲ್ಲಿರುವ ಶ್ರೀ ಶಾರದಾ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ್ ಭಾಗವಹಿಸಲಿದ್ದಾರೆ. ಅಕಾಡೆಮಿಯ ಗೌರವಾಧ್ಯಕ್ಷ ಡಾ.ಎ.ಎಂ. ಶಿವಕುಮಾರ್, ಆರ್.ಎಲ್. ನಾಗಭೂಷಣ್ ಉಪಸ್ಥಿತರಿರಲಿದ್ದಾರೆ ಎಂದರು.
ರಾತ್ರಿ 11 ಕ್ಕೆ ಜಯದೇವ ವೃತ್ತದಲ್ಲಿರುವ ಶಂಕರ ಮಠದಲ್ಲಿ, ರಾತ್ರಿ 12.30ಕ್ಕೆ ಶ್ರೀ ಲಿಂಗೇಶ್ವರ ದೇವಸ್ಥಾನ ಹಾಗೂ ರಾತ್ರಿ 2 ಗಂಟೆಗೆ ವಿದ್ಯಾನಗರದ ಶ್ರೀ ಶಿವ ಪಾರ್ವತಿ ದೇವಸ್ಥಾನದಲ್ಲಿ ನೃತ್ಯ ಸೇವೆ ಮಾಡುವ ಮೂಲಕ ಶಿವನಿಗೆ ನೃತ್ಯ ಜಾಗರಣೆ ಸಮರ್ಪಿಸಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ ಕೆ.ಎನ್., ಅಕಾಡೆಮಿಯ ಗುರುಗಳಾದ ವಿದುಷಿ ಡಿ.ಕೆ. ಮಾಧವಿ, ವಿದ್ಯಾರ್ಥಿಗಳಾದ ನೀಲು ಅರೋರ್, ಕು.ಋತು ಹಿರೇಮಠ್, ಸಂಜನ ಉಪಸ್ಥಿತರಿದ್ದರು.